- Advertisement -
ಕಲಬುರಗಿ: ಮೈತ್ರಿಯಿಂದ ಪ್ಲಸ್ ಗಿಂತ ಮೈನಸ್ ಹೆಚ್ಚಾಗ್ತಿದೆ ಅನ್ನೋ ಕೆ.ಆರ್ ಪೇಟೆ ಶಾಸಕ ನಾರಾಯಣಗೌಡ ಹೇಳಿಕೆಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ನಾವೇನು ನಾರಾಯಣಗೌಡನನ್ನ ಕೇಳಿಕೊಂಡು ಮೈತ್ರಿ ಮಾಡಿಕೊಂಡಿಲ್ಲ. ಅವನ ಮಾತಿಗೆಲ್ಲಾ ನಾವು ಬೆಲೆ ಕೊಡೋಕ್ಕಾಗಲ್ಲಾ ರೀ. ಹೈಕಮಾಂಡ್ ತೀರ್ಮಾನದಂತೆ ಸರ್ಕಾರ ರಚಿಸಿದ್ದೀವಿ ಅಂತ ಪ್ರತಿಕ್ರಿಯಿಸಿದ್ರು.
ಇನ್ನು ಪದೇ ಪದೇ ಮೈತ್ರಿ ಸರ್ಕಾರ ಪತನವಾಗುತ್ತೆ ಅಂತ ಟೀಕಿಸೋ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಮಾತನಾಡಿದ ಸಿದ್ದು, ಮಿಸ್ಟರ್ ಯಡಿಯೂರಪ್ಪ.. ನಿನ್ನಿಂದ ಸರ್ಕಾರ ಬೀಳಿಸೋಕ್ಕಾಗಲ್ಲ ಅಂತ ತಿರುಗೇಟು ನೀಡಿದ್ರು.
- Advertisement -

