ನವದೆಹಲಿ: ಪಾಕಿಸ್ತಾನ ಕಡೆಯಿಂದ ಭಾರತೀಯಗಡಿ ಮೀರಿ ದಾರಿತಪ್ಪಿ ಬಂದ ಸರಕು ಸಾಗಾಣಿಕಾ ವಿಮಾನವನ್ನು ಭಾರತೀಯ ಸೇನಾಪಡೆ ತುರ್ತು ಲ್ಯಾಂಡಿಂಗ್ ಮಾಡಿಸಿದೆ.
ನಿನ್ನೆ ಮಧ್ಯಹ್ನ ಜಾರ್ಜಿಯಾದ ಆಂಟೊನೋವ್ ಎನ್-12 ಸರಕು ವಿಮಾನವು ಏಕಾಏಕಿ ಪಾಕಿಸ್ತಾನದ ಕರಾಚಿಯಿಂದ ಗುಜರಾತ್ ಮೂಲಕ ಭಾರತೀಯ ಗಡಿ ಪ್ರವೇಶಿಸಿದೆ. ಇದನ್ನು ಗಮನಿಸಿದ ಭಾರತೀಯ ವಾಯುಪಡೆ ಕೂಡಲೇ 2 ಸುಖೋಯ್-30 ಯುದ್ಧ ವಿಮಾನಗಳಲ್ಲಿ ಬೆನ್ನಟ್ಟಿದವು. ಇದರಿಂದ ಗಲಿಬಿಲಿಗೊಂಡ ಜಾರ್ಜಿಯಾ ವಿಮಾನದ ಪೈಲಟ್ ಕೂಡಲೇ ಭಾರತೀಯ ವಾಯುಪಡೆ ಪೈಲಟ್ ಗಳ ರೇಡಿಯೋ ಕರೆಯನ್ನೂ ಸ್ವೀಕರಿಸಲಿಲ್ಲ. ನಿಗದಿತ ಮಾರ್ಗದಲ್ಲಿ ಸಂಚರಿಸೋ ಬದಲು ಪೈಲಟ್ ಬದಲಿ ಮಾರ್ಗ ಅನುಸರಿಸದೆ ಭಾರತೀಯ ವಾಯುಸೇನೆಗೆ ತಿಳಿದುಬಂತು. ಇನ್ನು ಕೆಲ ನಿಮಿಷಗಳ ನಂತರ ಭಾರತೀಯ ವಾಯುಸೇನೆ ಸೂಚನೆಯಂತೆ ಜಾರ್ಜಿಯಾ ವಿಮಾನವು ಜೈಪುರದಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯ್ತು. ಇನ್ನು ಈ ಬಗ್ಗೆ ವಿಚಾರಣೆ ನಡೆಸಿದ ಭಾರತೀಯ ವಾಯುಸೇನಾಧಿಕಾರಿಗಳು ಕೆಲ ಹೊತ್ತಿನ ಬಳಿಕ ಆಂಟೊನೋವಾ ಗೂಡ್ಸ್ ವಿಮಾನನ್ನು ಬಿಡುಗಡೆ ಮಾಡಿ ಕಳುಹಿಸಿದರು ಎನ್ನಲಾಗಿದೆ.
ಬಾಲಾಕೋಟ್ ಏರ್ ಸ್ಟ್ರೈಕ್ ನಂತರ ಪಾಕ್ ಈಗಾಗಲೇ ಸೇಡಿಗೆ ಸಂಚುಹಾಕುತ್ತಿದ್ದು ವಾಯುಸೇನಾಧಿಕಾರಿಗಳು ಮತ್ತಷ್ಟು ಅಲರ್ಟ್ ಆಗಿ ದೇಶದ ಗಡಿ ಕಾಯುತ್ತಿದ್ದಾರೆ.