ತಪ್ಪಿಗೆ ತನಗೇ ಅರಿವಿಲ್ಲದೇ ಚಿತ್ರದ ನಾಯಕ ಊರು ಬಿಟ್ಟು ಮತ್ತೊಂದು ಊರು ಸೇರುತ್ತಾರೆ. ಪಂಜರದ ಗಿಳಿಯಂತೆ ನಾಲ್ಕು ಗೋಡೆಗಳ ಮಧ್ಯೆ ಆಂತರಿಕ ಸಮಸ್ಯೆಗಳಿಂದ ಮಾನಸಿಕ ಖಿನ್ನತೆ ಅನುಭವಿಸೋ ನಾಯಕಿ. ಇವರಿಬ್ಬರೂ ಆಕಸ್ಮಿಕವಾಗಿ ಪರಿಚಯವಾಗಿ ಇವರಿಬ್ಬರ ನಡುವೆ ಸಂಬಂಧದ ಸೇತುವೆಗೆ ಸೂಚಿದಾರ ಹೊಲಿಗೆ ಹಾಕುತ್ತೆ.
ನಾಯಕಿಯಾಗಿ ಹರಿಪ್ರಿಯ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದು, ನಾಯಕನ ಪಾತ್ರದಲ್ಲಿ ಯಶವಂತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಕಥೆಯಲ್ಲಿ ನಾಯಕ ನಾಯಕಿ ಪಾತ್ರಗಳಿಗೆ ಆರಂಭದಲ್ಲೇ ಟಚ್ ಇದ್ರೂ ಅಪರಿಚಿತರಾಗಿಯೇ ಬದುಕಿನ ಕೊಂಡಿ ತಿರುವು ಪಡೆದು ಕ್ಯೂರಿಯಾಸಿಟಿ ಮೂಡಿಸೋದ್ರಲ್ಲಿ ನಿರ್ದೇಶಕ ಮೌನೇಶ್ ಬಡಿಗೇರ್ ಯಶಸ್ವಿಯಾಗಿದ್ದಾರೆ.
ಇಡೀ ಸಿನಿಮಾದಲ್ಲಿ ಹರಿಪ್ರಿಯಾ ಯಾರು ಅನ್ನೋ ಪ್ರಶ್ನೆ ಕಾಡುತ್ತೆ, ಅಂತಿಮವಾಗಿ ಆ ಒಂದು ಹಾಡು ಆ ಒಂದು ಟ್ಯಾಟೂ ಮೂಲಕ ತನ್ನ ಜೀವನ ಇಷ್ಟೊಂದು ತಿರುವು ಪಡೆಯಲು ಕಾರಣ ಅನ್ನೋ ಸತ್ಯ ನಾಯಕನಿಗೆ ತಿಳಿಯುತ್ತೆ. ಎಲ್ಲೋ ಇದ್ದ ಹರಿಪ್ರಿಯಾ ಪಾತ್ರ ಆ ಪಟ್ಟಣಕ್ಕೆ ಹೇಗೆ ಹೋಯ್ತು ಅನ್ನೋ ಕುತುಹೂಲ ಕಡೆತನಕ ಕಾಡುತ್ತೆ.
ಇನ್ನೂ ಈ ಸಿನಿಮಾದಲ್ಲಿ ಮತ್ತೊಂದು ನಾಯಕಿಯ ಪಾತ್ರಕ್ಕೆ ಜೀವ ತುಂಬಿದ್ದು ಹೊಸ ಪ್ರತಿಭೆ ಚೈತ್ರಾ ಕೋಟೂರು. ನಟಿಯಾಗ್ಬೇಕು ಅಂತಾ ಸಿಕ್ಕಾಪಟ್ಟೆ ಕನಸು ಕಾಣೋ ಇವ್ರು ಕೊನೆಗೆ ನಟಿಯಾಗ್ತಾರಾ ಅನ್ನೋದು ಕ್ಯೂರಿಯಾಸಿಟಿ ಮೂಡಿಸುತ್ತೆ. ಇನ್ನು ಚಿತ್ರದಲ್ಲಿ ಸೈಲೆಂಟ್ ಆಗಿ ಎಂಟ್ರಿ ಕೊಡೊ ಪದ್ಮಶ್ರೀ ಪ್ರಶಸ್ತಿ ಸಿನಿಮಾದ ಆರಂಭ ಮತ್ತು ಅಂತ್ಯಕ್ಕೂ ಕಾರಣವಾಗುತ್ತೆ. ಆದ್ರೆ ಪದ್ಮಶ್ರೀ ಪ್ರಶಸ್ತಿ ಪಡೆದುಕೊಂಡವ್ರನ್ನ ತೆರೆ ಮೇಲೆ ತೋರಿಸೋ ಪ್ರಯತ್ನ ಮಾಡಿದ್ರೆ ಇನ್ನೂ ಚೆನ್ನಾರ್ತಿತ್ತೇನೋ ಅನ್ನೋದು ಪ್ರೇಕ್ಷಕನ ಅನಿಸಿಕೆ. ಪಕ್ಕಾ ದೇಸಿ ಸೊಗಡು ತುಂಬಿರೋ ಈ ಸಿನಿಮಾ ಪೌರಾಣಿಕ ಮತ್ತು ರಂಗಭೂಮಿಯ ಕಡೆ ನಿರ್ದೇಶಕನಿಗಿರೋ ಒಲವನ್ನ ಎತ್ತಿ ತೋರುತ್ತೆ. ಇಲ್ಲಿ ಸೂಜಿ ಯಾರು ದಾರ ಯಾರು ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಕೊನೆತನಕ ಕಾಡುತ್ತೆ.
ಸಿನಿಮಾ ಕ್ಲೈಮ್ಯಾಕ್ಸ್ ನಲ್ಲಿ ಇನ್ನೂ ಸಾಕಷ್ಟು ಸತ್ಯಾಸತ್ಯತೆಗಳನ್ನ ತೋರದೆ ಎಂಡ್ ಆಗುತ್ತೆ. ಹೀಗಾಗಿ ಮತ್ತೊಂದು ಪಾರ್ಟ್ ಬರುತ್ತಾ ಅನ್ನೋ ನಿರೀಕ್ಷೇಯಲ್ಲೇ ಪ್ರೇಕ್ಷಕ ಪ್ರಭು ಥಿಯೇಟರ್ ನಿಂದ ಹೊರಬರುತ್ತಾನೆ. ಒಟ್ಟಾರೆ ಇದೊಂದು ಮನೆಮಂದಿಯೆಲ್ಲಾ ನೋಡೂಬಹುದಾದ ಕೌಟುಂಬಿಕ ಚಿತ್ರವಾಗಿದೆ ಅನ್ನೋದು ಪ್ರೇಕ್ಷಕನ ಅನಿಸಿಕೆ.