Hubballi News: ಹುಬ್ಬಳ್ಳಿ: 75ನೇ ಗಣರಾಜ್ಯೋತ್ಸವದ ಅಂಗವಾಗಿ ಹುಬ್ಬಳ್ಳಿಯ ಈದ್ದಾ ಮೈದಾನದಲ್ಲಿ ನಡೆದ ಧ್ವಜಾರೋಹಣ, ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತ ಈಶ್ವರ್ ಉಳ್ಳಾಗಡ್ಡಿ ಅವರು ಧ್ವಜಾರೋಹಣ ನೆರವೇರಿಸಿದರು.
ಡಾ. ಬಿ.ಆರ್.ಅಂಬೇಡ್ಕರ್ ಹಾಗೂ ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಅಧಿಕಾರಿಗಳು, ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ, ಹು-ಧಾ ಪಾಲಿಕೆ ಮೇಯರ್ ವೀಣಾ ಭಾರಡ್ವಾಡ್ ಸೇರಿ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.
ಇನ್ನು ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಹಿನ್ನೆಲೆಯಲ್ಲಿ, ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿನ ರಾಯಣ್ಣ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಶಾಸಕ ಮಹೇಶ್ ಟೆಂಗಿನಕಾಯಿ ಅವರೊಂದಿಗೆ ಪಾಲಿಕೆ ಮೇಯರ್ ವೀಣಾ ಭಾರಡ್ವಾಡ್, ಆಯುಕ್ತ ಈಶ್ವರ ಉಳ್ಳಾಗಡ್ಡಿ ಸೇರಿದಂತೆ ಮಾಲಾರ್ಪಣೆ ವೇಳೆ ಪಾಲಿಕೆ ಸದಸ್ಯರು ಭಾಗಿಯಾಗಿದ್ದರು.
ಶೆಟ್ಟರ್ ಅವರ ಇತ್ತೀಚಿನ ಬೆಳವಣಿಗೆ ಗಮನಿಸಿದ್ರೆ ಅವರೊಬ್ಬ ಅವಕಾಶವಾದಿ ಅನ್ನಿಸುತ್ತೆ: ಸಂತೋಷ್ ಲಾಡ್
‘ಕಳೆದ ಬಾರಿ ಬಂದಾಗ ಮೊಟ್ಟೆ ಎಸೆದಿದ್ದರು, ಈ ಬಾರಿ ಹೂವಿನ ಸುರಿಮಳೆ ಸುರಿಸಿದ್ದಾರೆ’
‘ಮಾತೆತ್ತಿದರೆ ಮೋದಿಯನ್ನು ನಿಂದಿಸುವ ಸಿದ್ದರಾಮಯ್ಯರದ್ದು ಕೆಲಸದಲ್ಲಿ ಆಮೆ ವೇಗ ಎನ್ನುವುದಕ್ಕೆ ಇದೇ ಸಾಕ್ಷಿ’




