ಹುಬ್ಬಳ್ಳಿ : ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ ಸಾಮಾನ್ಯ ಸಭೆ ಆಯೋಜನೆ ಮಾಡಿದ್ದು ಕಮಿಷನರ್ ಈಶ್ವರ್ ಉಳ್ಳಾಗಡ್ಡಿ ಮೇಯರ್ ವೀಣಾ ಭಾರದ್ವಾಡ್ ನೇತೃತ್ವದಲ್ಲಿ ಸಭೆ ನಡೆಯಿತು.
ಇನ್ನು ಈ ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯ ಹಲವು ಕಾಮಗಾರಿಗಳು, ಯುಜಿಡಿ, ಜೆಟ್ಟಿಂಗ್ ಮಷಿನ್ ಸೇರಿದಂತೆ ಸ್ವಚ್ಚತಾ ಕಾರ್ಯದ ಬಗ್ಗೆ ಚರ್ಚೆ ನಡೆಸಲಾಯಿತು. ಉಣಕಲ್ ಕೆರೆಗೆ ಒಳಚರಂಡಿ ನೀರು ಬರದಂತೆ ತಡೆಯಲು 15 ಕೋಟಿ ವೆಚ್ಚವಾಗಿದೆ ಆದರೂ ಇದುವರೆಗೂ ವ್ಯವಸ್ಥೆ ಸುಧಾರಣೆ ಆಗಿಲ್ಲ ಎಂದು ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಆಕ್ರೋಶ ವ್ಯಕ್ತಪಡಿಸಿದರು.
ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಪರಿವರ್ತನೆ ಮಾಡಬೇಕೆಂದು ಹಲವರು ಬಯಕೆಯಾಗಿದ್ದು ಸ್ಮಾರ್ಟ್ ಸಿಟಿ ಯೋಜನೆಯನ್ನು ಹಸ್ತಾಂತರ ಮಾಡಬೇಕು ಆದರೆ ಇಲ್ಲಿಯವರೆಗೂ ಮಾಡದೆ ವಿಳಂಬ ಮಾಡುತ್ತಿರುವುದಕ್ಕೆ ಪಾಲಕೆ ಸ್ಪಷ್ಟನೆ ನೀಡದೆ ಮೌನ ವಹಿಸಿರುವ ಕಾರಣ ಸಭೆಯಲ್ಲಿ ಗೊಂದಲದ ವಾತಾವರಣ ಆವರಿಸಿತು. ಈ ಕುರಿತು ವಿರೋಧ ಪಕ್ಷದ ಸದಸ್ಯರು ವಾದಿಸಿದರು.
ಕರ್ನಾಟಕದಲ್ಲಿ ಏಕಕಾಲಕ್ಕೆ 75 ಕಡೆ ಲೋಕಾಯುಕ್ತ ದಾಳಿ: ಯಾವೆಲ್ಲಾ ಇಲಾಖೆ ಅಧಿಕಾರಿಗಳ ಮೇಲೆ ರೇಡ್? ಇಲ್ಲಿದೆ ಪಟ್ಟಿ
ಪ್ರತಿಭಾವಂತ ವಿದ್ಯಾರ್ಥಿನಿಗೆ ನೆರವಾದ ಸಂತೋಷ್ ಲಾಡ್ ಜಪಾನ್‌ಗೆ ತೆರಳಲು ಧನಸಹಾಯ
ಭರ್ಜರಿ ಬೇಟೆಯಾಡಿದ ಹುಬ್ಬಳ್ಳಿ ಉಪನಗರ ಪೊಲೀಸರು; ಸ್ಕೂಟರ್ ನಿಂದ ಕಾಣೆಯಾಗಿದ್ದ ಹಣ ಪತ್ತೆ..!