Tuesday, April 30, 2024

Latest Posts

ಮಗುವಿಗೆ ಎದೆ ಹಾಲು ಎಷ್ಟು ಮುಖ್ಯ..? ವೈದ್ಯರೇ ಈ ಬಗ್ಗೆ ವಿವರಿಸಿದ್ದಾರೆ ನೋಡಿ..

- Advertisement -

Health Tips: ಶಿಶುವಿಗೆ ತಾಯಿಯ ಎದೆ ಹಾಲು ಎಷ್ಟು ಮುಖ್ಯ ಅನ್ನೋ ಬಗ್ಗೆ ನಾವು ಈಗಾಗಲೇ ನಿಮಗೆ ತಿಳಿಸಿದ್ದೇವೆ. ಮಗು ಹುಟ್ಟಿದ ಎರಡು ದಿನಗಳವರೆಗೂ ತಾಯಿಯ ಹಾಲು ತಪ್ಪದೇ ಕುಡಿಯಬೇಕು. ಏಕೆಂದರೆ, ಈ ವೇಳೆ ಸಿಗುವ ಹಾಲು, ಅಮೃತಕ್ಕೆ ಸಮಾನ. ಇದರಿಂದಲೇ, ಮಗು ಭವಿಷ್ಯದಲ್ಲಿ ಗಟ್ಟಿಮುಟ್ಟಾಗಿ ಇರಲು ಸಾಧ್ಯ. ಅಲ್ಲದೇ, ಮಗುವಿಗೆ 6 ತಿಂಗಳು ತುಂಬುವ ತನಕ ತಾಯಿಯ ಎದೆ ಹಾಲು ಕುಡಿಯಲೇಬೇಕು. ಈ ಬಗ್ಗೆ ವೈದ್ಯರು ಸಂಪೂರ್ಣವಾಗಿ ವಿವರಿಸಿದ್ದಾರೆ ನೋಡಿ..

ವೈದ್ಯೆಯಾದ ಸಹನಾ ದೇವದಾಸ್ ಅವರು, ತಾಯಿಯ ಹಾಲಿನ ಪ್ರಾಮುಖ್ಯತೆಯನ್ನು ವಿವರಿಸಿದ್ದಾರೆ. ಮಗು ವೆಂಟಿಲೇಟರ್‌ನಲ್ಲೇ ಇರಲಿ, ಐಸಿಯುನಲ್ಲೇ ಇರಲಿ ಅಥವಾ ನಾರ್ಮಲ್ ಆಗಿ, ಆರೋಗ್ಯವಾಗಿಯೇ ಇರಲಿ. ಮಗುವಿಗೆ ತಾಯಿಯ ಹಾಲು ಕುಡಿಸಲೇಬೇಕು ಎನ್ನುತ್ತಾರೆ ವೈದ್ಯರು.

ಏಕೆಂದರೆ ತಾಯಿಯ ಹಾಲೆಂದರೆ, ದೇವರು ಮಾಡಿರುವ ಅಮೃತವಿದ್ದ ಹಾಗೆ. ಮಗು ಹುಟ್ಟಿದ ಒಂದು ಗಂಟೆಯೊಳಗೆ ಮಗುವಿಗೆ ತಾಯಿಯ ಎದೆ ಹಾಲು ಉಣಿಸುವುದು ತುಂಬಾ ಮುಖ್ಯ. ಏಕೆಂದರೆ ಇದನ್ನು ಗೋಲ್ಡನ್ ಅವರ್ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಮಗುವಿನ ದೇಹಕ್ಕೆ ತಾಯಿಯ ಹಾಲು ಸೇರಿದಾಗ, ಅದರ ಆರೋಗ್ಯ ಅತ್ಯುತ್ತಮವಾಗಿ ಅಭಿವೃದ್ಧಿಯಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದಲೇ ಮಗು ಭವಿಷ್ಯದಲ್ಲೂ ಆರೋಗ್ಯವಾಗಿ, ಗಟ್ಟಿಮುಟ್ಟಾಗಿರುತ್ತದೆ.

ನಾಾರ್ಮಲ್ ಡೆಲಿವರಿಯಾದಾಗ, ಮಗುವನ್ನು ತಾಯಿಯ ಎದೆ ಮೇಲೆ ಮಲಗಿಸಿ, ಬಳಿಕ ಹಾಲು ಕುಡಿಸಿಬಿಡಬೇಕು ಎನ್ನುತ್ತಾರೆ ವೈದ್ಯರು. ಇನ್ನು ಸಿಸರಿನ್ ಆದಾಗ, ಅರ್ಧ ಗಂಟೆ ಬಳಿಕ ವಾರ್ಡ್‌ಗೆ ಶಿಫ್ಟ್‌ ಆದ ತಕ್ಷಣ, ಮಗುವಿಗೆ ಹಾಲುಣಿಸಲೇಬೇಕು ಎಂದು ವೈದ್ಯರು ಹೇಳುತ್ತಾರೆ. ಅಲ್ಲದೇ, ಎರಡು ವರ್ಷದವರೆಗೂ ಮಕ್ಕಳ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಹಾಗಾಗಿ 2 ವರ್ಷದವರೆಗೆ ಎದೆ ಹಾಲು ಉಣಿಸುವುದರಿಂದ, ಮಗುವಿನ ಮೆದುಳಿನ ಬೆಳವಣಿಗೆ ಉತ್ತಮವಾಗಿರುತ್ತದೆ.

ಖಾನಾವಳಿ ಶೈಲಿಯ ಬದನೇಕಾಯಿ ಪಲ್ಯ ರೆಸಿಪಿ

ಸೋರಿಯಾಸಿಸ್ ಏಂದರೇನು..? ಈ ಖಾಯಿಲೆ ಏಕೆ ಬರುತ್ತದೆ..?

ಮಲೇರಿಯಾ ಜ್ವರದ ಲಕ್ಷಣಗಳು ಏನೇನು..?

- Advertisement -

Latest Posts

Don't Miss