ಅಂತರಾಷ್ಟ್ರೀಯ ಸುದ್ದಿ: ಕಳ್ಳತನ, ಕೊಲೆ, ದರೋಡೆ, ಕಿರುಕುಳ ನೀಡಿದರೆ ನ್ಯಾಯಾಲಯ ಕಾನೂನಿನ ಅಡಿಯಲ್ಲಿ ಆರೋಪಿಗಳಿಗೆ ಶಿಕ್ಷೆಯನ್ನು ವಿಧಿಸುತ್ತದೆ. ಆದರೆ ಇಲ್ಲಿ ಎಂತಹ ಕಾರಣಕ್ಕೆ ಒಬ್ಬ 64 ರ ವೃದ್ದನಿಗೆ ಎರಡು ವಾರಗಳ ಕಾಲ ಶಿಕ್ಷೆ ನೀಡಿದೆ ಎಂದರೆ ನಿಮಗೆ ನಗು ಬರದೆ ಇರದು.
ತಮಿಳುನಾಡಿನ ಸೆಲ್ವಂ ಎನ್ನುವ 64 ರ ಮುದುಕ ಸಿಂಗಾಪುರದ ಒಂದು ಆಫೀಸಿನಲ್ಲಿ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದರು. ಕೋರೋನಾ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು ಇದರ ಫಲವಾಗಿ ಅವರಿಗೆ ಕೋವಿಡ್ ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಸೊಂಕು ಇರುವುದು ದೃಡಪಟ್ಟಿದೆ.
ಕೊರೋನಾ ಸೊಂಕು ದೃಡಪಟ್ಟರೂ ಮಾಸ್ಕ ಇಲ್ಲದೆ ಕಛೇರಿಯಲ್ಲಿ ಓಡಾಡಿ ಸಹದ್ಯೋಗಿಗಳ ಮುಂದೆ ಕೆಮ್ಮಿ ಅವರಿಗೆ ತೊಂದರೆ ನೀಡಿದ್ದಾನೆ. ಆದರೆ ಅದೃಷ್ಟವಶಾತ್ ಯಾರಿಗೂ ಸೊಂಕು ಹರಡಿಲ್ಲ. ಆದರೆ ಆತನ ಕೃತ್ಯದಿಂದ ನಾವು ಸಂಕಷ್ಟಕ್ಕೆ ಸಿಲುಕಿದ್ದೆವು ಎಂದು ಭಾವಿಸಿ ಪ್ರಕರಣ ದಾಖಲಿಸಿದ್ದೆವು. ಸೆಲ್ವಂ ಮಾಸ್ಕ್ ಇಲ್ಲದೆ ಕೆಮ್ಮಿರುವ ವೀಡಿಯೋ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದರ ಅನುಸಾರ ಸೆಲ್ವಂನನ್ನು ತಪ್ಪಿತಸ್ಥ ಎಂದು ಭಾವಿಸಿ ಎರಡು ವಾರಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ.
ಆದರೆ ಸಿಂಗಾಪುರದ ಕೊರೋನಾ ನಿಯಮಗಳನ್ನು ಉಲ್ಲಂಘನೆಗೆ ಕನಿಷ್ಟ ಆರು ತಿಂಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ಸಿಂಗಾಪುರ ಡಾಲರ್ ಗಳನ್ನು ದಂಡವಾಗಿ ವಿಧಿಸುವ ನಿಬಂಧನೆಗಳಿವೆ ಆದರೆ ಸೆಲ್ವಂ ಅವರು ವಯಸ್ಸನ್ನು ಆಧರಿಸಿ ಶಿಕ್ಷೆಯನ್ನು ಕಡಿಮೆ ಮಾಡಲಾಗಿದೆ ಎಂದು ಹೇಳಿದರು.
Crypto currency; ಚಿಕ್ಕ ವಯಸ್ಸಿಗೆ ಕೋಟಿಗಟ್ಟಲೆ ಹಣ ಕಳೆದುಕೊಂಡ ಯುವಕ..!ಎಷ್ಟು ಗೊತ್ತಾ?
Special Game : ಪಾಕಿಸ್ತಾನದ ಮಹಾ ಕುತಂತ್ರವೇನು..?! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್