Hubli: ಹುಬ್ಬಳ್ಳಿ ವಿದ್ಯಾನಗರ ಪೊಲೀಸರಿಂದ 3 ಜನ ಕೊಲೆ ಆರೋಪಿಗಳ ಮೇಲೆ ಫೈರಿಂಗ್

Hubli: ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ ಠಾಣೆ ವ್ಯಾಪ್ತಿಯ ಗೋಲ್ಡನ್ ಹೈಟ್ ಬಾರ್ ಪಾರ್ಕಿಂಗ್ ಸ್ಥಳದಲ್ಲಿ ಕಳೆದ ದಿನ ಯುವಕನೊಬ್ಬನ‌ ಹತ್ಯೆ ಮಾಡಿ ಪರಾರಿಯಾಗಿದ್ದ 3 ಜನ ಆರೋಪಿಗಳ ಕಾಲಿಗೆ ಪೊಲೀಸರು ಬುಲೆಟ್ ನುಗ್ಗಿಸುವ ಮೂಲಕ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.‌

ಕಳೆದ ದಿನ ಇಂದ್ರಪ್ರಸ್ಥ ನಗರದ ನಿವಾಸಿ ಆಕಾಶ ವಾಲ್ಮೀಕಿ 24 ವರ್ಷ ಯುವಕನ ಹತ್ಯೆ ನಡೆದಿತ್ತು. ‌ಹತ್ಯೆ ಪ್ರಕರಣದ ಬೆನ್ನಬಿದಿದ್ದ ವಿದ್ಯಾನಗರ ಠಾಣೆಯ ಇನ್ಸ್ಪೆಕ್ಟರ್ ಶ್ರೀಮಂತ ಹುಣಸಿಕಟ್ಟಿ, ಪಿಎಸ್‌ಗಳಾದ ಮುತ್ತಪ್ಪಾ ಲಮಾಣಿ, ಶರಗೌಡಾ ಹಾಗೂ ಕಮರಿಪೇಟ್ ಪಿಎಸ್‌ಐ ಸುನೀಲ್ ಪೊಲೀಸ್ ತಂಡ್ ಆರೋಪಿಗಳು ಹುಬ್ಬಳ್ಲಿಯ ಎಂಟಿಎಸ್ ಕಾಲನಿಯಲ್ಲಿರೋ ಕುರಿತು ಖಚಿತ ಮಾಹಿತಿ ಮೇರೆಗೆ ಬಂಧನಕ್ಕೆ ಮುಂದಾಗಿದ್ದಾರು.‌

ಈ ವೇಳೆ ಕೊಲೆ ಆರೋಪಿಗಳಾದ ಹುಬ್ಬಳ್ಳಿಯ ಆನಂದ ನಗರ ನಿವಾಸಿಗಳಾದ ಅಭಿಷೇಕ ಶಿರೂರ,ವಿನೋದ್ ಅಂಬಿಗೇರ್, ಯಲ್ಲಪ್ಪ ಕೋಟಿ ಆರೋಪಿಗಳು ಪೊಲೀಸ್ ಬಂಧನದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದು, ಈ ವೇಳೆ ಪೊಲೀಸರು ಆರೋಪಿಗಳ ಕಾಲಿಗೆ ಫೈರಿಂಗ್ ಮಾಡಿ ಬಂಧನ ಮಾಡಿದ್ದಾರೆ.‌ ಸದ್ಯ ಗುಂಡೇಟು ತಿಂದ ಆರೋಪಿಗಳನ್ನು ಕಿಮ್ಸ ಆಸ್ಪತ್ರೆಗೆ ದಾಖಲು‌ ಮಾಡಿಲಾಗಿದ್ದು, ನಗರ ಪೋಲೀಸ್ ಕಮಿಷನರ್ ಎನ್ ಶಶಿಕುಮಾರ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ‌ ಪಡೆದುಕೊಂಡರು. ‌

ಬಳಿಕ‌ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಹಳೇ ದ್ವೇಷದಿಂದ ನಡೆದಿದೆ. ಈ ಹಿಂದೆ ಹತ್ಯೆಯಾದ ಆಕಾಶ ಹಾಗೂ ಕೊಲೆ ಆರೋಪಿಗಳ ತಂಡದ ನಡುವೆ ಗಲಾಟೆ ನಡದಿತ್ತು. ಆಗ ಸಣ್ಣ ಪ್ರಕರಣ ದಾಖಲಾಗಿ ಕೇಸ್ ಮುಗಿದಿತ್ತು.‌ ಆದರೆ ಇವರುಗಳ ನಡುವೆ ದ್ವೇಷ ಹಾಗೇ ಇದ್ದು, ಆಕಾಶನ ಪೂರ್ವ ನಿಯೋಜಿತವಾಗಿ ತಯಾರಿ ಮಾಡಿಕೊಂಡ ಹತ್ಯೆ ಮಾಡಿದ್ದಾರೆ. ಆರೋಪಿಗಳ ವಿಚಾರಣೆ ನಡೆಸಿ‌ಕಠಿಣ ಶಿಕ್ಷೆ ಕೊಡಿಸುವುದಾಗಿ ಹೇಳಿದರು.‌

About The Author