Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಈಗಾಗಲೇ ಲವ್ ಜಿಹಾದ್ ಕುರಿತಂತೆ, ಹಲವಾರು ಹತ್ಯೆ, ಹತ್ಯೆ ಬೆದರಿಕೆ, ಗಲಾಟೆ ನಡೆದಿದೆ. ಅಲ್ಲದೇ ಈಗಲೂ ಇಂಥ ಘಟನೆ ಮುಂದುವರೆದಿದ್ದು, ನಮ್ಮ ಹೆಲ್ಪ್ ಲೈನ್‌ಗೆ ತುಂಬ ಕರೆ ಬರುತ್ತಿದೆ ಎಂದು ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ದೂರು ಹೇಳಿದೆ.
ಹಾಗಾಗಿ ಇಂದು ಹುಬ್ಬಳ್ಳಿಯ ಜೈನ್ ಕಾಲೇಜ್ ಗೆ ಹೋಗಿ ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ಜಂಟಿಯಾಗಿ, ಕಾಲೇಜಿನ ಪ್ರಿನ್ಸಿಪಲ್ ಬಳಿ ಹೋಗಿ ಮನವಿ ಸಲ್ಲಿಸಿದೆ.
ಈಗಾಗಲೇ ಬಿವಿಬಿ ಕಾಲೇಜಿನಲ್ಲಿ ಜಿಹಾದಿ ಮನಸ್ಸಿನ ಯುವಕ ಹಿಂದೂ ಯುವತಿಯ ಮೇಲೆ ಕ್ರೌರ್ಯ ತೋರಿರೋದು ಎಲ್ಲಿರಿಗೂ ಗೊತ್ತಿದೆ. ಆ ಘಟನೆ ತಮ್ಮ ಕಾಲೇಜಿನ ಆವರಣದಲ್ಲಿ ನಡೆಯುವ ಮುನ್ನ ಎಚ್ಚರಿಕೆಯಿಂದೀರಿ. ಲವ್ ಜಿಹಾದ್ ಮಾಡೋ ವಿದ್ಯಾರ್ಥಿಗಳನ್ನು ಕೂಡಲೇ ವಜಾ ಮಾಡಿ ಹೊರಗೆ ಹಾಕಿ. ಅಂತವರಿಂದ ಜೈನ ಪ್ರತಿಷ್ಠಿತ ಕಾಲೇಜಿಗು ಕೆಟ್ಟ ಹೆಸರು. ಈ ಕೂಡಲೇ ಜಿಹಾದಿ ಮನಸ್ಸಿನ ಇಲ್ಲಿನ ವಿದ್ಯಾರ್ಥಿಗಳ ವಜಾ ಮಾಡುವಂತೆ ಆಗ್ರಹಿಸಲಾಗಿದೆ.