Hubli News: ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯಲ್ಲಿರುವ ಈ ಮಠ ಕೂಡ 1. ಆದರೆ ಇದೀಗ, ಈ ಮಠದ ಧರ್ಮದರ್ಶಿಗಳು ಇದರ ಹೆಸರು ಬಳಸಿಕ“ಂಡು ಹಗಲು ದರೋಡೆಗೆ ಇಳಿದ್ರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ಕಮಿಟಿ ಮನವಿ ಮೇರೆಗೆ ಈ ಮಠದ ಹೆಸರೇನು ಅಂತಾ ಇನ್ನು ರಿವೀಲ್ ಮಾಡಿಲ್ಲ. ಆದರೆ ಈ ಮಠಕ್ಕೆ ಅಸಂಖ್ಯಾತ ಭಕ್ತ ಸಮೂಹ ಇದೆ. ಹಾಗಾಗಿ ಇಲ್ಲಿಗೆ ಬರುವವರು, ದೇಣಿಗೆ, ಕಾಣಿಕೆ ಎಲ್ಲವನ್ನೂ ನೀಡುತ್ತಾರೆ. ಆದರೆ ಮಠದ ಧರ್ಮದರ್ಶಿಯಾಗಿರುವ ಸಿದ್ದನಗೌಡ ಪ್ರಭುಗೌಡ ಪಾಟೀಲ್, ದೇಣಿಗೆಯನ್ನು ತೆಗೆದುಕ“ಂಡಿದ್ದಾರೆ ವಿನಃ ಮಠಕ್ಕೆ ನೀಡಿಲ್ಲವೆಂದು ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಠದ ಹೆಸರು ದುರ್ಬಳಕೆ ಮಾಡಿಕೊಂಡು ಸ್ವ ಅಭಿವೃದ್ಧಿ ಮಾಡಿಕೊಳ್ಳುತ್ತಿದ್ದಾನೆ. ಮಠದ ಹೆಸರೆಳಿ ಪೋನ್ ಫೇ ಮೂಲಕವೂ ದೇಣಿಗೆ ಸಂಗ್ರಹಿಸಿದ್ದಾನೆ ಅಂತಲೂ ಈತನ ಮೇಲೆ ಆೋರಪವಿದೆ. ಹಾಗಾಗಿ ಇದೀಗ ಸಿದ್ದನಗೌಡ ವಿರುದ್ಧ ರಾಣೆಬೆನ್ನೂರಿನಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಅಲ್ಲದೇ ಇವರನ್ನು ಧರ್ಮದರ್ಶಿ ಸ್ಥಾನದಿಂದಲೂ ವಜಾ ಮಾಡುವಂತೆ ಆಗ್ರಹಿಸಲಾಗಿದೆ.