Hubli News: ಹುಬ್ಬಳ್ಳಿ: ಹಾವೇರಿಯ ಸವಣೂರಿನಿಂದ ಕುಮಟಾಗೆ ತೆರಳುತ್ತಿದ್ದ ತರಕಾರಿ ಲಾರಿ ಪಲ್ಟಿಯಾಗಿ ಅದರಲ್ಲಿದ್ದ 10 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಹುಬ್ಬಳ್ಳಿ ಮಂಟೂರು ರೋಡ್ ಮಿಲತ್ ನಗರ ನಿವಾಸಿ ಜಿಲಾಲ್ ತಾರಾ ಮಂಚಗಿ ಸಾವನ್ನಪ್ಪಿದ್ದಾರೆ. ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ಮೃತ ದೇಹ ರವಾನೆ ಹಿನ್ನೆಲೆ, ಕಿಮ್ಸ್ ಶವಾಗರ ಮುಂದೆ ಸಂಬಂಧಿಗಳ ಆಕ್ರಂದನ ಮುಗಿಲು ಮುಟ್ಟಿದೆ.
ಮೃತ ಜೆಲಾಲ್ ಪತ್ನಿ ಗರ್ಭಿಣಿಯಾಗಿದ್ದು, ಈಗಾಗಲೇ 3 ಜನ ಮಕ್ಕಳಿದ್ದಾರೆ. ಜೆಲಾಲ್ ತರಕಾರಿ ಮಾರಾಟ ಮಾಡಿಕೊಂಡು ಕುಟುಂಬವನ್ನು ಸಾಕುತ್ತಿದ್ದ. ಆದರೆ ಇದೀಗ ಆತ ಸಾವನ್ನಪ್ಪಿದ್ದು, ಪತ್ನಿ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ. ಮೃತನ ಕುಟುಂಬದ ನೋವಿಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಮಿಲತ್ ನಗರ ನಿವಾಸಿಗಳು ಒತ್ತಾಯಸಿದ್ದಾರೆ.
ಈ ಲಾರಿಯಲ್ಲಿ 25 ಮಂದಿ ಪ್ರಯಾಣಿಸುತ್ತಿದ್ದು, ಸವಣೂರಿನಿಂದ ಕುಮಟಾಗೆ ತೆರಳುತ್ತಿದ್ದರು. ಭಾರ ತಾಳಲಾರದೇ ಲಾರಿ ಪಲ್ಟಿ ಯಾಗಿದ್ದು, 10 ಮಂದಿ ಸಾಾವನ್ನಪ್ಪಿದ್ದು, ಕೆಲವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಕೆಲವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಉಳಿದವರು ಗಾಯಗೊಂಡು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮೃತಪಟ್ಟವರೆಲ್ಲರೂ ಹಾವೇರಿಯ ಸವಣೂರು ಮೂಲದವರು ಎನ್ನಲಾಗಿದೆ. ಸ್ಥಳದಲ್ಲೇ ಮೃತಪಟ್ಟವರ ಹೆಣವನ್ನು ಕ್ರೇನ್ ಮೂಲಕ ಎತ್ತಲಾಾಯಿತು.
ಸ್ಥಳಕ್ಕೆ ಯಲ್ಲಾಪುರ ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಇನ್ನು ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಿಎಂ ಸಿದ್ದರಾಮಯ್ಯ ಸೇರಿ, ಹಲವು ರಾಜಕಾರಣಿಗಳು ಸಂತಾಪ ಸೂಚಿಸಿದ್ದಾರೆ.