Bellary News; ಸಂಡೂರು (ಬಳ್ಳಾರಿ ಜಿಲ್ಲೆ) ಜನವರಿ ̈19: ಇಲ್ಲಿನ ಎಪಿಎಂಸಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಭಾರಿ ಸ್ಪಂದನೆ ವ್ಯಕ್ತವಾಯಿತು.
ಒಟ್ಟು 1541 ಅಭ್ಯರ್ಥಿಗಳು ಈ ಮೇಳದಲ್ಲಿ ಉದ್ಯೋಗ ಕೋರಿ ನೋಂದಣಿ ಮಾಡಿಕೊಂಡಿದ್ದರು. ಇವರಲ್ಲಿ ಅಂತಿಮ ಹಂತಕ್ಕೆ 885 ಮಂದಿ ಆಯ್ಕೆಗೊಂಡಿದ್ದಾರೆ. (ಕೆಲವು ಅಭ್ಯರ್ಥಿಗಳು ಹಲವು ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ) ಒಟ್ಟು 642 ಮಂದಿಗೆ ನೇಮಕಾತಿ ಪತ್ರವನ್ನು ನೀಡಲಾಗಿದೆ. ಎಂದರೆ 36 ವಿಕಲಚೇತನರು ಭಾಗವಹಿಸಿದ್ದರು.
55 ಕ್ಕೂ ಹೆಚ್ಚು ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿದ್ದವು. 4000 ಕ್ಕೂ ಹೆಚ್ಚು ಉದ್ಯೋಗಾವಕಾಶಗಳು ಮೇಳದಲ್ಲಿದ್ದವು. ಎಸ್‌ಎಸ್‌ಎಲ್‌ಸಿ, ಪಿಯು, ಪದವಿ, ಡಿಪ್ಲೊಮಾ, ಪ್ಯಾರಾಮೆಡಿಕಲ್, ಫಾರ್ಮಸಿ, ಸ್ನಾತಕೋತ್ತರ ಪದವೀಧರರು, ವಿಶೇಷ ಚೇತನರು ಹಾಗೂ ತೃತೀಯ ಲಿಂಗಿಗಳು ಭಾಗವಹಿಸಿದ್ದರು.
ಅಭ್ಯರ್ಥಿಗಳ ಧನ್ಯವಾದ: ಮೇಳದಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳು ಸಂತೋಷ್ ಲಾಡ್ ಉಪಕ್ರಮಕ್ಕೆ ಧನ್ಯವಾದಗಳನ್ನು ತಿಳಿಸಿದರು. ಉದ್ಯೋಗ ಪಡೆದ ಫಾರ್ಮಸಿ ಪದವೀಧರೆ ಗೀತಾ ಅವರು ಮಾತನಾಡಿ, “ಈವರೆಗೆ ಸಾಕಷ್ಟು ಕಡೆ ಉದ್ಯೋಗಕ್ಕೆ ಪ್ರಯತ್ನಿಸಿದ್ದೆ. ಆದರೆ ಉದ್ಯೋಗ ಸಿಕ್ಕಿರಲಿಲ್ಲ. ಆದರೆ ಈ ಬಾರಿ ನಮ್ಮೂರಿನಲ್ಲೇ ಕಂಪನಿಗಳು ಬಂದು ಕೆಲಸ ಕೊಟ್ಟಿವೆ. ಇಂತಹ ಕ್ರಮ ಕೈಗೊಂಡ ಸಂತೋಷ್ ಲಾಡ್ ಫೌಂಡೇಶನ್‌ಗೆ ಧನ್ಯವಾದ” ಎಂದು ಹೇಳಿದರು.
ಕಲಘಟಗಿಯಲ್ಲೂ ನಡೆದಿತ್ತು ಉದ್ಯೋಗ ಮೇಳ:
ಕಲಘಟಗಿಯ ಇಲ್ಲಿನ ಜನತಾ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಶನಿವಾರ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿತ್ತು.