Tuesday, April 15, 2025

Latest Posts

ಅಸ್ವಸ್ಥ ಮಹಿಳೆಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದ ಅಧಿಕಾರಿಗಳು

- Advertisement -

ರಸ್ತೆ ಬದಿಯಲ್ಲಿ ಬಿದ್ದು ನರಳಾಡುತ್ತಿರೋ ಮಹಿಳೆ ,ಈ ಧಾರಣ ಕೃತ್ಯವನ್ನೂ ನೋಡಿ ಕಂಡೂ ಕಾಣದಂತೆ ಮನಸಲ್ಲೇ ಮರುಗುತ್ತಾ ಸಾಗ್ತಿರೋ ಜನ .ಈ ದೃಶ್ಯ ಕಂಡುಬoದಿದ್ದು ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ .
ಮಹಿಳೆಯೊಬ್ಬರು ಮುಖ್ಯ ರಸ್ತೆ ಮಧ್ಯೆ ಅಸ್ವಸ್ಥರಾಗಿ ನರಳಾಡುತ್ತಿರುವಾಗ ಜನರೂ ಸಾಮಾಜಿಕ ಪ್ರಜ್ಞೆಯನ್ನೇ ಮರೆತಿದ್ದಾರೆ .ಕೂಡಲೇ ಈ ಮಾಹಿತಿ ಪಡೆದ ಮಹಿಳಾ ಮತ್ತು ಕಲ್ಯಾಣ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ಆಗಮಿಸಿ, ಮಹಿಳೆಯನ್ನು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವುದರ ಮುಖಾಂತರ ಕರ್ತವ್ಯಪ್ರಜ್ಞೆಯನ್ನು ಮಾಡಿದ್ದಾರೆ.ಅಸ್ವಸ್ಥ ಮಹಿಳೆಯನ್ನು ರಕ್ಷಿಸಿ ಚಿಕಿತ್ಸೆ ಕೊಡಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸತತ 7 ಗಂಟೆಗಳ ಕಾಲ ಅಸ್ವಸ್ತ ಮಹಿಳೆಯನ್ನು ಉಪಚರಿಸಿದ್ದಾರೆ . ಮಹಿಳೆಯ ಮೂಲವನ್ನು ಪತ್ತೆಹಚ್ಚಿ ಮಹಿಳೆ ರಾಮಮ್ಮ ಅವರನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ . ಇನ್ನು ಗಂಡ ಮಕ್ಕಳಿರುವ ರಾಮಮ್ಮ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನೆ ತೊರೆದು ಬಂದಿರುವುದು ತಿಳಿದು ಬಂದಿದೆ . ಅಧಿಕಾರಿಗಳು ಹಾಗು ಸಿಬ್ಬಂದಿಗಳು ಹರಸಾಹಸ ಪಟ್ಟು ಮಹಿಳೆಯ ಅಣ್ಣನ ಮನೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ .ಅವಸ್ಥ ಮಹಿಳೆಗೆ ಮಾನವೀಯತೆ ತೋರಿದ ಅಧಿಕಾರಿಗಳಿಗೆ ಸಾರ್ವಜನಿಕರು ಪ್ರಶಂಶೆಯನ್ನು ವ್ಯಕ್ತಪಡಿಸಿದ್ದಾರೆ .

- Advertisement -

Latest Posts

Don't Miss