ಕರ್ನಾಟಕ ಟಿವಿ : ಜೆಡಿಎಸ್ ನಿಂದ ದೂರವಾಗಿ ಅನರ್ಹವಾಗಿರುವ ಹೆಚ್ ವಿಶ್ವನಾಥ್ ವಿರುದ್ಧ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಮುಂದಾಗಿದ್ದಾರೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೋಟೆಲ್ ಸೇರಿಕೊಂಡು ಕುಮಾರಸ್ವಾಮಿ ಸರ್ಕಾರ ಪತನಕ್ಕೆ ಕಾರಣವಾಗಿದ್ದ ವಿಶ್ವನಾಥ್ ವಿರುದ್ಧ ದೇವೇಗೌಡರು ಸಿಡಿದೆದ್ದಿದ್ದಾರೆ..
ಇಂದು ಹುಣಸೂರು ಭಾಗದ ಜೆಡಿಎಸ್ ನಾಯಕರ ಸಭೆ ಮಾಡ್ತಿದ್ದಾರೆ.. ಸಭೆಯಲ್ಲಿ ಕ್ಷೇತ್ರವನ್ನ ಉಳಿಸಿಕೊಳ್ಳೋದು ಹೇಗೆ..? ಯಾರು ಅಭ್ಯರ್ಥಿಯಾಗಬೇಕು ಅನ್ನೋದು ಚರ್ಚೆಯಾಗಿದೆ.
ಜಿ.ಟಿ ದೇವೇಗೌಡ ಪುತ್ರನಿಗಿಲ್ಲ ಟಿಕೆಟ್..!
ಇನ್ನು ಚಾಮುಂಡೇಶ್ವರಿ ಶಾಸಕ ಜಿ.ಟಿ ದೇವೇಗೌಡ ಪುತ್ರ ಹರೀಶ್ ಗೌಡ ಹುಣಸೂರಿನಲ್ಲಿ ಸ್ಪರ್ಧೇ ಮಾಡಲು ಆಸಕ್ತಿ ತೋರಿದ್ದಾರೆ. ಆದ್ರೆ, ಜಿ,ಟಿ ದೇವೇಗೌಡ ಜೆಡಿಎಸ್ ನಿಂದ ದೂರವಾಗಿ ಬಿಜೆಪಿ ನಾಯಕರಿಗೆ ಹತ್ತಿರವಾಗುತ್ತಿರುವ ಕಾರಣ ಹರೀಶ್ ಗೌಡಕ್ಕೆ ಟಿಕೆಟ್ ಕೊಡಲು ದೇವೇಗೌಡರು ಸುತಾರಾಂ ಒಪ್ಪೋದಿಲ್ಲ.. ಹೀಗಾಗಿ ಕ್ಷೇತ್ರ ಉಳಿಸಿಕೊಳ್ಳಲು ಪ್ರಭಲ ಅಭ್ಯರ್ಥಿ ಕಣಕ್ಕಿಳಿಸೋದು ಗ್ಯಾರಂಟಿ. ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಶಾಸಕ ಮಂಜುನಾಥ್ ಕಣಕ್ಕಿಳೀಯೋದು ಗ್ಯಾರಂಟಿಯಾಗಿದೆ..