ಇತ್ತೀಚೆಗೆ ನಡೆದ ಉತ್ತರ ಪ್ರದೇಶ (Uttar Pradesh) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ (Bjp) ಮತ ಹಾಕಿದ್ದಕ್ಕಾಗಿ ಮುಸ್ಲಿಂ ಮಹಿಳೆಯನ್ನು ಆಕೆಯ ಅತ್ತೆಯ ಮನೆಯವರು ಮನೆಯಿಂದ ಹೊರ ಹಾಕಿದ್ದಾರೆ. ತ್ರಿವಳಿ ತಲಾಖ್ (Triple talaq) ವಿರುದ್ಧದ ಕಾನೂನು ಮತ್ತು ಬಡವರಿಗೆ ಉಚಿತ ಪಡಿತರ ಸೇರಿದಂತೆ ಬಿಜೆಪಿ ಮಾಡಿದ ಕೆಲಸಕ್ಕಾಗಿ ಬಿಜೆಪಿಗೆ ಸಂತ್ರಸ್ತೆ ಮತ ಹಾಕಿದ್ದರು. ಆದರೆ ಇದನ್ನೊಪ್ಪದ ಗಂಡ ಮತ್ತು ಆತನ ಕುಟುಂಬಸ್ಥರು ಆಕೆಗೆ ಥಳಿಸಿದ್ದಾರೆ. ಜೊತೆಗೆ ಮನೆಯಿಂದ ಹೊರಹಾಕಿದ್ದಾರೆ. ಸಂತ್ರಸ್ತೆಯನ್ನು ಉಜ್ಮಾ ಎಂದು ಗುರುತಿಸಲಾಗಿದೆ. ನಾನು ಬಿಜೆಪಿಗೆ ಮತ ಹಾಕಿದ್ದೇನೆ. ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದಿದ್ದರಿಂದ ನಾನು ಬಿಜೆಪಿಗೆ ಮತ ಹಾಕಿದ್ದೇನೆ. ನನ್ನ ಕುಟುಂಬ ತೀರಾ ಬಡವಾಗಿದೆ. ನನ್ನ ತಂದೆ ಕೂಲಿ ಕಾರ್ಮಿಕ. ನಾವು ಐವರು ಸಹೋದರಿಯರು. ಸರ್ಕಾರ (Government) ನಮಗೆ ಪಡಿತರವನ್ನೂ ನೀಡಿದೆ.ಹೀಗಾಗಿ ನಾನು ಬಿಜೆಪಿಗೆ ಮತ ಹಾಕಿದೆ. ಆದರೆ ನನ್ನ ಗಂಡನಿಗೆ ಬಿಜೆಪಿಗೆ ಮತ ಹಾಕಿವುದು ಇಷ್ಟವಿರಲಿಲ್ಲ. ಹೀಗಾಗಿ ನನ್ನನ್ನು ಥಳಿಸಿ ಮನೆಯಿಂದ ಹೊರಹಾಕಿದ್ದಾರೆ” ಎಂದು ಉಜ್ಮಾ ಸುದ್ದಿಗಾರರ ಮುಂದೆ ಹೇಳಿಕೊಂಡಿದ್ದಾರೆ. ಅವರು ಜನರಿಗೆ ಒಳ್ಳೆಯದನ್ನು ಮಾಡುತ್ತಿದ್ದಾರೆ ಎಂದು ಹೇಳಿದ್ದೆ. ಇದೊಂದು ಉತ್ತಮ ಸರಕಾರ. ಅವರು ತ್ರಿವಳಿ ತಲಾಖ್ ವಿರುದ್ಧ ಕಾನೂನು ತಂದಿದ್ದಾರೆ ಎಂದಿದ್ದೆ. ಆದರೆ ಇದು ನನ್ನ ಗಂಡನ ಚಿಕ್ಕಪ್ಪಗೆ ಇಷ್ಟವಾಗಲಿಲ್ಲ” ಎಂದು ಸಂತ್ರಸ್ತೆ ಹೇಳಿಕೊಮಡಿದ್ದಾರೆ. ತನ್ನ ಹೇಳಿಕೆಯಿಂದ ಸಿಟ್ಟಿಗೆದ್ದ ಗಂಡನ ಚಿಕ್ಕಪ್ಪ ತ್ರಿವಳಿ ತಲಾಖ್‌ನಿಂದ ರಕ್ಷಿಸಿಕೊಳ್ಳುವಂತೆ ಬೆದರಿಕೆ ಹಾಕಿದ್ದಾರೆಂದು ಆಕೆ ಹೇಳಿಕೊಂಡಿದ್ದಾಳೆ. ಈ ವಿಷಯದಲ್ಲಿ ನನ್ನ ಪತಿ ತನ್ನ ಚಿಕ್ಕಪ್ಪನೊಂದಿಗೆ ಇದ್ದಾನೆ. ಅವರು ನನಗೆ ಬೆಂಬಲ ನೀಡುತ್ತಿಲ್ಲ. ಆದರೆ ನನ್ನ ಪತಿಯೊಂದಿಗೆ ನನಗೆ ಯಾವುದೇ ಸಮಸ್ಯೆಗಳಿಲ್ಲ” ಎಂದು ಅವರು ಹೇಳಿದರು. ಅವರಿಗೆ ಸಂತ್ರಸ್ತೆ ದೂರು ನೀಡುವುದಾಗಿ ಹೇಳಿದಾಗ, ಆಕೆಯ ಸಹೋದರ ಸಹೋದರಿಯರಿಗೆ ಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರು ಸೋಮವಾರ ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಬರೆದಿದ್ದು, ಪತ್ನಿಯನ್ನು ಹೊಡೆದು ಹೊರಹಾಕಿದ ಪುರುಷ ಮತ್ತು ಅವನ ಕುಟುಂಬದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ಈ ವಿಷಯದಲ್ಲಿ ತೆಗೆದುಕೊಂಡ ಕ್ರಮವನ್ನು ಏಳು ದಿನಗಳಲ್ಲಿ ಆಯೋಗಕ್ಕೆ ತಿಳಿಸಬೇಕು” ಎಂದು ತನ್ನ ಹೇಳಿಕೆಯಲ್ಲಿ ತಿಳಿಸಲಾಗಿದೆ.