National News: ಮಧ್ಯಪ್ರದೇಶದ ಛತ್ತರ್‌ಪುರ್‌ನಲ್ಲಿ ಮದುವೆಯಾದ ಮೊದಲ ರಾತ್ರಿ ಮಹಿಳೆ ತನ್ನ ಪತಿಗೆ ಹಾಲಿನಲ್ಲಿ ಮತ್ತು ಬರುವ ಮಾತ್ರೆ ಹಾಕಿಕೊಟ್ಟಿದ್ದು, ಮತ್ತು ಬಂದು ನಿದ್ರಿಸಿದ ಬಳಿಕ, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಳೆ ಬಾಳುವ ಚಿನ್ನ, ಬೆಳ್ಳಿ ಒಡವೆಗಳನ್ನು ಪ್ಯಾಕ್ ಮಾಡಿ ಎಸ್ಕೇಪ್ ಆಗಿದ್ದಾಳೆ.
ಇತ್ತ ಮತ್ತಿನ ಗುಳಿಗೆಯಿಂದ ಆರೋಗ್ಯ ಹದಗೆಟ್ಟು ಪತಿ ಆಸ್ಪತ್ರೆ ಪಾಲಾಗಿದ್ದಾನೆ. ಹುಡುಗನ ತಂದೆ ಕೊಟ್ಟ ದೂರಿನ ಮೇರೆಗೆ, ಮಹಿಳೆ, ಆಕೆಯ ಸಹೋದರರ ವಿರುದ್ಧ ದೂರು ದಾಖಲಿಸಲಾಗಿದೆ. ಎಸ್ಕೇಪ್ ಆಗಿರುವ ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.
ರಾಜ್‌ದೀಪ್ ರಾವತ್ ಎಂಬಾತ, ಖುಷಿ ತಿವಾರಿ ಎಂಬಾಕೆಯೊಂದಿಗೆ ಇದೇ ತಿಂಗಳ 11ರಂದು ವಿವಾಹವಾಗಿದ್ದ. ಹುಡುಕಿಯ ಕುಟುಂಬದ ಬಗ್ಗೆ ಕೇಳಿದಾಗ, ಈಕೆಯ ತಂದೆ ತಾಯಿಯ ಬಗ್ಗೆ ಈಕೆ ಯಾವ ಗುಟ್ಟು ಬಿಟ್ಟು ಕೊಡಲಿಲ್ಲ. ಆದರೆ ತನಗೆ ಸಹೋದರ ಬಿಟ್ಟು ಬೇರೆ ಯಾರೂ ಇಲ್ಲವೆಂದು ಹೇಳಿಕೊಂಡಿದ್ದು, ಮದುವೆ ಮಾತುಕತೆ ಮಾಡುವಾಗ, ಸಹೋದರ ಛೋಟು ತಿವಾರಿ ಮತ್ತು ಆತನ ಸ್ನೇಹಿತರಿಬ್ಬರೇ ಬಂದಿದ್ದರು.
ವರನ ತಾಯಿ ಅಸ್ವಸ್ಥಳಾಗಿರುವ ಕಾರಣ ಬೇಗ ವಿವಾಹವಾಗಬೇಕು ಎಂದು ಹೇಳಲಾಗಿತ್ತು. ಇದು ಆ ಗುಂಪಿಗೂ ಲಾಭವೇ ಆಗಿತ್ತು. ಬೇಗ ಬೇಗ ಮದುವೆಯಾಗಿ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.