Crime News: ಭೋಪಾಲ್: ಇಂದಿನ ನಯಾ ಜಮಾನಾದಲ್ಲಿ ಫ್ಯಾಷನ್ ಮಾಡುವುದು ಸಾಮಾನ್ಯವಾಗಿದೆ. ಅಂದವಾಗಿ ಡ್ರೆಸ್ ಮಾಡಿಕೊಂಡು, ಮೇಕಪ್ ಮಾಡಿ, ಪರ್ಫ್ಯೂಮ್ ಸಿಂಪಡಿಸಿಕೊಂಡು, ಹೀಲ್ಸ್ ಧರಿಸಿ, ಹೆಣ್ಣು ಮಕ್ಕಳು ತಿರುಗಾಡಲು ಹೋಗುವುದು ದೊಡ್ಡ ವಿಷಯವಲ್ಲ. ಆದರೆ ಇಲ್ಲೋರ್ವ ಪತಿ, ತನ್ನ ಪತ್ನಿ ಪರ್ಫ್ಯೂಮ್ ಬಳಸಿದ್ದಕ್ಕೆ, ಆಕೆಯ ಮೇಲೆ ಗುಂಡಿನ ದಾಳಿ ಮಾಡಿದ್ದಾನೆ.
ನೀಲಂ ಜಾಧವ್ ಎಂಬ ಮಹಿಳೆ 8 ವರ್ಷದ ಹಿಂದೆ ಮಹೇಂದ್ರ ಜಾಧವ್ ಎಂಬಾತನನ್ನು ವಿವಾಹವಾಗಿದ್ದಳು. ಆದರೆ ವಿವಾಹವಾದ ಕೆಲವೇ ವರ್ಷಗಳಲ್ಲಿ, ಮಹೇಂದ್ರ ಕಳ್ಳತನ ಮಾಡಲು ಹೋಗಿ ಸಿಕ್ಕಿಬಿದ್ದು, ಜೈಲು ಪಾಲಾಗಿದ್ದ. ನಾಲ್ಕು ವರ್ಷ ಜೈಲುವಾಸ ಅನುಭವಿಸಿ, ಒಂದು ವರ್ಷದ ಹಿಂದೆ ರಿಲೀಸ್ ಆಗಿದ್ದ. ಬಳಿಕ, ನೀಲಂ ತಂದೆಯ ಮನೆಯಲ್ಲಿ ಇಬ್ಬರೂ ವಾಸಿಸುತ್ತಿದ್ದರು.
ನಿನ್ನೆ ನೀಲಂ ಪರ್ಫ್ಯೂಮ್ ಬಳಸಿ, ಹೊರಗೆ ಹೊರಟಿದ್ದಳು. ಇದನ್ನು ನೋಡಿ ಕೋಪಗೊಂಡ ಮಹೇಂದ್ರ, ಈ ಬಗ್ಗೆ ಪ್ರಶ್ನಿಸಿದ್ದ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಕೋಪಗೊಂಡ ಮಹೇಂದ್ರ ನೀಲಂ ಎದೆಗೆ ಗುಂಡು ಹೊಡೆದಿದ್ದಾನೆ. ಮತ್ತು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಈ ವೇಳೆ ನೀಲಂ ಸಹೋದರ ದಿನೇಶ್ ಜಾಧವ್ ಆಕೆಯನ್ನು ಸಂಬಂಧಿಕರ ಸಹಾಯದೊಂದಿಗೆ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ನೀಲಂ ಈಗ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.
ಈಗಾಗಲೇ ಮಹೇಂದ್ರನ ವಿರುದ್ಧ ಹಲವು ಕೇಸ್‌ಗಳಾಗಿದ್ದು, ಅವನು ಜೈಲು ವಾಸವೂ ಮುಗಿಸಿ ಬಂದಿದ್ದ. ಇದೀಗ ಅಟೆಂಪ್ಟ್ ಟು ಮರ್ಡರ್ ಕೇಸ್ ಅಡಿ, ದೂರು ದಾಖಲಿಸಿದ್ದು, ಸ್ಥಳೀಯ ಪೊಲೀಸರು ಮಹೇಂದ್ರನಿಗಾಗಿ ಹುಡುಕಾಟ ನಡೆಸಿದ್ದಾರೆ.
One Kiss story: ಹೆಂಡತಿಯ ಒಪ್ಪಿಗೆ ಇಲ್ಲದೆ ಕಿಸ್ ಕೊಟ್ಟನು.! ನಾಲಿಗೆ ಕಳೆದುಕೊಂಡನು..!
Sim Card :ಸಿಮ್ ಕಾರ್ಡ್ ಒಂದು ಮೂಲೆ ಕತ್ತರಿಸಿರೋದು ಯಾಕೆ ಗೊತ್ತಾ..?!