Thursday, July 25, 2024

Latest Posts

‘ಹುಷಾರ್’ ಹಾಡಿಗೆ ಧ್ವನಿ ನೀಡಿದ ರಿಯಲ್ ಸ್ಟಾರ್ ಉಪೇಂದ್ರ : ಹಾಡು ಬಿಡುಗಡೆ ಮಾಡಿ ಶುಭ ಕೋರಿದ ಪ್ರಿಯಾಂಕ ಉಪೇಂದ್ರ

- Advertisement -

ಬೆಂಗಳೂರು: ‘ಹುಷಾರ್’ ಚಿತ್ರದಲ್ಲಿನ ‘ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ’ ಎಂಬ ಹಾಡಿಗೆ ರಿಯಲ್ ಸ್ಟಾರ್ ಉಪೇಂದ್ರ ಅವರು ಧ್ವನಿ ನೀಡಿದ್ದು, ಇಂದು ಪ್ರಿಯಾಂಕ ಉಪೇಂದ್ರ ಅವರು ಹಾಡನ್ನು ಬಿಡುಗಡೆ ಮಾಡಿದ್ದಾರೆ. ಸತೀಶ್ ರಾಜ್ ನಿರ್ಮಸಿ, ನಿರ್ದೇಶಿಸಿರುವ ಚಿತ್ರ ‘ಹುಷಾರ್’ ಇನ್ನು ಚಿತ್ರದ ಟ್ರೇಲರ್ ನಿರ್ಮಾಪಕ ಎನ್.ಎಂ ಸುರೇಶ್ ಬಿಡುಗಡೆ ಮಾಡಿದರು. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಉಪೇಂದ್ರ ಅವರು ಹಾಡಿರುವುದು. ಈ ಹಾಡು H20 ಚಿತ್ರದ ‘ದಿಲ್ ಇಲ್ದೆ ಲವ್ ಮಾಡೋಕಾಗಲ್ವೇ’ ಹಾಡಿನ ತರ ಇದೆ. ಈ ಹಾಡು ಕೂಡ ಅದೇ ರೀತಿ ಹಿಟ್ ಆಗಲಿ, ಸಿನಿಮಾ ಎಲ್ಲರ ಮನ ಗೆಲ್ಲಲಿ ಎಂದು ಪ್ರೀಯಾಂಕ ಉಪೇಂದ್ರ ಶುಭ ಹಾರೈಸಿದರು.

ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಬಿಪಾಶಾ ಬಸು

ಕನ್ನಡ ಚಿತ್ರರಂಗದಲ್ಲಿ ವಿವಿಧ ವಿಭಾಗಗಳಲ್ಲಿ ನಾನು ಕೆಲಸ ಮಾಡಿದ್ದೇನೆ, ನಾನು ಡಾ. ರಾಜ್ ಕುಮಾರ್ ಅವರ ಅಭಿಮಾನಿ . ಹಲವು ಅಡೆತಡೆಗಳನ್ನು ದಾಟಿ ಚಿತ್ರ ಇಂದು ಬಿಡುಗಡೆ ಹಂತ ತಲುಪಿದೆ. ಉಪೇಂದ್ರ ಅವರು ನಮ್ಮ ಚಿತ್ರಕ್ಕೆ ಹಾಡೊಂದು ಹಾಡಿರುವುದು ನಮ್ಮ ಹೆಮ್ಮೆ. ಹಾಡು ಬಿಡುಗಡೆ ಮಾಡಿದ ಪ್ರೀಯಾಂಕ ಉಪೇಂದ್ರ ಅವರಿಗೆ ಧನ್ಯವಾದಗಳು ಎಂದು ನಿರ್ಮಾಕ,ನಿರ್ದೇಶಕ ಸತೀಶ್ ರಾಜ್ ಹೇಳಿದರು.

ಪ್ರಿಯಾಂಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟರ್ ಬಿಡುಗಡೆ ಮಾಡಿದ ‘ಕೈಮರ’ ಚಿತ್ರತಂಡ

ನಾಯಕಕ ಸಿದ್ದೇಶ್, ನಾಯಕಿ ಆದ್ಯಪ್ರೀಯ, ನಟಿಪುಷ್ಪಸ್ವಾಮಿ, ನಟರಾದ ಬುಲೆಟ್ ವಿನೋದ್, ಡಿಂಗ್ರಿ ನಾಗರಾಜ್, ನಟಿ ರಚನಾ ಮಲ್ನಾಡ್ ಮುಂತಾದ ಕಲಾವಿದರು ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅಭಿನಯದ ಬಗ್ಗೆ ಮಾತನಾಡಿದರು. ಸಹ ನಿರ್ಮಾಪಕಿ ಅಶ್ವಿನಿ ಅರುಣ್ ಕೃಷ್ಣನ್ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಪ್ರಿಯಾಂಕ ಉಪೇಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಪೋಸ್ಟರ್ ಬಿಡುಗಡೆ ಮಾಡಿದ ‘ಕೈಮರ’ ಚಿತ್ರತಂಡ

- Advertisement -

Latest Posts

Don't Miss