Thursday, July 31, 2025

Latest Posts

“ಹುಟ್ಟು ಹಬ್ಬದ ಶುಭಾಷಯಗಳು”, ಕ್ರಿಮಿನಲ್ ದೂದ್ ಪೇಡ..!

- Advertisement -

www.karnatakatv.net:ದಿಗಂತ್ ಮುಕ್ಯಭೂಮಿಕೆಯ ಸಿನಿಮಾ ಹುಟ್ಟುಹಬ್ಬದ ಶುಭಾಷಯಗಳು ಬರಿ ಕ್ರೈಂ ಥ್ರಿಲ್ಲರ್ ಸಿನಿಮಾವಲ್ಲ , ಕಾಮಿಡಿ ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ, ಸಿನಿಮಾದಲ್ಲಿ ನಾಯಕ ದಿಗಂತ್ ಜೊತೆಗೆ ಮಡೆನೂರು ಮನು ಹೆಚ್ಚಾಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಾರೆ, ಆತಂಕ ಗಾಬರಿ ಇರುವಂತ ಪಾತ್ರವನ್ನು ನಿಭಾಯಿಸಿದ್ದಾರೆ. ಕವಿತಾ ಗೌಡ, ಚೇತನ್ ಗಂಧರ್ವ, ಶರಣ್ಯ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್,ಸೂರಿ ಮತ್ತು ಅನೇಕರು ದಿಂಗತ್ ಸ್ನೇಹಿತರ ಪಾತ್ರದಲ್ಲಿ ನಟಿಸಿದ್ದಾರೆ.

ಸ್ನೇಹಿತನ ಬರ್ತಡೇ ಮಾಡಲೆಂದು ಎಲ್ಲಾ ಹಳೇ ಕಾಲೇಜು ಸ್ನೇಹಿತರು ಒಂದಾಗಿರುತ್ತಾರೆ, ಚಿತ್ರದಲ್ಲಿ ಒಂದೇ ಹಾಡಿದ್ದು ಬಹಳಬೇಗ ಬರುತ್ತದೆ, ನಂತರ ನಡೆಯುವಂತ ಮರ್ಡರ್, ಅದನ್ನು ನಾಯಕ ದಿಗಂತ್ ಮಾಡುತ್ತಾರೆ ಮತ್ತು ಅದನ್ನು ಗುಟ್ಟಾಗಿ ಕಾಪಡಲು ಏನೆಲ್ಲಾ ಮಾಡುತ್ತಾರೆ, ಆ ಕೊಲೆ ನೋಡಿದ ಸ್ನೇಹಿತ ಗ್ಲೂಕೋಸ್(ಮನು) ಯಾವರೀತಿ ಗುಟ್ಟನ್ನು ಕಾಪಾಡಿಕೊಳ್ಳಲು ಒದ್ದಾಡುತ್ತಾರೆ ಎನ್ನುವುದು ಜೊತೆಗೆ ಅವರ ಕಾಮಿಡಿ ಪಂಚ್ ನೋಡುಗರಿಗೆ ಮನೋರಂಜನೇ ನೀಡುತ್ತದೆ. ಸಿಂಪಲ್ ಆಗೇ ಸಾಗುವ ಮೊದಲಾರ್ಧದಲ್ಲಿ ಕೊಲೆಯಾಗಿರುವ ಸ್ನೇಹಿತನ ದೇಹ ಮುಚ್ಚಿಡಲು ಮಾಡುವ ಪ್ಲಾನ್‌ಗಳು ಮತ್ತು ದಿಗಂತ್ ಅವರು ಮಾಡುವ ಐಡಿಯಾಗಳು ಹಾಗೂ ಬಚ್ಚಿಟ್ಟ ದೇಹ ಕಾಣೇಯಾದಾಗ ಮೊದಲಾರ್ಧದ ಮುಗಿಯುತ್ತದೆ. ಎರಡನೇ ಭಾಗ ಕೊಂಚ ರೋಚಕವಾಗಿದ್ದು ಕಾಣೆಯಾಗಿರುವ ಸ್ನೇಹಿತನ ದೇಹ ಸಿಕ್ಕಾಗ ಉಳಿದ ಸ್ನೇಹಿತರಲ್ಲಿ ಉಂಟಾಗುವ ಗೊಂದಲಗಳು, ಯಾರು ಕೊಲೆಮಾಡಿರಬಹುದು ಎಂಬ ಪ್ರಶ್ನೇ, ನಮ್ಮಲ್ಲೇ ಒಬ್ಬರು ಕೊಲೆ ಮಾಡಿರಬಹುದು ಎನ್ನುವ ವಾದ ವಿವಾದಗಳು ನಡೆದು, ಪಾರ್ಟಿ ನಡೆಯುವ ಜಾಗಕ್ಕೆ ಸತ್ತಗೆಳೆಯನ ತಂದೆ-ತಾಯಿ ಬರುವ ವಿಷಯ ತಿಳಿದು ಯಾವರೀತಿ ಪರೀಸ್ತಿತಿ ನಿಭಾಯಿಸಬೇಕು ಎನ್ನುವ ಗೊಂದಲಗಳಲ್ಲಿ ಸಿಲುಕಿ ಏನು ತಿಳಿಯದೆ ಕೊನೆಗೆ ಕೊಲೆಯನ್ನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬoತೆ ಕಥೆ ಸೃಷ್ಠಿಸಿ, ಒಂದೇ ಒಂದು ಕ್ಲೂ ಸಿಗದಂತೆ ತಪ್ಪಿಸಿಕೊಳ್ಳುತ್ತಾರೆ.

ಒಟ್ಟಾರೆ ಕಾಮಿಡಿ ಥ್ರಿಲ್ಲೆರ್ ಸಿನಿಮಾವಾಗಿದೆ “ಹುಟ್ಟು ಹಬ್ಬದ ಶುಭಾಷಯಗಳು” ನಾಯಕ ದಿಗಂತ್ ಅಭಿನಯ, ಡೈಲಾಗ್ಸ್, ಮ್ಯಾನರಿಸಂ ಎಲ್ಲವೂ ನೋಡುಗರಿಗೆ ಇಷ್ಟವಾಗುವುದು ಖಚಿತ. ಮೊದಲಾರ್ಧ ಕೊಂಚ ಬೇಸರವಾಗುತ್ತದೆ ಬಿಟ್ಟರೆ, ಸಿನಿಮಾ ಅದ್ಬುತಾವಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ನಾಗರಾಜ್ ಬೇತೂರ್. ಕ್ರಿಸ್ಟಲ್ ಪಾರ್ಕ ಸಿನಿಮಾಸ್‌ನ ಹಿಟ್ ಚಿತ್ರಗಳ ಸಾಲಿನಲ್ಲಿ ಹುಟ್ಟು ಹಬ್ಬದ ಶುಭಾಷಯಗಳು ಸೇರಬಹುದು.

- Advertisement -

Latest Posts

Don't Miss