Web story: ಅಘೋರಿಗಳು, ನಾಗಾಸಾಧುಗಳು ಭಂಗಿ ಸೇದೋದನ್ನು ನೀವು ನೋಡಿರುತ್ತೀರಿ. ಹಾಗಾದ್ರೆ ಯಾಕೆ ನಾಗಾಸಾಧುಗಳು ಭಂಗಿ ಸೇದುತ್ತಾರೆ..? ಕಾರಣವೇನು ಎಂದು ಅಘೋರಭನತ್ ಅಘೋರ ಅವರು ಹೇಳಿದ್ದಾರೆ ಕೇಳಿ.
ಗಣೇಶನಿಗೆ ಗರಿಕೆಪತ್ರೆ, ಶನಿಗೆ ತುಳಸಿ ಪತ್ರೆ, ಶಿವನಿಗೆ ಬಿಲ್ವಪತ್ರೆ, ಸನ್ಯಾಸಿಗೆ ಭಂಗಿ ಪತ್ರೆ ಮತ್ತು ಸಂಸಾರಿಗೆ ತಾಪತ್ರೆ ಅಚ್ಚುಮೆಚ್ಚಂತೆ. ಏಕೆಂದರೆ ಸಂಸಾರಿಯಾದವನಿಗೆ ಜೀವನದಲ್ಲಿ ತಾಪತ್ರಯಗಳೇ ಹೆಚ್ಚು. ಅದೇ ರೀತಿ ಸನ್ಯಾಸಿಗೆ ಅಂದ್ರೆ ನಾಗಾಸಾಧು, ಅಘೋರಿಗಳಿಗೆ ಪ್ರಪಂಚದ ಯಾವ ವಿಷಯದ ಮೇಲೂ ಮೋಹವಿರುವುದಿಲ್ಲ. ಕುತೂಹಲವಿರುವುದಿಲ್ಲ. ಅವರು ತಮ್ಮ ಸಾಧನೆ ಮೇಲೆ ಮಾತ್ರ ಗಮನ ನೀಡುತ್ತಾರೆ.
ಅಲ್ಲದೇ ಶಿವನಿಗೆ ಭಂಗಿಸೇವೆ ಅಂದ್ರೆ ಇಷ್ಟ. ಹಾಗಂತ ಅಘೋರಿಗಳು ಇಡೀ ದಿನ ಭಂಗಿ ಸೇದುವುದಿಲ್ಲ. ಅದಕ್ಕೆ ಇಂತಿಷ್ಟು ಸಮಯವಿರುತ್ತದೆ. ಆ ಸಮಯದಲ್ಲಿ ಉನ್ಮತ್ತರಾಗಿ, ಶಿವನಲ್ಲಿ ಲೀನರಾಗಲು ಭಂಗಿ ಸೇದಲಾಗುತ್ತದೆ. ಮತ್ತು ಅದಕ್ಕೆ ಹಲವು ನಿಯಮಗಳೂ ಇದೆ ಅಂತಾರೆ ಡಾ.ಅಗರಭನತ್ ಅಘೋರ. ಸಂಪೂರ್ಣ ಮಾಹಿತಿಗಾಗಿ ವೀಡಿಯೋ ನೋಡಿ.