Wednesday, February 5, 2025

Latest Posts

ಟ್ರೋಫಿ ಗೆದ್ದ ಮಾತ್ರಕ್ಕೆ ನಾನು ವಿರಾಟ್ ಅವರಿಗೆ ಸಮನಲ್ಲ: ಸ್ಮೃತಿ ಮಂದನ

- Advertisement -

Sports news: ಐಪಿಎಲ್ ಟ್ರೋಫಿ ಗೆಲ್ಲುವ ಕನ್ನಡಿಗರ ಹಲವು ವರ್ಷಗಳ ಆಸೆ ಇತ್ತೀಚೆಗಷ್ಟೇ ಈಡೇರಿಸಿದ್ದ, ಆರ್‌ಸಿಬಿ ಮಹಿಳಾ ಕ್ರಿಕೇಟ್ ಟೀಮ್ ಕ್ಯಾಪ್ಟನ್ ಸ್ಮೃತಿ ಮಂದನ, ಮಾಧ್ಯಮದವರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಅಲ್ಲದೇ, ಕೆಲ ಮಾತುಗಳನ್ನು ಆಡಿದ್ದಾರೆ.

ಇದುವರೆಗೂ ಐಪಿಎಲ್ ಪುರುಷರ ಟೀಂ ಮಾಡದ ಸಾಧನೆಯನ್ನು ಮಹಿಳಾ ತಂಡ ಮಾಡಿದ್ದು, ಇದಕ್ಕಾಗಿ ಸ್ಮೃತಿ ಮಂದನ ಸೇರಿ, ಹಲವು ಆಟಗಾರ್ತಿಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಅಲ್ಲದೇ, ಸ್ಮೃತಿ ಮಂದನ ಮತ್ತು ವಿರಾಟ್ ಕೊಹ್ಲಿಯನ್ನು ಜನ ಹೋಲಿಕೆ ಮಾಡಿ ಮಾತನಾಡುತ್ತಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸ್ಮೃತಿ ಮಂದನ, ನಾನು ಟ್ರೋಫಿ ಗೆದ್ದಿರುವ ಮಾತ್ರಕ್ಕೆ, ವಿರಾಟ್ ಕೊಹ್ಲಿಗೆ ಸಮನಾಗಲ್ಲ ಎಂದಿದ್ದಾರೆ. ನನ್ನ ಪ್ರಕಾರ ಇಂಥ ಹೋಲಿಕೆ ಸರಿಯಲ್ಲ. ನನ್ನ ಕ್ರಿಕೇಟ್ ಕೇರಿಯರ್‌ಗೂ, ಸಾಧನೆಗಳೇ ತುಂಬಿರುವ ವಿರಾಟ್ ಕೊಹ್ಲಿ ಕ್ರಿಕೇಟ್ ಕೇರಿಯರ್‌ಗೂ ಹೋಲಿಕೆ ಮಾಡಲು ಸಾಧ್ಯವೇ ಇಲ್ಲ. ಅವರ ಸಾಧನೆ ಮುಂದೆ ನಮ್ಮದು ಏನೇನೂ ಅಲ್ಲ. ಅವರು ಕ್ರಿಕೇಟ್ ವೃತ್ತಿ ಜೀವನದಲ್ಲಿ ಅಗಾಧವಾದ ಸಾಧನೆ ಮಾಡಿದ್ದಾರೆ. ಹಲವರಿಗೆ ಸ್ಪೂರ್ತಿಯಾಗಿದ್ದಾರೆ ಎಂದು ಸ್ಮೃತಿ ಮಂದನ ಹೇಳಿದ್ದಾರೆ.

ಈಗಾಗಲೇ ಐಪಿಎಲ್ ಟ್ರೋಫಿ ಗೆದ್ದು ಕೊಟ್ಟು ಎಲ್ಲರ ಅಚ್ಚುಮೆಚ್ಚಿನ ಆಟಗಾರ್ತಿಯಾಗಿರುವ ಸ್ಮೃತಿ, ಇಂಥ ಮಾತನ್ನಾಡಿ, ಕ್ರಿಕೇಟ್ ಪ್ರೇಮಿಗಳ, ಕೊಹ್ಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಭಾರತೀಯ ವಿದ್ಯಾರ್ಥಿ ಯುಎಸ್‌ನಲ್ಲಿ ಶವವಾಗಿ ಪತ್ತೆ: 2024ರ 9ನೇ ಕೊ*ಲೆ ಕೇಸ್ ಇದು..

ಟಿಕೇಟ್ ಕೈ ತಪ್ಪಿದ್ದಕ್ಕೆ ಬಿಜೆಪಿ ಸಂಸದ ಮುನಿಸ್ವಾಮಿ ಏನು ಹೇಳಿದರು ಗೊತ್ತಾ..?

10 ದಿನದಲ್ಲಿ 100 ಕೋಟಿ ಗಳಿಕೆ ದಾಟಿದ ಶೈತಾನ್ ಸಿನಿಮಾ

- Advertisement -

Latest Posts

Don't Miss