Saturday, December 6, 2025

Latest Posts

ಪಕ್ಷದ ನಾಯಕರು ಹೇಳಿದ್ರೆ ನಾನು ಸ್ಪರ್ಧೆಗೆ ಸಿದ್ದ: ಮಾಜಿ ಸಿಎಂ ಜಗದೀಶ್ ಶೆಟ್ಟರ್

- Advertisement -

Hubballi News: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್,  ನಾನು ಘರವಾಪ್ಸಿಯಾದ ಬಳಿಕ ಯಾವ ಕ್ಷೇತ್ರವನ್ನೂ ಕೇಳಿಲ್ಲ. ಪಕ್ಷದ ತೀರ್ಮಾನ ಅಂತಿಮ ಎಂದು ಹೇಳಿದ್ದಾರೆ.

ಹಾವೇರಿ ,ಬೆಳಗಾವಿಯಿಂದ ನನ್ನ ಕರೀತೀದಾರೆ. ಆದ್ರೆ ಧಾರವಾಡಕ್ಕೆ ಬಹಳ ಜನ‌ ಕರೀತೀದಾರೆ. ನನಗೆ ಲೋಕಸಭೆಗೆ ಅವಕಾಶ ಸಿಕ್ಕರೂ ಹೋಗಿರಲಿಲ್ಲ. ಮೂರು ಸಲ ಅವಕಾಶ ಬಂದಿತ್ತು, ಆದ್ರೆ ನನಗೆ ಇಂಟ್ರಸ್ಟ್ ಇರಲಿಲ್ಲ. ಆದ್ರೆ ಇದೀಗ ಜನರ ಒತ್ತಡವಿದೆ. ಪಕ್ಷದ ನಾಯಕರು ಹೇಳಿದ್ರೆ ನಾನು ಸ್ಪರ್ಧೆಗೆ ಸಿದ್ದ. ಹುಬ್ಬಳ್ಳಿ ಧಾರವಾಡಕ್ಕೆ ಬಹಳ ಜನ ಬೆಂಬಲ ತೋರಸ್ತೀದಾರೆ. ನಾನು ಯಾವ ಅಭ್ಯರ್ಥಿ‌ಪರವಾಗಿ ಮಾತಾಡಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಜೋಶಿ ಹಾಗೂ ಶೆಟ್ಟರ ಮುನಿಸಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಶೆಟ್ಟರ್,  ನಾನು ಎಲ್ಲಿ ಏನು ಹೇಳಬೇಕು ಅದನ್ನು ಹೇಳಿದ್ದೇನೆ. ಹಾವೇರಿ ಜಿಲ್ಲೆಯಿಂದ ಅನೇಕರು ಬಂದು ಕರೀತೀದಾರೆ. ಡಿಕೆ ಶಿವಕುಮಾರ್ ಸುಳ್ಳು ಹೇಳತೀದಾರೆ. ಸುಳ್ಳು ಆಪಾದನೆ ನಿಲ್ಲಿಸಿ. ಶಾಮನೂರ ಶಿವಶಂಕ್ರಪ್ಪ ಅವರೆ ಆರೋಪ ತಳ್ಳಿ ಹಾಕಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.

ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಎ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

- Advertisement -

Latest Posts

Don't Miss