ನಾನು ಮಾಂಸಾಹಾರವನ್ನೇ ಸೇವಿಸುವುದಿಲ್ಲ: ಗೋಮಾಂಸ ಇಷ್ಟವೆಂಬ ಆರೋಪಕ್ಕೆ ಕಂಗನಾ ತಿರುಗೇಟು..

Political News: ವಿಜಯ್ ವಾಡೆತ್ತಿವಾರ್ ಎಂಬ ಕಾಂಗ್ರೆಸ್ ನಾಯಕರೊಬ್ಬರು ಭಾಷಣದ ವೇಳೆ, ಕಂಗನಾ ತಮಗೆ ಗೋಮಾಂಸ ಎಂದರೆ ಬಲು ಇಷ್ಟ ಎಂದಿದ್ದರು ಎಂದು ಹೇಳಿದ್ದರು. ಇದಕ್ಕೆ ಕಂಗನಾ ತಿರುಗೇಟು ನೀಡಿದ್ದುಸ ತಾನು ಗೋಮಾಂಸ ಸೇವನೆ ಮಾಡುವುದೇ ಇಲ್ಲವೆಂದು ಹೇಳಿದ್ದಾರೆ.

ನನ್ನ ಬಗ್ಗೆ ಇಂಥ ಮಾಹಿತಿಗಳನ್ನು ಹರಡುತ್ತಿರುವುದು ನಾಚಿಕೆಗೇಡಿನ ಸಂಗತಿ. ನಾನು ಮಾಂಸಾಹಾರವನ್ನೇ ಸೇವಿಸುವುದಿಲ್ಲ. ಅಲ್ಲದೇ, ನಾನು ಆಯುರ್ವೇದವನ್ನು ಅಳವಡಿಸಿಕೊಂಡು ಬದುಕುತ್ತಿದ್ದೇನೆ. ಯೋಗ ಮಾಡುತ್ತೇನೆ ಎಂದು ಕಂಗನಾ ರಾಣಾವಾತ್ ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಕೇಳಿಬರು್ತತಿದ್ದ ಮಾತಿಗೆ ತಿರುಗೇಟು ನೀಡಿದ್ದಾರೆ.

ಅಲ್ಲದೇ, ಕಂಗನಾ ರಾಣಾವತ್ ಲೋಕಸಭಾ ಚುನಾವಣೆಗೆ ಹಿಮಾಚಲ ಪ್ರದೇಶದ ಮಂಡಿಯಿಂದ ಸ್ಪರ್ಧಿಸುತ್ತಿದ್ದು. ಅವರ ಹೆಸರಿಗೆ ಧಕ್ಕೆ ಬರಬೇಕೆಂದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆಂದು ಕಂಗನಾ ಆರೋಪಿಸಿದ್ದಾರೆ. ಅಲ್ಲದೇ, ಈ ರೀತಿಯ ಹೇಳಿಕೆಗಳು, ಕುತಂತ್ರಗಳಿಂದ ನನ್ನ ಹೆಸರು ಹಾಳು ಮಾಡಲು ಸಾಧ್ಯವಿಲ್ಲ. ಜನರಿಗೆ ನಾನು ಏನು ಅಂತ ಗೊತ್ತಿದೆ. ಹಿಂದೂತ್ವವನ್ನು ಬೆಂಬಲಿಸುವ ಬಗ್ಗೆ, ಮತ್ತು ಪಾಲಿಸುವ ಬಗ್ಗೆಯೂ ಜನರಿಗೆ ಗೊತ್ತಿದೆ ಎಂದು ಕಂಗನಾ ಹೇಳಿದ್ದಾರೆ.

ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ: ಗುಂಡೂರಾವ್ ಪತ್ನಿ ತಬ್ಬು

ಲೋಕಸಭೆ ಚುನಾವಣೆ 2024: ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ

ಕನ್ನಡ ಮಾಧ್ಯಮ ಲೋಕದಲ್ಲಿ ಹೊಸ ಸಂಚಲನ.. “ಗ್ಯಾರಂಟಿ ನ್ಯೂಸ್”..!

About The Author