Tuesday, January 14, 2025

Latest Posts

ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ: ಗುಂಡೂರಾವ್ ಪತ್ನಿ ತಬ್ಬು

- Advertisement -

Political News: ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್‌ ದಿನೇಶ್ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವೇ ಇದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ದಿನೇಶ್ ಗುಂಡೂರಾವ್ ಪತ್ನಿ ತಬ್ಬು ಆಕ್ರೋಶ ಹೊರಹಾಕಿದ್ದು, ಯತ್ನಾಳ್ ಅವರು ಇನ್ನು ಎಷ್ಟು ದಿನ ಮುಸ್ಲಿಂ ವಿರೋಧಿ ಕಾರ್ಡ್ ಪ್ಲೇ ಮಾಡುತ್ತಾರೆ..? ಇವರ ಮಾತನ್ನು ಕೇಳಿ ಕೇಳಿ ಸಾಕಾಗಿ ಹೋಗಿದೆ. ನಾನು ಇವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ ಎಂದಿದ್ದಾರೆ.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ತಬ್ಬು, ಅವರು ರಾಜಕೀಯ ವಿಷಯಗಳನ್ನಷ್ಟೇ ಮಾತನಾಡಬೇಕು. ನನ್ನ ಪತಿ ದಿನೇಶ್ ಗುಂಡೂರಾವ್ ಓರ್ವ ರಾಜಕಾರಣಿ, ಯತ್ನಾಳ್ ಅವರು ರಾಜಕಾರಣದ ಬಗ್ಗೆ, ರಾಜಕಾಾರಣಿಯ ಬಗ್ಗೆ ಮಾತನಾಡಬಹುದು. ಆದರೆ ಅವರ ಕುಟುಂಬಸ್ಥರ ಬಗ್ಗೆ ಮಾತನಾಡಬಾರದು. ಮುಸ್ಲಿಂಮರ ಬಗ್ಗೆ ಇವರ ಮಾತುಗಳನ್ನು ಕೇಳಿ ಕೇಳಿ ಸಾಕಾಗಿದೆ. ಇನ್ನೆಷ್ಟು ದಿನ ಅವರು ಮುಸ್ಲಿಂ ವಿರೋಧಿ ಕಾರ್ಡ್ ಪ್ಲೇ ಮಾಡುತ್ತಾರೆ..? ಹೆಣ್ಣು ಮಕ್ಕಳ ಬಗ್ಗೆ, ಭಾರತ ಮಾತೆಯ ಬಗ್ಗೆ ಗೌರವ ಇಷ್ಟೇನಾ ಎಂದು ತಬ್ಬು ಪ್ರಶ್ನಿಸಿದ್ದಾರೆ. ಅಲ್ಲದೇ, ಯತ್ನಾಳ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವಾಗಿ ತಬ್ಬು ಹೇಳಿದ್ದಾರೆ.

ಲೋಕಸಭೆ ಚುನಾವಣೆ 2024: ಧಾರವಾಡ ಲೋಕಸಭಾ ಕ್ಷೇತ್ರದಿಂದ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ

ತುಷ್ಟೀಕರಣ ರಾಜ್ಯದಲ್ಲಿ ಹನುಮಾನ್ ಚಾಲೀಸ್ ನಿರ್ಬಂಧ ಇದೆಯಾ?: ಪ್ರಹ್ಲಾದ್ ಜೋಶಿ

ಹೆಣ್ಣುಮಕ್ಕಳ ತುಚ್ಛೀಕರಣವನ್ನು ನಮ್ಮ ಸರ್ಕಾರ ಖಂಡಿತ ಸಹಿಸುವುದಿಲ್ಲ: ಅಶ್ವಿನಿ ಪುನೀತ್ ಪರ ನಿಂತ ಸಿಎಂ

- Advertisement -

Latest Posts

Don't Miss