Dharwad News: ಧಾರವಾಡ: ಧಾರವಾಡದ ನಲಗುಂದದಲ್ಲಿ ಶಾಸಕ ಎನ್.ಎಚ್.ಕೋನರೆಡ್ಡಿ ಮಾತನಾಡಿದ್ದು, ಹುಬ್ಬಳ್ಳಿ ತಾ, ನವಲಗುಂದ, ತಾ ಅಣ್ಣಿಗೇರಿ ತಾಲೂಕಿನಲ್ಲಿ ಟೆಂಪಲ್ ರನ್ ಮಾಡುತ್ತಿದ್ದೇವೆ.
ಮಾರ್ಚ್ 29 ಕ್ಕೆ ಪೂರ್ವ ಭಾವಿ ಸಭೆ ಕರೆದಿದ್ದೇವೆ. ಮಾರ್ಚ್ 29 ರ ಬಳಿಕ ಬಹಿರಂಗವಾಗಿ ಪ್ರಚಾರ ಆರಂಭ ಮಾಡುತ್ತೇವೆ. ನವಲಗುಂದ ಕ್ಷೆತ್ರದಲ್ಲಿ ಅತಿ ಹೆಚ್ಚು ಮತಗಳನ್ನ ಕೊಡಲಿಕ್ಕೆ ಜನ ರೆಡಿಯಾಗಿದ್ದಾರೆ. ರಾಜ್ಯದಲ್ಲಿ 15 ರಿಂದ 20 ಕ್ಷೆತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತೆ. ಧಾರವಾಡ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಗೆಲುವು ಖಚಿತ ಎಂದಿದ್ದಾರೆ.
ದಿಂಗಾಲೇಶ್ವರ ಸ್ವಾಮಿಜಿ ಅವರು ಸ್ಪರ್ಧೆ ಮಾಡೋ ವಿಚಾರವಾಗಿ ಮಾತನಾಡಿದ ಕೋನರೆಡ್ಡಿ ಅವರು, ನಾವು ಅವರ ಬಗ್ಗೆ ಮಾತನಾಡಲ್ಲ ಸ್ವಾಮಿಜಿ ಪ್ರಜ್ಞಾವಂತರು ಇದ್ದಾರೆ. ನಾನು ಅವರಿಗೆ ಕಾಂಗ್ರೆಸ್ ಗೆ ಸಪೋರ್ಟ್ ಮಾಡಲು ಕೇಳುತ್ತೇನೆ. ರೈತರ ಖಾತೆಗೆ ದುಡ್ಡು ಜಮಾ ಆಗಬೇಕು. ಯಾವಾಗ ಯಾವಾಗ ಬರಗಾಲ ಬಿದ್ದಾಗ ಕೇಂದ್ರ ಸರಕಾರ ಪರಿಹಾರ ನೀಡಬೇಕು. ಕೇಂದ್ರ ಬರ ಅದ್ಯಯನ ತಂದ ಬಂದು ಎಷ್ಟೋ ತಿಂಗಳಾಗಿದೆ. ಆದರೆ ರೈತರಿಗೆ ಪರಿಹಾರವನ್ನ ಇನ್ನು ಬಿಡುಗಡೆ ಮಾಡಿಲ್ಲ. ಆರ್ಥಿಕ ಇಲಾಖೆಯ ಸಚಿವರು ಸಿದ್ದರಾಮಯ್ಯ ಹೇಳಿದ್ದು ಸುಳ್ಖು ಅಂತಾರೆ..? ಒಂದು ವೇಳೆ ಸಿದ್ದರಾಮಯ್ಯ ಅವರು ಸುಳ್ಳು ಹೇಳಿದ್ದೆ ನಿಜವಾದರೆ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಕೋನರೆಡ್ಡಿ ಹೇಳಿದ್ದಾರೆ. 18,000 ಕೋಟಿ ಹಣ ನಮಗೆ ಕೇಂದ್ರದಿಂದ ಬಿಡುಗಡೆ ಆಗಬೇಕು. ಅಂಕಿ ಅಂಶ ಸಮೇತ ಸಿಎಂ ಬಿಚ್ಚಿಟ್ಟಿದ್ದಾರೆ ಎಂದು ಕೋನರೆಡ್ಡಿ ಹೇಳಿದ್ದಾರೆ.
ಕೋಲಾರ ಸಿದ್ದರಾಮಯ್ಯ ನಾಟಕ ಮಂಡಳಿಯಿಂದ ಹೊಸ ನಾಟಕ “ರಾಜೀನಾಮೆ ಹೈಡ್ರಾಮಾ”: ಪ್ರೀತಂಗೌಡ ವ್ಯಂಗ್ಯ
ಮೈಮೇಲೆ Rs.500/- ನೋಟು ಇಟ್ಟು ಮಲಗಿದ ರಾಜಕಾರಣಿ ಫೋಟೋ ವೈರಲ್.. ಆದರೆ ಸತ್ಯವೇ ಬೇರೆ..
ಮೆದುಳು ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಜಗ್ಗಿ ವಾಸುದೇವ್ ಗುರೂಜಿ