Hyderabad News: ಹೈದರಾಬಾದ್: ಹಿಜಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯನ್ನಾಗಿ ನೋಡಬಯಸುತ್ತೇನೆ ಎಂದು ಸಂಸದ ಅಸಾವುದ್ದೀನ್ ಓವೈಸಿ ಹೇಳಿದ್ದಾರೆ.
ಅಂದರೆ ಓರ್ವ ಮುಸ್ಲಿಂ ಮಹಿಳೆ ಪ್ರಧಾನಮಂತ್ರಿಯಾಗಬೇಕೆಂದು ಬಯಸುತ್ತೇನೆ ಎಂದು ಅಸಾವುದ್ದೀನ್ ಓವೈಸಿ ಹೇಳಿದ್ದಾರೆ. ತನ್ನದೇ ಪಕ್ಷದಿಂದ ಕಣಕ್ಕಿಳಿದಿರುವ ಅಭ್ಯರ್ಥಿ ಅಖ್ತರುಲ್ ಇಮ್ರಾನ್ ಪರ ಪ್ರಚಾರ ಮಾಡಿದರು. ಬಿಹಾರದಿಂದ ಕಣಕ್ಕಿಳಿದಿರುವ ಅಖ್ತರುಲ್ ಪರ ಪ್ರಚಾರ ಮಾಡುವಾಗ ಓವೈಸಿ, ಈ ಮಾತನ್ನು ಹೇಳಿದ್ದು, ಬಿಜೆಪಿ ಮುಸ್ಲಿಂ ಹೆಣ್ಣು ಮಕ್ಕಳಿಂದ ಹಿಜಬ್ ಧರಿಸುವ ಸ್ವಾತಂತ್ರ್ಯ ಕಿತ್ತುಕೊಳ್ಳುತ್ತಿದೆ ಎಂದು ಓವೈಸಿ ಆರೋಪಿಸಿದ್ದಾರೆ.
ಅಲ್ಲದೇ ತಾನು ಬುರ್ಖಾ, ಚಾದರ್, ಹಿಜಬ್ ಧರಿಸುವ ಮಹಿಳೆಯರ ಹಕ್ಕನ್ನು ರಕ್ಷಿಸುವುದಾಗಿ ಓವೈಸಿ ಹೇಳಿದ್ದಾರೆ.
ಬೈಕ್ ಹಾಗೂ ಸಾರಿಗೆ ಬಸ್ ನಡುವೆ ಅಪಘಾತ: ಬೈಕ್ ಸವಾರರು ಸ್ಥಳದಲ್ಲೇ ಸಾವು
ನಮ್ಮ ಪರವಾದ ಸರ್ಕಾರ ಎಂಬ ಮನೋಭಾವ ಅಪರಾಧಿಗಳಿಗೆ ಬಂದಿದೆ: ಪ್ರಹ್ಲಾದ್ ಜೋಶಿ