Tuesday, July 1, 2025

Latest Posts

ಟ್ಯಾನರಿ ರೋಡಲ್ಲಿ ೬ ತಿಂಗಳು ಮೂಕನಾಗಿ ಸಪ್ಲೆಯರ್ ಕೆಲಸ ಮಾಡ್ತಿದ್ದೆ..!

- Advertisement -

ಅದೊಂದು ರೋಚಕ ಅನುಭವ. ಯಶವಂತಪುರ ಬಳಿ ಬಿಕ್ಷೆ ಬೇಡ್ತಾ ಕೂತಿದ್ದೆ, ಬಿಕ್ಷೆಗಾಗಿ ಮೂಕನ ತರಹ ಆಕ್ಟ್ ಮಾಡ್ತಿದ್ದೆ. ಯಾರೋ ಒಬ್ಬ ಧೈತ್ಯ ವ್ಯಕ್ತಿ ಬಂದು, ಹೊಟೆಲ್‌ನಲ್ಲಿ ಸಪ್ಲೆöÊಯರ್ ಆಗಿ ಕೆಲಸ ಮಾಡ್ತೀಯಾ ಅಂತ ಕೇಳಿದ್ರು. ನಾನು ಮೂಕನ ತರಹ ಇದ್ದವನು, ಅನಿವಾರ್ಯವಾಗಿ ಅವರ ಮುಂದೆ ಮೂಕನೇ ಆಗಬೇಕಾಯ್ತು. ಆಮೇಲೆ ೬ ತಿಂಗಳು ಟ್ಯಾನರಿ ರೋಡ್ ಹೋಟೆಲ್‌ನಲ್ಲಿ ಒಂದೂ ಮಾತಾಡದೇ, ಮುಸುರೆ ತಿಕ್ತಾ, ಸಪ್ಲೆöÊಯರ್ ಕೆಲಸ ಮಾಡ್ತಾ ಇದ್ದೆ.
ಒಂದು ದಿನ ಪ್ಲೆಟ್ ಎತ್ತುತ್ತಿರಬೇಕಾದ್ರೆ ಲೋಟ ಕೆಳಗೆ ಬಿತ್ತು. ಓನರ್ ಬಂದು ತಲೆಗೆ ಒಂದು ಏಟು ಬಿಟ್ಟ, ನಾನು ಎಲ್ಲಿತ್ತೋ ಕೋಪ, ತಲೆಗೆ ಯಾಕೋ ಹೊಡೀತೀಯಾ ನಿನ್ನಜ್ಜಿ ಅಂದೆ, ೬ ತಿಂಗಳು ಮಾತಾಡದೇ ಇದ್ದವನನ್ನು ಮೂಕ ಅಂದ್ಕೊAಡಿದ್ರು, ಅವತ್ತು ಮಾತು ಬಂತು ಅಂತ ಅವ್ರಂದುಕೊAಡ್ರು. ಆದ್ರೆ ಜೀವನಕ್ಕಾಗಿ ಏನೇನನ್ನೋ ಮಾಡ್ಬೇಕಾಯ್ತು. ಬೆಂಗಳೂರು ರೈಲ್ವೇಸ್ಟೇಷನ್‌ನಲ್ಲಿ ತಿಂಗಳುಗಟ್ಟಲೆ ಬಿಕ್ಷೆ ಬೇಡಿಕೊಂಡು ಕಾಲ ಕಳೀತಿದ್ದೆ, ರಾತ್ರಿ ಮಲಗಿದ್ರೆ ಬೆಳಗ್ಗೆ ಮದ್ರಾಸ್‌ಲ್ಲರ‍್ತಿದ್ದೆ, ಕೆಲವು ಸಾರಿ ಕೊಲ್ಕತ್ತಾ ಹಿಂಗೆ ಎಲ್ಲೆಲ್ಲೋ ಹೋಗಿದ್ದೀನಿ. ಆದ್ರೆ ಡಾನ್ ಬಾಸ್ಕೋ ಸ್ಕೂಲ್‌ನ ಫಾದರ್ ಬಂದು ರ‍್ಕೊಂಡು ಹೋದ್ರು, ಸ್ನಾನ ಮಾಡಿಸಿ, ಬಟ್ಟೆ ಹಾಕಿಸಿದ್ರು.
ಜೀವನ ಕಲಿಸಿದ್ರು, ಜೀವನ ಕಟ್ಟಿಕೊಟ್ರು. ಅಲ್ಲಿಂದ ಹೀರೋ ಅನ್ನೋ ರಿಯಾಲಿಟಿ ಶೋನಲ್ಲಿ ಆಕ್ಟ್ ಮಾಡ್ದೆ. ಅದರಲ್ಲಿ ಅತಿರಥ ಮಹಾರಥರು ನನ್ನ ಆಕ್ಟಿಂಗ್ ಮೆಚ್ಚಿಕೊಂಡ್ರೂ ಯಾಕೋ ಅವಕಾಶಗಳು ಸಿಗಲಿಲ್ಲ. ಅದಾಗಿ ೧೦ ವರ್ಷ ಕಾಮಿಡಿ ಖಿಲಾಡಿಗಳು ಬಂತು ನನ್ನ ಜೀವನಕ್ಕೆ ದೊಡ್ಡ ತಿರುವು ತಂದುಕೊಡ್ತು. ನನ್ನ ಪೇಂಯ್ಟಿAಗ್ ದೊಡ್ಡ ಮೊತ್ತಕ್ಕೆ ಸೇಲ್ ಆಗ್ತವೆ, ಲಾರೆನ್ಸ್ ತರಹ ಡಾನ್ಸ್ ಮಾಡ್ತೀನಿ, ಮಿಮೀಕ್ರಿ ಮಾಡ್ತೀನಿ. ಎಲ್ಲಾ ಕಲೆಯೂ ಒಲಿದು ಬಂದಿದೆ. ಮುಂದಿನ ಕನಸು ದೊಡ್ಡದಿದೆ, ಹೀಗೆ ತನ್ನ ಬದುಕಿನ ಕಲರ್‌ಫುಲ್ ಪುಟಗಳನ್ನ ತೆರೆದಿಡ್ತಾ ಹೋಗ್ತಾರೆ ಕಾಮಿಡಿ ಖಿಲಾಡಿಗಳು ಲೋಕೇಶ್. ಇವರ ಸಂಪೂರ್ಣ ಬದುಕಿನ ಮನಕಲಕುವ ಕಥೆ ಕೇಳ್ಬೇಕು ಅಂದ್ರೆ ನೀವು ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್ ನೋಡಿ..

ಓಂ
ಕರ್ನಾಟಕ ಟಿವಿ

 

- Advertisement -

Latest Posts

Don't Miss