Thursday, November 7, 2024

Latest Posts

ಲೋಕಸಭೆಗೆ ಟಿಕೆಟ್ ಕೊಟ್ಟರೆ ನಿಲ್ಲುತ್ತೇನೆ. ಇದು ನನ್ನ ಡಿಮಾಂಡ್ ಅಲ್ಲ ರಿಕ್ವೆಸ್ಟ್: ವಿ.ಸೋಮಣ್ಣ

- Advertisement -

Tumakuru News: ತುಮಕೂರು: ಮಾಜಿ ಸಚಿವ ವಿ.ಸೋಮಣ್ಣ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದು, ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ.

ಬೆಳಗ್ಗೆ ಎಲೆರಾಂಪುರ ಹನುಮಂತನಾಥ್ ಸ್ವಾಮೀಜಿ ಭೇಟಿಯಾಗಿದ್ದೆ, ಬಳಿಕ ಸಿದ್ದರ ಬೆಟ್ಟಕ್ಕೆ ಹೋಗಿದ್ದೆ. ಸಿದ್ದಗಂಗಾ ಮಠದ ಗುರುಗಳಿಗೆ ಪೋನ್ ಮಾಡ್ದೆ. ಪ್ರಸಾದಕ್ಕೆ ಮಠಕ್ಕೆ ಬನ್ನಿ ಅಂದ್ರು ಬಂದಿದಿನಿ. ಪರಿಸ್ಥಿತಿ ಅವಲೋಕನ ಮಾಡಿದಿನಿ, ಹೈಕಮಾಂಡ್ ಏನ್ ಹೇಳುತ್ತೆ ಅದನ್ನ ಕೇಳ್ತಿನಿ. ತುಮಕೂರು ಜಿಲ್ಲೆಯಲ್ಲಿ ನಡೆದಾಡುವ ದೇವರು ಇದಿದ್ದು. ಹಾಗಾಗಿ ತುಮಕೂರಿನ ಎಲ್ಲಾ ಮಠಗಳಿಗೆ ಭೇಟಿ ಕೊಡ್ತಿದಿನಿ ಎಂದು ಹೇಳಿದ್ದಾರೆ.

ಬಾಲಗಂಗಾಧರನಾಥ್ ಹಾಗೂ ಸಿದ್ದಗಂಗಾ ಶ್ರೀಗಳು ನನಗೆ ಗುರುಗಳು. ಮಠ ಮಾನ್ಯಗಳು ನನಗೇನು ಹೊಸದಲ್ಲ. ಎಂ.ಪಿ ಬಸವರಾಜ್ ನಮಗೆಲ್ಲಾ ಪೈಲೆಟ್. ಹೈಕಮಂಡ್ ಟಿಕೆಟ್ ಕೊಟ್ರೆ, ನಿಂತಕೋಬೇಕು, ಸ್ಪರ್ಧೆ ಮಾಡ್ಬೇಕು ಅಂದ್ರೆ ಸ್ಪರ್ಧೆ ಮಾಡ್ತಿನಿ. ನಾನು ರಾಜ್ಯಸಭೆಗೆ ಸ್ಪರ್ಧೆ ಮಾಡ್ತಿನಿ ಅಂದಿದ್ದು ನಿಜ. ರಾಜ್ಯಸಭೆಯಲ್ಲಿ ಎಲ್ಲವೂ ಕೊನೆ ಹಂತಕ್ಕೆ ಬಂದಿತ್ತು. ‌ ಆದರೆ ಕೊನೆ ಕ್ಷಣದಲ್ಲಿ ಬದಲಾಗಿ, ಒಬ್ಬ ಒಳ್ಳೆ ಕಾರ್ಯಕರ್ತನಿಗೆ ಕೊಟ್ಟಿದ್ದಾರೆ ನಾನು ಅದನ್ನ ಸ್ವಾಗತ ಮಾಡ್ತಿನಿ. ಲೋಕಸಭೆಗೆ ಟಿಕೆಟ್ ಕೊಟ್ರೆ ನಿಲ್ತೀನಿ. ಇದು ನನ್ನ ಡಿಮಾಂಡ್ ಅಲ್ಲ ರಿಕ್ವೆಸ್ಟ್ ಎಂದು ಸೋಮಣ್ಣ ಹೇಳಿದ್ದಾರೆ.

ಸ್ಥಳೀಯ ನಾಯಕರಿಗೆ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿ ಸೋಮಣ್ಣ, ಮಾಧುಸ್ವಾಮಿ ಅವರು ನಮ್ಮ ಹಿರಿಯ ನಾಯಕರು. ನನಗಿಂತ ಬುದ್ದಿವಂತರು, ಹೋರಾಟದಿಂದ ಬಂದವರು, ವಕೀಲರು. ಸ್ಥಳೀಯರು ಮತ್ತೊಬ್ಬರು ಅನ್ನೋದಕ್ಕಿಂತ, ದೇಶ ಪ್ರಧಾನಿ ಮೋದಿ ಅವರ ಆಡಳಿತ ಬಯಸಿದೆ. ನರೇಂದ್ರ ಮೋದಿ ಅವರು ಗುಜರಾತ್ ನವರು ಎಲ್ಲಿ ಬಂದು ನಿಂತ್ರು. ಮಾಧುಸ್ವಾಮಿ ಅವರು ಹೇಳೋದು ಸಹಜ. ಅದಕ್ಕೆ ನನ್ನ ಭಿನ್ನಾಭಿಪ್ರಾಯ ಏನಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.

ಹೈಕಮಾಂಡ್ ಟಿಕೆಟ್ ಕೊಟ್ರೆ ಸ್ಪರ್ಧೆ ಮಾಡ್ತೀನಿ. ಇದು ಬಿಜೆಪಿ ಕ್ಷೇತ್ರ, ಇಲ್ಲಿ ಬಸವರಾಜು ಅವರು ಎಂ.ಪಿ ಇದ್ದಾರೆ. ವಯಸ್ಸಿನ ಕಾರಣ ಅವರು ಸ್ಪರ್ಧೆ ಮಾಡಲ್ಲ ಅಂತ ತಿರ್ಮಾನ ಮಾಡಿದ್ದಾರೆ. ನಾವು ಬಿಜೆಪಿ ಅವರು ನಮ್ಮ ಹಕ್ಕನ್ನಾ ಪ್ರತಿಪಾದಿಸುತ್ತೀವಿ. ಕ್ಷೇತ್ರ ಯಾರಿಗೆ ಹೋಗಬೇಕು ಎಂಬುದನ್ನ ತಿರ್ಮಾನ ಮಾಡುತ್ತೆ. ಈಗಾಗಲೇ ಎಲ್ಲವನ್ನು ಹೈಕಮಂಡ್ ತಿರ್ಮಾನ ಮಾಡಿದೆ. ನನಗೂ ತುಮಕೂರಿಗೂ ಅವಿನಾಭಾವ ಸಂಬಂಧ ಇದೆ. ಯಾರನ್ನ ಎಲ್ಲೇಲ್ಲಿ ಕರೆಸಿಕೊಳ್ಳಬೇಕು, ಎಲ್ಲೆಲ್ಲಿ ಕೆಲಸ ಮಾಡಿಸಿಕೊಳ್ಳಬೇಕು ಅನ್ನೋದು ಭಗವಂತನ ನಿರ್ಣಯ. ನಾನು ಹೈಕಮಂಡ್ ಟಿಕೆಟ್ ಕೊಟ್ರೆ ತುಮಕೂರಿನಲ್ಲಿ ಸ್ಪರ್ಧೆ ಮಾಡ್ತಿನಿ. ತುಮಕೂರು ಬೇಡ ಬೇರೆ ಕಡೆ ಸ್ಪರ್ಧೆ ಮಾಡು ಅಂದ್ರೆ ಮಾಡ್ತಿನಿ. ನಾನು ಎಲ್ಲದಕ್ಕೂ ತಯಾರಿದಿನಿ ಎಂದು ಸೋಮಣ್ಣ ಹೇಳಿದ್ದಾರೆ.

ದೇವೆಗೌಡರ ಸೋಲಿನ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸೋಮಣ್ಣ, ಪರಿಸ್ಥಿತಿ ಎಲ್ಲಾ ಒಂದೇ ರೀತಿ ಇರಲ್ಲ. ಒಂದೊಂದು ಸಮಯಕ್ಕೆ ಒಂದೊಂದು ಪರಿಸ್ಥಿತಿ ಬರುತ್ತೆ. ದೇಶದಲ್ಲಿ ಮೋದಿ ಎಷ್ಟು ಅವಶ್ಯಕತೆ ಅನ್ನೊದು ಜನರಿಗೆ ಗೊತ್ತಿದೆ. ಕಳೆದ ಬಾರಿ ಬಸವರಾಜ್ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನಾನೇ ಉಸ್ತುವಾರಿ ಇದ್ದೆ. ನಾನು ಒಂದು ಸಾವಿರ ಹಳ್ಳಿಗಳ ಹೆಸರು ಹೇಳ್ತಿನಿ ತುಮಕೂರಿನಲ್ಲಿ. ನನಗೆ ಜಿಲ್ಲೆಯಲ್ಲಿ ಸಾವಿರಾರು ಜನ ಗೊತ್ತಿದ್ದಾರೆ. ಜಿಲ್ಲೆಯಲ್ಲಿ ಮೂರು ಬಾರಿ ಉಸ್ತುವಾರಿಯಾಗಿ ನಾನು ಸಾಕಷ್ಟು ಕೆಲಸ ಮಾಡಿದಿನಿ. ಮಾಧುಸ್ವಾಮಿ ಅಭಿಪ್ರಾಯಕ್ಕೆ ನನ್ನದೇನು ವಿರೋಧ ಇಲ್ಲ. ನನ್ನದು ಅನುಭವಗಳಿವೆ, ಚಿಂತನೆಗಳಿವೆ, ಯಡಿಯೂರಪ್ಪನವರು ನಮ್ಮ ನಾಯಕರು, ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಡಿಸಿಷನ್ ಮಾಡಿದ್ದು ಒಬ್ಬ ಸೋಮಣ್ಣ ಮಾತ್ರ. ಇದು ಎಲ್ಲರ ಕೈಯಲ್ಲಿ ಆಗಲ್ಲ. ನಾನು ಗೆದಿದ್ರೆ, ಏನ್ ಆಗ್ತಿದ್ದೆ ಅನ್ನೋದು ಇಡೀ ದೇಶಕ್ಕೆ ಗೊತ್ತಿದೆ.

ಗೋವಿಂದರಾಜನಗರ ಅಭಿವೃದ್ಧಿ ತರ ತುಮಕೂರು ಯಾಕೆ ಆಗಬಾರದು..? ನಾನೊಬ್ಬ ಕೆಲಸಗಾರ, ನನ್ನನ್ನ ಹಗ್ಗದಲ್ಲಿ ಕಟ್ಟಿಹಾಕಿ ಕುರಿಸಿದ್ರೆ ನಾನು ಕುರಲ್ಲ. ನನಗೆ ಗೋವಿಂದರಾಜನಗರದಲ್ಲಿ ಟಿಕೆಟ್ ಕೊಟ್ಟಿದ್ರೆ ಇದೆಲ್ಲಾ ಬರ್ತಿತ್ತಾ..? ಈ ದೇಶ ಫೆಡರಲ್ ಟ್ರಚರಲ್ ನಲ್ಲಿ ನಡಿತಿದೆ. ಒಬ್ಬೊಬ್ಬರು ಒಂದೊಂದು ಮಾದರಿಯಲ್ಲಿ ನಡಿತಿದೆ. ಸೋನಿಯಾಗಾಂಧಿಗೂ ರಾಜಸ್ಥಾನಕ್ಕೂ ಏನ್ ಸಂಬಂಧ ಇತ್ತು. ಮಕ್ಕನ್ ಅವರನ್ನ ಯಾಕೆ ಬೆಂಗಳೂರಿಗೆ ತಂದು ನಿಲ್ಲಿಸಿದ್ರು ಎಂದಿದ್ದಾರೆ.

2003 ರಲ್ಲಿ ಬೆಂಗಳೂರಿನಲ್ಲಿ ನಾನೊಬ್ಬನೇ ಗೆದಿದ್ದು. ದೇವೆಗೌಡರ ಖುಣ ಇದೆ ಅಂತ ಹೋಗಿ ತಿರಿಸಿದವನು ನಾನೊಬ್ಬನೇ. ದೇವೆಗೌಡರು ಮತ್ತೆ ಜನತಾದಳದ ವಿರುದ್ಧ ನಾನೇನು ಮಾಡಿಲ್ಲ. ಪಕ್ಷ ನನಗೆ ಏನ್ ಜವಾಬ್ದಾರಿ ಕೊಟ್ಟಿದೆ ಅದನ್ನ ನಾನು ಮಾಡಿದಿನಿ. ದೇವೆಗೌಡರ ಜೊತೆ 28 ವರ್ಷ ಇದಿನಿ ಅವರ ಹತ್ರನೇ ನಾನು ರಾಜಕೀಯ ಎಬಿಸಿಡಿ ಕಲಿತಿದ್ದು. ನಾನು ಅಪಚಾರದ ಮಾತನ್ನ ಆಡಿಲ್ಲ ಎಲ್ಲೂ. ಇವತ್ತು ಜೆಡಿಎಸ್ ಬಿಜೆಪಿ ಹೊಂದಲಾಗಿದೆ. ದೇವೆಗೌಡರೇ ಮೋದಿ ಪ್ರಧಾನಿ ಆಗ್ಬೇಕು ಅಂತ ಬಯಸಿದ್ದಾರೆ ಎಂದು ಸೋಮಣ್ಣ ತುಮಕೂರಿನಲ್ಲಿ ಹೇಳಿದ್ದಾರೆ.

ಉತ್ತರಪ್ರದೇಶದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಯತ್ನಿಸಿದವರ ಬಂಧನ

ಮದ್ಯನೀತಿ ಪ್ರಕರಣ: ಕೊನೆಗೂ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾದ ದೆಹಲಿ ಸಿಎಂ

ಉತ್ತರಪ್ರದೇಶದಲ್ಲಿ ಇನ್ನು 6 ತಿಂಗಳು ಪ್ರತಿಭಟನೆ ನಡೆಸುವಂತಿಲ್ಲ: ಸಿಎಂ ಯೋಗಿ ಆದಿತ್ಯನಾಥ್

- Advertisement -

Latest Posts

Don't Miss