Hubli News: ಹುಬ್ಬಳ್ಳಿ: ಕಳೆದ ನಾಲ್ಕು ದಿನಗಳಿಂದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ನಡೆಯುತ್ತಿದ್ದ ಚಿಕಿತ್ಸೆಗೆ ಸ್ಪಂದಿಸದೆ ರಾಜೂ (16) ಮಾಲಾಧಾರಿ ಕೊನೆಯುಸಿರೆಳೆದಿದ್ದಾನೆ. ನಿನ್ನೆ ನಿಜಲಿಂಗಪ್ಪ ಬೇಪುರಿ(58), ಸಂಜಯ ಸವದತ್ತಿ (18) ಮೃತರಾಗಿದ್ದರು. ಸಿಲಿಂಡರ್ ಸೋರಿಕೆಯಾಗಿ ಸ್ಪೋಟಗೊಂಡು, 9 ಜನ ಮಾಲಾಧಾರಿಗಳು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅದರಲ್ಲಿ ಮೂವರು ಮಾಲಾಧಾರಿಗಳು ಮೃತಪಟ್ಟಿದ್ದಾರೆ. ಉಳಿದವರಿಗೆ ಚಿಕಿತ್ಸೆ ಮುಂದುವರಿದಿದೆ.
ವಿಷಯ ತಿಳಿಯುತ್ತಿದ್ದಂತೆ ಸಚಿವ ಸಂತೋಷ್ ಲಾಡ್, ಜಿಲ್ಲಾಧಿಕಾರಿ ದಿವ್ಯ ಪ್ರಭು ಆಸ್ಪತ್ರೆಗೆ ಧಾವಿಸಿ, ಮೃತರ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡಿರುವ ಸಂತೋಷ್ ಲಾಡ್, ರಾಜು 16 ವರ್ಷದ ಬಾಲಕನ್ನ ಕಳೆದುಕೊಂಡಿದ್ದೇವೆ. ನುರಿತ ವೈದ್ಯರ ಜೊತೆ ಚಿಕಿತ್ಸೆ ಕೊಡಿಸಿದ್ವಿ. ಅದರೂ ಮೃತಪಟ್ಟಿದ್ದಾನೆ. ಈಗಾಗಲೇ 5 ಲಕ್ಷ ರುಪಾಯಿ ಪರಿಹಾರ ಘೋಷಣೆ ಮಾಡಿದೆ. ಹೆಚ್ಚಿನ ಪರಿಹಾರ ಕೊಡಿಸುವ ದೊಡ್ಡ ಕೆಲಸವಲ್ಲ, ಅವರನ್ನ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇವೆ. ಆ ಕುಟುಂಬ ಹೆಚ್ಚಿನ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾರೆ.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಸಂತೋಷ್ ಲಾಡ್ ಸಂತಾಪ ಸೂಚಿಸಿದ್ದು, ಈ ದೇಶ ಕಂಡ ಸರಳ ಸಜ್ಜನ ರಾಜಕಾರಣಿ, ಆರ್ಥಿಕ ತಜ್ಞರು. ದೇಶದ ಆರ್ಥಿಕತೆಯ ಬಹಳಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ದೇಶ ಅವರನ್ನ ಕಳೆದುಕೊಂಡು ಬಡವಾಗಿದೆ. ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಪ್ರಾರ್ಥನೆ ಮಾಡುತ್ತೇನೆ. ದೇಶವನ್ನ ಕಟ್ಟುವಲ್ಲಿ ಮಹತ್ವದ ಪಾತ್ರ ಇದೆ ಎಂದಿದ್ದಾರೆ.