ಟೀಮ್ ಇಂಡಿಯಾ ವಿಶ್ವಕಪ್ ಕನಸು ನನಸಾಗೋದಕ್ಕೆ ಇನೇರಡೆ ಹೆಜ್ಜೆ. ಲೀಗ್ ಪಂದ್ಯಗಳಲ್ಲಿ ಭರ್ಜರಿ ಪರ್ಫಾರ್ಮೆನ್ಸ್ ನೀಡಿದ ಕೊಹ್ಲಿ ಪಡೆ, ಸೆಮಿಫೈನಲ್ ನಲ್ಲೂ ಅಂತಹದ್ದೇ ಪ್ರದರ್ಶನ ನೀಡುವ ತಯಾರಿಯಲ್ಲಿದೆ. ಹಾಗಾದ್ರೆ ಇಂದು ನ್ಯೂಜಿಲೆಂಡ್ ಎದುರು ಕಣಕ್ಕಿಳಿಯೋ ಪ್ಲೇಯಿಂಗ್ ಇಲೆವೆನ್ ಹೇಗಿರುತ್ತೆ..? ಯಾರೆಲ್ಲ ಅಖಾಡಕ್ಕಿಳಿತಾರೆ ಅನ್ನೋ ಕುತೂಹಲ ಪ್ರತಿಯೊಬ್ಬರಿಗೂ ಇದೆ..
ಓಪನರ್ಸ್
ರೋಹಿತ್ ಶರ್ಮಾ- ಕೆ ಎಲ್ ರಾಹುಲ್
ಶಿಖರ್ ಧವನ್ ಅನುಪಸ್ಥಿತಿಯಲ್ಲಿ ರೋಹಿತ್-ರಾಹುಲ್ ಜೋಡಿ, ತಂಡಕ್ಕೆ ಉತ್ತಮ ಆರಂಭ ನೀಡುತ್ತಿದೆ. ಲೀಗ್ ನಲ್ಲಿ ಮೂರು ಬಾರಿ ಶತಕದ ಜೊತೆಯಾಟ ನೀಡಿರುವ ಈ ಜೋಡಿಯಿಂದ, ಮತ್ತೊಂದು ಅಂತಹದ್ದೇ ಇನಿಂಗ್ಸ್ ಮೂಡಿ ಬರಬೇಕಿದೆ. ನ್ಯೂಜಿಲೆಂಡ್ ವೇಗಿಗಳಾದ ಟ್ರೆಂಟ್ ಬೌಲ್ಟ್ ಮತ್ತು ಲಾಕಿ ಫರ್ಗುಸನ್ ಎದುರು ಎಚ್ಚರಿಕೆಯ ಬ್ಯಾಟಿಂಗ್ ನಡೆಸಬೇಕಿದೆ. ಈ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದ್ರೆ, ಫೈನಲ್ ತಲುಪುವುದು ಪಕ್ಕ..
ಮಿಡಲ್ ಆರ್ಡರ್
ವಿರಾಟ್ ಕೊಹ್ಲಿ, ರಿಷಬ್ ಪಂತ್, ದಿನೇಶ್ ಕಾರ್ತಿಕ್
ಮಿಡಲ್ ಆರ್ಡರ್ ನಲ್ಲಿ ವಿರಾಟ್ ಕೊಹ್ಲಿ, ತಂಡದ ಶಕ್ತಿಯಾಗಿದ್ದಾರೆ. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡುತ್ತ ಬಂದಿರುವ ಕಿಂಗ್ ಕೊಹ್ಲಿ ಬ್ಯಾಟ್ ನಿಂದ, ಮತ್ತೊಂದು ದೊಡ್ಡ ಇನಿಂಗ್ಸ್ ಮೂಡಿ ಬರಬೇಕಿದೆ. ಇನ್ನು ಯಂಗ್ ಕ್ರಿಕೆಟರ್ ರಿಷಬ್ ಪಂತ್ ಕಳೆದ ಪಂದ್ಯಗಳಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರಾದ್ರು, ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಎಡವಿದ್ರೂ, ಹೀಗಾಗಿ ಕಳೆದ ಪಂದ್ಯಗಳಲ್ಲಿ ಮಾಡಿದ ತಪ್ಪುಗಳು ಮರುಕಳಿಸದಂತೆ ಎಚ್ಚರ ವಹಿಸಬೇಕಿದೆ. ಇನ್ನೂ ಮಿಡಲ್ ಆರ್ಡರ್ ನಲ್ಲಿ ಸ್ಥಾನ ಪಡೆಯಲಿರುವ ದಿನೇಶ್ ಕಾರ್ತಿಕ್, ತಮ್ಮ ಜವಾಬ್ದಾರಿ ನಿಭಾಯಿಸಿದಲ್ಲಿ ಯಾವುದೇ ತೊಂದರೆ ಇಲ್ಲ.
ವಿಕೆಟ್ ಕೀಪರ್ & ಆಲ್ ರೌಂಡರ್
ಧೋನಿ, ಪಾಂಡ್ಯ, ಜಡೇಜಾ
ಎಂದಿನಂತೆ ವಿಕೆಟ್ ಕೀಪರ್ ಜವಾಬ್ದಾರಿ ನಿಭಾಯಿಸಲಿರುವ ಧೋನಿ, ವಿಕೆಟ್ ಹಿಂದೆ ಮತ್ತು ವಿಕೆಟ್ ಮುಂದೆ ಕಮಾಲ್ ಮಾಡಬೇಕಿದೆ. ಉಳಿದಂತೆ ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಬ್ಯಾಟಿಂಗ್ ಜೊತೆಗೆ ಬೌಲಿಂಗ್ ನಲ್ಲೂ ಮಿಂಚಬೇಕಿದೆ.
ಬೌಲರ್ಸ್
ಭುವಿ, ಬೂಮ್ರಾ, ಶಮಿ
ಮ್ಯಾಂಚೆಸ್ಟರ್ ನ ಓಲ್ಡ್ ಟ್ರಫರ್ಡ್, ವೇಗಿಗಳಿಗೆ ಅನುಕೂಲವಾಗಿದೆ. ಹೀಗಾಗಿ ವೇಗಿಗಳಾದ ಭುವನೇಶ್ವರ್ ಕುಮಾರ್, ಜೆಸ್ಪ್ರೀತ್ ಬೂಮ್ರಾ ಮತ್ತು ಮೊಹಮ್ಮದ್ ಶಮಿ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನಲಾಗುತ್ತಿದೆ. ಟೀಮ್ ಇಂಡಿಯಾ ದ ತ್ರಿಮೂರ್ತಿಗಳು ಉತ್ತಮ ಫಾರ್ಮ್ ನಲ್ಲಿದ್ದು, ಕಿವೀಸ್ ವಿರುದ್ಧ ಉತ್ತಮ ದಾಳಿ ಸಂಘಟಿಸಿದಲ್ಲಿ ಗೆಲುವು ಕಷ್ಟವೇನಲ್ಲ.
ಒಟ್ಟಾರೆ ಟೂರ್ನಿಯುದ್ದಕ್ಕೂ ಕೊಹ್ಲಿ ಬಾಯ್ಸ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೂ ಕೂಡ ಕಳೆದ ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳುವಲ್ಲಿ ಎಡವಿದ್ದ, ಸ್ಪಿನ್ನರ್ ಗಳಾದ ಕುಲ್ ದೀಪ್ ಯಾದವ್ ಮತ್ತು ಯಜುವೇಂದ್ರ ಚಹಲ್ ಬದಲು ಅನುಭವಿ ರವೀಂದ್ರ ಜಡೇಜಾ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಕನ್ಫರ್ಮ್. ಒಂದು ವೇಳೆ ಇಬ್ಬರು ಸ್ಪಿನ್ನರ್ ಗಳನ್ನ ಕಣಕ್ಕಿಳಿಸುವ ತಿರ್ಮಾನಕ್ಕೆ ಬಂದಲ್ಲಿ ದಿನೇಶ್ ಕಾರ್ತಿಕ್ ಅವರನ್ನ ಕೈ ಬಿಟ್ಟು ಕುಲ್ ದೀಪ್ ಯಾದವ್ ಗೆ ಮಣೆ ಹಾಕುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.