Saturday, April 5, 2025

Latest Posts

ಡಿ.ಕೆ.ಶಿವಕುಮಾರ್ ನಿಮ್ಮ ತತ್ವದ ವಿರುದ್ದ ಇದ್ರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ: ಜಗದೀಶ್ ಶೆಟ್ಟರ್

- Advertisement -

Hubli News: ಹುಬ್ಬಳ್ಳಿ: ಡಿ.ಕೆ.ಶಿವಕುಮಾರ್ ನಿಮ್ಮ ತತ್ವದ ವಿರುದ್ದ ಇದ್ರೆ ಅವರನ್ನು ಸಸ್ಪೆಂಡ್ ಮಾಡಿಬಿಡಿ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದ ಅವರು,  ಅವರು ಕುಂಭಮೇಳಕ್ಕೆ ಹೋಗಿರೋದು, ಕೊಯಮತ್ತೂರಗೆ ಹೋಗಿರೋದು ಸಹಜ.
ಇದರಲ್ಲಿ ದೊಡ್ಡಸ್ಥಿಕೆ ಏನಿಲ್ಲ. ಇದು ಸರಿ ಆಗಲ್ಲ ಅಂದ್ರೆ,ಡಿಕೆ ಶಿವಕುಮಾರ್ ಸಸ್ಪೆಂಡ್ ಮಾಡಿ. ಅವರು ನಿಮ್ಮ ಪಕ್ಷದ ತತ್ವ ಸಿದ್ದಾಂತಕ್ಕೆ ವಿರೋಧವಾಗಿದ್ರೆ ಅವರನ್ನು ಪಾರ್ಟಿಯಿಂದ ಹೊರಗೆ ಹಾಕಿ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಗೆ ಹಿಂದೂಗಳ ಬಗ್ಗೆ ದ್ವೇಷ ಇದೆ. ಇದರಿಂದ ಕಾಂಗ್ರೆಸ್ ಉದ್ದಾರ ಆಗಲ್ಲ. ಹಿಂದೂಗಳು ಇಲ್ಲದೆ ನೀವು ರಾಜಕಾರಣ ಮಾಡ್ತೀನಿ ಅಂದರೆ ಅದು ನಿಮ್ಮ ಹಣೆಬರಹ.ಹಿಂದೂಗಳನ್ನ ಕೀಳಾಗಿ ಕಾಣೋದೆ,ಅವರ ಅವನತಿಗೆ ಕಾರಣ ಎಂದ ಅವರು ಮಲ್ಲಿಕಾರ್ಜುನ ಖರ್ಗೆ,ಪ್ರಿಯಾಂಕ್ ಖರ್ಗೆ ಅವರ ಹೇಳಿಕೆ ಹಿಂದೂ ವಿರೋಧಿಯಾಗಿವೆ.ಮ
ಈ ದೇಶ ಹಿಂದೂಗಳ ದೇಶ,ಹಿಂದೂ ರಾಷ್ಟ್ರ ಅನ್ನೋ ಪರಂಪರೆ ಇದೆ. ಇದಕ್ಕೆ ಎಲ್ಲಿ ಅಡ್ಡಿಯಾಗಬಾರದು.
ಕಮ್ಯುನಿಸ್ಟರು ಕೂಡಾ ಹಿಂದೂ ದೇವಾಲಯಕ್ಕೆ ಹೋಗಿದ್ದಾರೆ. ಅವರು ಕೂಡಾ ದೇವಸ್ಥಾನಕ್ಕೆ ಹೋಗಿದ್ದಾರೆ. ಕಾಂಗ್ರೆಸ್ ನವರು ಎಷ್ಟು ಜನ ಕುಂಭಮೇಳ ಕ್ಕೆ ಹೋಗಿದ್ದಾರೆ. ರಾಜಕಾರಣ ಕ್ಕೆ ಧರ್ಮಕ್ಕೆ ತಳಕು ಹಾಕಬಾರದು ಎಂದು ಸಲಹೆ ನೀಡಿದರು.

ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಗದೀಶ್ ಶೆಟ್ಟರ್, ನಾನು ಬೆಳಗಾವಿ ಸಂಸದನಾಗಿ ಕೆಲಸ ಮಾಡತಿದೀನಿ ಅಲ್ಲಿನ ಜನ ಎಲ್ಲರೂ ನಂಗೆ ಸಪೋರ್ಟ್ ಮಾಡಿದಾರೆ. ಹಿಂದೆ ಮರಾಠರು, ಮತ್ತು ಕನ್ನಡಿಗರ ನಡುವೆ ಗ್ಯಾಪ್ ಇತ್ತು. ಎಲ್ಲರೂ ಅಣ್ಣ ತಮ್ಮಂದಿರ ತರಹ ಕೆಲಸ ಮಾಡತೀದಾರೆ. ಆದರೆ
ಸಂಘರ್ಷ ಮಾಡಲಿಕ್ಕೆ ಹೋಗಬಾರದು ಆ ಘಟನೆ ಆಗಬಾರದಿತ್ತು. ಹಲ್ಲೆ ಮಾಡಿದವರ ವಿರುದ್ದ ಕ್ರಮ ಆಗಬೇಕು. ಪೊಕ್ಸೋ ಕೇಸ್ ಹಾಕಿದ್ದು ಕೂಡಾ ತಪ್ಪು ಪೊಲೀಸ್ ಅಧಿಕಾರಿ ಮಾಡಿರೋ ತಪ್ಪು ಎಂದ ಶೆಟ್ಟರ್ ಅವರುಪೊಕ್ಸೋ ಕೇಸ್ ಹಾಕಿರೋ ಕಾರಣಕ್ಕೆ ಅದು ಹೆಚ್ಚಿನ ಮಹತ್ವ ಬಂತು. ನಾವೆಲ್ಲರೂ ಭಾರತದಲ್ಲಿದ್ದೇವೆ.
ಪಾಕಿಸ್ತಾನ ಇಂಡಿಯಾ ಸಹೋದರರ ರೀತಿಯಲ್ಲಿ ನಾವ ಬಾಳತಿದಿವಿ. ಅದು ಡಿಸ್ಟರ್ಬ್ ಆಗಬಾರದು ಎಂದು ಜಗದೀಶ್ ಶೆಟ್ಟರ್ ಹೇಳಿದರು.

- Advertisement -

Latest Posts

Don't Miss