Political News: ಹುಬ್ಬಳ್ಳಿ; ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಆಗುವ ಯೋಗ ಇದೆ ಎಂದು ಧಕ್ಷಿಣ ಭಾರತದ ಏಕೈಕ ಮಹಾಮಂಡಳೇಶ್ವರಿ ಅಮ್ಮ ಬೈರವಿ ಭವಿಷ್ಯ ನುಡಿದರು.
ನಗರದಲ್ಲಿಂದು ಶ್ರೀ ಸಿದ್ಧಾರೂಢ ಮಠದ ಗದ್ದುಗೆಗೆ ಭೇಟಿ ನೀಡಿ ನಂತರ ಅವರು ಸುದ್ದಿಗಾರರ ಜೊತ ಅವರು ಮಾತನಾಡಿದರು ಡಿ ಕೆ ಶಿವಕುಮಾರ್ ರಾಜಕೀಯ ಭವಿಷ್ಯ ನುಡಿದ ಅಮ್ಮ ಬೈರವಿ ನಾನು ಡಿ ಕೆ ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ ಅಂತಾ ಅವರ ಮನೆಯಲ್ಲಿ ತಿಳಿಸಿದ್ದು, ನಾನು ಅವರ ಮನೆಗೆ ಭೇಟಿ ನೀಡಿದ್ದೇ. ಸಂದರ್ಭದಲ್ಲಿ ಅವರ ಯೋಗದ ಕುರಿತು ಮಾತನಾಡಿದ್ದೇ ನಾನು ಹೇಳಿದ್ದು ಯಾವುದೂ ಸುಳ್ಳು ಆಗಲ್ಲ ಎಂದು ಭೈರವಿ ಅಮ್ಮ ಹೇಳಿದ್ದಾರೆ.
ಆವಾಗಲೇ ಹೇಳಿದ್ದೇ ಯಾವಾಗ ಆಗುತ್ತಾರೆ ಎಂಬುದು ಹೇಳಲ್ಲ. ನಾಳೆ ಆಗಬಹುದು ಆದರೆ ಮುಖ್ಯಮಂತ್ರಿ ಆಗೆಯೇ ಆಗುತ್ತಾರೆ. ಧಕ್ಷಿಣ ಭಾರತದ ಏಕೈಕ ಮಾಹಮಂಡೇಶ್ಬರಿ ಬೈರವಿ ಅಮ್ಮ ನುಡಿದರು. ಇನ್ನು ನಾನು ಶ್ರೀ ಸಿದ್ಧಾರೂಢ ಮಠದ ದರ್ಶನ ಪಡೆದೆ. ಶ್ರೀ ಸಿದ್ಧಾರೂಢ ಸ್ವಾಮಿ ಅವರ ಮೊದಲೇ ಆರ್ಶೀವಾದ ಇತ್ತು. ಶ್ರೀ ಸಿದ್ಧಾರೂಢರು ನಾಡಿಗೆ ಆಧ್ಯಾತ್ಮಿಕ ಅಮೃತ ನೀಡಿದವರುನಾಡಿನ ಭಾವೈಕ್ಯ ಮಠಗಳಲ್ಲಿ ಪ್ರಾಶಸ್ತ್ಯ ಸ್ಥಾನದಲ್ಲಿ ಇದೆ.
ಇದೊಂದು ಹೂಬಳ್ಳಿ ಎಂಬ ಸಂದೇಶ ನೀಡಿದವರು ಶ್ರೀ ಸಿದ್ಧಾರೂಢ ಶ್ರೀಗಳು ಈ ಹಿಂದೇ ಕಾಂಗ್ರೆಸ್ ಪಕ್ಷದ ನಾಯಕ ವಿನಯ ಕುಲಕರ್ಣಿ ಅವರ ಬಗ್ಗೆ ಅವರ ಪತ್ನಿ ಶಿವಲೀಲಾ ಸಹ ಕೇಳಿದ್ದರು. ನಾನು ಹೋಗು ಆತ ಹೊರಗಡೆ ಇದ್ದೆ ಶಾಸಕನಾಗುತ್ತಾನೆ ಎಂದು ಹೇಳಿದ್ದೆ ಎಂದರು. ಇನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯ ನಾಥ ಉತ್ತಮ ಕೆಲಸ ಮಾಡಿದ್ದು ಸಾಧು ಸಂತರಿಗೆ ಅನೇಕ ಸೌಲಭ್ಯಗಳನ್ನ ಕಲ್ಪಿಸಿದ್ದಾರೆ ಆದರೆ ಕರ್ನಾಟಕದಲ್ಲಿ ಅಂತರ ಯಾವುದೇ ಸೌಕರ್ಯ ಇಲ್ಲ . ಕರ್ನಾಟಕದಲ್ಲಿ ಸಾಧು ಸಂತರು ಏನಾದರೂ ಸೌಲಭ್ಯ ಕೇಳಿದರೆ ಈತ ಭಾರತೀಯ ಜನತಾ ಪಕ್ಷದವನಾ, ಕಾಂಗ್ರೆಸ್ ನವರ ಯಾವ ಪಕ್ಷದ ಬಗ್ಗೆ ಮಾತನಾಡುತ್ತಾನೆ ಎಂದು ನೋಡುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದರು.