Tuesday, October 15, 2024

Latest Posts

ಮುಸಲ್ಮಾನರು ಕಲ್ಲು ಬಿಸಾಡಿದರೆ ಹಣ್ಣು ಕೆಳಗೆ ಹಾಕಲು ನಾವೇನು ಮಾವಿನ ಮರವಾ?: ಪ್ರತಾಪ್ ಸಿಂಹ

- Advertisement -

Political News: ಮಂಡ್ಯದ ನೆಲಮಂಗಲದಲ್ಲಿ ನಡೆದ ಗಲಭೆಯನ್ನು ವಿರೋಧಿಸಿರುವ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಮುಸಲ್ಮಾನರು ಕಲ್ಲು ಬಿಸಾಡಿದರೆ, ಹಣ್ಣು ಕೆಳಗೆ ಹಾಕಲು ನಾವೇನು ಮಾವಿನ ಮರವಾ ಎಂದು ಪ್ರಶ್ನಿಸಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿರುವ ಅವರು, ಇಸ್ಲಾಮಿಗೂ ಭಾರತಕ್ಕೂ ಏನು ಸಂಬಂಧ..? ಮುಸಲ್ಮಾನರು ಈ ನೆಲದವರು ಅಲ್ಲ. ಕ್ರಿಶ್ಚಿಯನ್ನರು ಈ ನೆಲದವರು ಅಲ್ಲ. ಯಾರೋ ಬರುತ್ತಾರೆ. ಒಂದು ಕಪಾಳಕ್ಕೆ ಹೊಡೆಯುತ್ತಾರೆ. ಹಾಗಂತ ಇನ್ನೊಂದು ಕಪಾಳ ಕೊಡಲು ನಾವೇನು ಜೀಸಸ್ಸಾ..? ಮುಸಲ್ಮಾನರು ಪೆಟ್ರೋಲ್ ಬಾಂಬ್ ಹಾಕಿದ್ರೆ, ನಾವೇನು ಹೂಗುಚ್ಛ ಕೊಡಲು ಆಗತ್ತಾ..? ಮುಸಲ್ಮಾನರು ಕಲ್ಲು ಬಿಸಾಡಿದರೆ, ಹಣ್ಣು ಕೆಳಗೆ ಹಾಕಲು ನಾವೇನು ಮಾವಿನ ಮರವಾ..? ನಾವು ವಾಪಸ್ ಕಲ್ಲು ಹೊಡಿಯಲೇಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಎರಡು ದಿನಕ್ಕೂ ಮುನ್ನ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ, ಮಂಡ್ಯದ ನಾಗಮಂಗಲದಲ್ಲಿ ಕಲ್ಲೆಸೆತ ನಡೆದಿದ್ದು, ಪೆಟ್ರೋಲ್ ಬಾಂಬ್ ಕೂಡ ಬಿಸಾಕಲಾಗಿದೆ. ಅಲ್ಲದೇ ಗಲಭೆಯಲ್ಲಿ ಹಲವರ ಅಂಗಡಿ ಮುಂಗಟ್ಟು, ಬೈಕ್, ಕಾರ್ ಎಲ್ಲವೂ ಸುಟ್ಟು ಭಸ್ಮವಾಗಿದೆ. ಚಿಕ್ಕ ಪುಟ್ಟ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವವರ ಅಂಗಡಿಯಲ್ಲಿ ನಷ್ಟವಾಗಿದೆ. ಇಂದು ಕೇಂದ್ರ ಸಚಿವ ಕುಮಾರಸ್ವಾಮಿ, ಸ್ಥಳಕ್ಕೆ ಭೇಟಿ ಕೊಟ್ಟು, ಪರಿಶೀಲನೆ ನಡೆಸಿದರು.

- Advertisement -

Latest Posts

Don't Miss