International News: ನಿಮ್ಮ ದೇಶದಲ್ಲಿರುವ ಹಿಂದೂಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ, ಇಲ್ಲವಾದರೆ ನಾವು ಕಠಿಣ ನಿಲುವನ್ನು ತಾಳಬೇಕಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಥೈಲ್ಯಾಂಡ್‌ನಲ್ಲಿ ನಡೆಯುತ್ತಿರುವ ಬಿಮ್‌ಸ್ಟೆಕ್ ಶೃಂಸಭೆಯಲ್ಲಿ ಭಾಗಿಯಾದ ಬಳಿಕ ಉಭಯ ನಾಯಕರು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ವೇಳೆ ಭಾರತ ಹಾಗೂ ಬಾಂಗ್ಲಾ ನಡುವಿನ ಹಲವು ವಿಚಾರಗಳ ಚರ್ಚೆಯಾಗಿದೆ.
ಇನ್ನೂ ಪ್ರಮುಖವಾಗಿ ಕಳೆದೆರಡು ದಿನಗಳ ಹಿಂದಷ್ಟೇ ಭಾರತದ ಈಶಾನ್ಯ ಭಾಗದಲ್ಲಿನ ರಾಜ್ಯಗಳು ಭೂಪ್ರದೇಶದಿಂದ ಕೂಡಿದ್ದು, ಸಾಗರವನ್ನು ತಲುಪಲು ಯಾವುದೇ ಮಾರ್ಗವಿಲ್ಲ, ನಮಗೆ ಇದು ಅಡ್ಡಿಯಾಗಿದೆ ಎಂದು ಇದೇ ಯೂನ್ ಹೇಳಿದ್ದರು. ಅಲ್ಲದೆ ಚೀನಾ ತನ್ನ ಆರ್ಥಿಕ ಪ್ರಭಾವವನ್ನು ಬಾಂಗ್ಲಾದೇಶಕ್ಕೆ ವಿಸ್ತರಿಸುವಂತೆ ಮೊಹಮ್ಮದ್ ಚೀನಾಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ಗೆ ಒತ್ತಾಯಿಸಿದ್ದರು. ಅಂದಹಾಗೆ ಬಾಂಗ್ಲಾದೇಶವು ಈ ಪ್ರದೇಶದಲ್ಲಿ ಸಾಗರದ ಏಕೈಕ ರಕ್ಷಕವಾಗಿದೆ. ಇನ್ನೂ ಚೀನಾದ ಆರ್ಥಿಕತೆಯ ವಿಸ್ತರಣೆಯಾಗಲು ಇದೊಂದು ದೊಡ್ಡ ಅವಕಾಶವಾಗಿ ದೊರೆಯಬಹುದು ಎಂದು ಹೇಳಿದ್ದರು. ಈ ಹೇಳಿಕೆ ಭಾರತವನ್ನು ಕೆರಳುವಂತೆ ಮಾಡಿತ್ತು. ಇದಾದ ಬಳಿಕ ಮೋದಿ ಯೂನಸ್ ಭೇಟಿಯಾಗಿರುವುದು ರಾಜತಾಂತ್ರಿಕವಾಗಿ ಮಹತ್ವ ಪಡೆದುಕೊಂಡಿದೆ.
ಅಪರಾಧಿ ಭಾವದಿಂದ ಮೋದಿ ಭೇಟಿ ಮಾಡಿದ ಯೂನಸ್..
ಬ್ಯಾಂಕಾಕ್‌ನಲ್ಲಿ ನಡೆದ ಭೇಟಿಯ ವೇಳೆ ಯೂನಸ್ ಸಪ್ಪೆ ಮುಖದಿಂದಲೇ ಪ್ರಧಾನಿ ಮೋದಿಯವರ ಕೈ ಕುಲುಕಿ ಆತಂಕ ಭಾವದಿಂದಲೇ ಚರ್ಚೆ ನಡೆಸಿದ್ದಾರೆ. ತಮ್ಮಲ್ಲಿ ಏನೋ ಒಂದು ಅಳುಕು ಹಾಗೂ ಅಪರಾಧಿ ಭಾವ ಯೂನಸ್ ಅವರಲ್ಲಿ ಕಂಡುಬಂದಿತ್ತು. ಇನ್ನೂ ಭಾರತ ಗಡಿಯಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿ ಮತ್ತು ಗಡಿ ಭದ್ರತೆ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳಲು ಅಕ್ರಮ ಗಡಿ ದಾಟುವಿಕೆಯನ್ನು ತಡೆಗಟ್ಟುವುದನ್ನು ಮಾಡಬೇಕಾಗಿರುವುದು ತುಂಬಾ ಅಗತ್ಯವಾಗಿದೆ. ನಿಮ್ಮ ದೇಶದಲ್ಲಿರುವ ಹಿಂದೂಗಳು ಸೇರಿದಂತೆ ಅಲ್ಪಸಂಖ್ಯಾತರ ಸುರಕ್ಷತೆ ಮತ್ತು ಭದ್ರತೆಯ ಬಗ್ಗೆ ನಮಗೆ ಅನುಮಾನ ಮೂಡುತ್ತಿದೆ. ಅವರ ರಕ್ಷಣೆಗಾಗಿ ನಿಮ್ಮ ಕ್ರಮಗಳನ್ನು ನೀವು ಕೈಗೊಳ್ಳಿ, ನಾವು ಇದರ ಬಗ್ಗೆ ಬಾಂಗ್ಲಾದ ಮೇಲೆ ನಿರೀಕ್ಷೆ ಹೊಂದಿದ್ದೇವೆ. ಇಲ್ಲವಾದರೆ ಪರಿಣಾಮ ಬೀರಬಹುದು ಅಂತ ಯೂನಸ್‌ಗೆ ಮೋದಿ ಹೇಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.
ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತನಿಖೆ ನಡೆಸಿ..
ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರ ಮೇಲಿನ ಎಲ್ಲ ದೌರ್ಜನ್ಯ ಪ್ರಕರಣಗಳನ್ನು ಸಮಗ್ರವಾಗಿ ತನಿಖೆ ಮಾಡುವ ಮೂಲಕ ಬಾಂಗ್ಲಾದೇಶ ಸರ್ಕಾರವು ಅವರ ಸುರಕ್ಷತೆಯನ್ನು ಹಾಗೂ ಭದ್ರತೆಯನ್ನು ನಮ್ಮ ಗಮನಕ್ಕೆ ತರುತ್ತದೆ ಎಂಬ ಆಶಯವನ್ನು ಭಾರತ ಇಟ್ಟುಕೊಂಡಿದೆ. ಜಾಗತಿಕ ಮಟ್ಟದಲ್ಲಿ ಹಾಗೂ ಸಮಾಜದಲ್ಲಿ ವಾತಾವರಣ ಹಾಳಾಗುವಂತೆ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು, ಈ ರೀತಿಯ ಪರಿಸ್ಥಿತಿಯು ಸೃಷ್ಟಿಯಾಗದಂತೆ ನೋಡಿಕೊಳ್ಲುವುದು ಉತ್ತಮವಾಗಿದೆ ಅಂತ ಮೋದಿ ಯೂನಸ್‌ಗೆ ಕುಟುಕಿದ್ದಾರೆ ಎಂದು ಅವರು ಹೇಳಿದ್ದಾರೆ.
ಶಾಂತಿ ಪ್ರಗತಿಯುತ ಮಾತುಕತೆಯನ್ನು ಬೆಂಬಲಿಸುತ್ತೇವೆ..
ಉಭಯ ದೇಶಗಳಲ್ಲಿ ಸ್ಥಿರ ಪ್ರಜಾಪ್ರಭುತ್ವ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಮಾತುಕತೆ ಈ ವಿಚಾರಗಳಲ್ಲಿ ಬಾಂಗ್ಲಾದೇಶಕ್ಕೆ ಭಾರತದ ಬೆಂಬಲವನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ. ಜನರನ್ನು ಒಳಗೊಂಡ ಸಂಬಂಧಗಳ ಮೇಲೆ ನಂಬಿಕೆ ಇದೆ. ಅಲ್ಲದೆ ಉಭಯ ದೇಶಗಳ ಸಹಕಾರ ಹಾಗೂ ಬಾಂಧವ್ಯಗಳು ಎರಡೂ ರಾಷ್ಟ್ರಗಳ ಜನರಿಗೆ ಲಾಭದಾಯಕವಾಗಿವೆ. ಅಂದಹಾಗೆ ಪ್ರಯೋಗಾತ್ಮಕ ಮನಸ್ಥಿತಿಯ ಆಧಾರದಲ್ಲಿ ಭಾರತವು ಬಾಂಗ್ಲಾದೊಂದಿಗೆ ರಚನಾತ್ಮಕ ಬಾಂಧವ್ಯವನ್ನು ರೂಪಿಸುತ್ತದೆ ಅಂತ ಮೋದಿ ದ್ವಿಪಕ್ಷೀಯ ಮಾತುಕತೆಯಲ್ಲಿ ಹೇಳಿದ್ದಾರೆ ಎಂದು ಮಿಸ್ರಿ ತಿಳಿಸಿದ್ದಾರೆ.
ವಿಸ್ತರಣಾವಾದವನ್ನು ನಾವು ಬೆಂಬಲಿಸಲ್ಲ..
ಇನ್ನೂ ಇದಕ್ಕೂ ಮುನ್ನ ಥೈಲ್ಯಾಂಡ್ ಪ್ರಧಾನಿ ಪೆಟೋಂಗ್ಟರ್ನ್ ಶಿನಾವಾತ್ರಾ ಅವವ ಜೊತೆ ನಡೆದಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ, ಚೀನಾಗೆ ಮಾತಿನ ಚಾಟಿ ಬೀಸಿದ್ದರು. ಅಲ್ಲದೆ ಭಾರತ ಹಾಗೂ ಥೈಲ್ಯಾಂಡ್ ದೇಶಗಳು ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಮುಕ್ತ, ಸರ್ವರನ್ನೂ ಜೊತೆಯಾಗಿಸಿದ ನೀತಿಯನ್ನು ಪೋಷಿಸುತ್ತವೆ. ಯಾವುದೇ ಆಗಲಿ ಇವುಗಳು ನಿಯಮಾಧಾರಿತ ಕ್ರಮವನ್ನು ಬೆಂಬಲಿಸುತ್ತವೆಯೇ ಹೊರತು ವಿಸ್ತರಣಾವಾದವನ್ನಲ್ಲ ಎಂದು ಚೀನಾ ಹೆಸರು ಉಲ್ಲೇಖಿಸದೆಯೇ ಪ್ರಧಾನಿ ನರೇಂದ್ರ ಮೋದಿ ಚೀನಾಕೆ ಕುಟುಕುವುದರ ಜೊತೆಗೆ ಯೂನಸ್ ಹೇಳಿಕೆಯನ್ನು ಖಂಡಿದ್ದರು.