Kolar News: ಕೋಲಾರ: ಕೋಚಿಮುಲ್ ನೇಮಕಾತಿಯಲ್ಲಿ ಅಕ್ರಮ ಪ್ರಕರಣದ ಬಗ್ಗೆ ಕೋಚಿಮುಲ್ ಅಧ್ಯಕ್ಷ & ಶಾಸಕ ಕೆ.ವೈ.ನಂಜೇಗೌಡ ಸುದ್ದಿಗೋಷ್ಠಿ ನಡೆಸಿದ್ದಾರೆ.
ನೇಮಕಾತಿಗಳ ಫಾಲುನುಭವಿಗಳ ಪಟ್ಟಿ ಶಿಫಾರಸು ಮೇರೆಗೆ ಆಯ್ಕೆ ವದಂತಿ ಹಿನ್ನೆಲೆ ಈ ಸುದ್ದಿಗೋಷ್ಠಿ ನಡೆಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಿ ವೈರಲ್ ಆಗುತ್ತಿದೆ ಇದು ಸತ್ಯಕ್ಕೆ ದೂರವಾದದ್ದು. ಕೋಲಾರ – ಚಿಕ್ಕಬಳ್ಳಾಪುರ ಹಾಲು ಡೈರಿಯಲ್ಲಿ ಯಾವುದೇ ಅಭಿವೃದ್ಧಿ ಇರಲಿಲ್ಲ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಭಿವೃದ್ಧಿ ಹೆಚ್ಚಾಗುತ್ತಿದೆ. 273 ಹುದ್ದೆಗಳನ್ನು ನೇಮಕಾತಿ ಮಾಡಲು ಮುಂದಾಗಿದ್ದೆವು. 192 ಪೋಸ್ಟ್ ಗಳಿಗೆ ಹೈಕೋರ್ಟ್ ನಿಂದ ಸ್ಟೇ ತಂದಿದ್ದಾರೆ. ಉಳಿದ 81 ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದೆವು , ಅದರಲ್ಲಿ 6 ಹುದ್ದೆಗಳಿಗೆ ಅರ್ಜಿಗಳೇ ಬರಲಿಲ್ಲ. 75 ಹುದ್ದೆಗಳಿಗೆ ಪರೀಕ್ಷೆ ನಡೆಸಿ 1:5 ಆಧಾರದ ಮೇಲೆ ಇಂಟರ್ ವ್ಯೂ ಮಾಡಿದ್ದೇವೆ. ಆಡಳಿತ ಮಂಡಳಿ , ಸಹಕಾರಿ ಅಧಿಕಾರಿಗಳನ್ನು ಒಳಗೊಂಡ 5 ಮಂದಿ ಕಮಿಟಿಯಿಂದ ಇಂಟರ್ ವ್ಯೂ ಮಾಡಿದ್ದೇವೆ ಎಂದಿದ್ದಾರೆ.
ಅಲ್ಲದೇ, ಉಪಮುಖ್ಯಮಂತ್ರಿ ಹೆಸರು, ಬಂಗಾರಪೇಟೆ ಶಾಸಕರ ಹೆಸರನ್ನು ಮೆನ್ಷನ್ ಮಾಡಿದ್ದಾರೆ, ಇದು ಸುಳ್ಳು. 1:5 ಪಟ್ಟಿಯನ್ನು ತೆಗೆದುಕೊಂಡು ಷಡ್ಯಂತ್ರ ಮಾಡಿ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ. 1:5 ನಲ್ಲಿ ಅತಿ ಹೆಚ್ಚು ಅಂಕ ಪಡೆದವರ ಹೆಸರು ಫೈನಲ್ ಆಗುತ್ತದೆ. ನಮ್ಮ ನಾಯಕರು ಎಲ್ಲಿಯೂ ಇಂತಹವರಿಗೆ ಕೊಡಿ ಅಂತ ಪ್ರಸ್ತಾಪ ಮಾಡಿಲ್ಲ. ಪಟ್ಟಿ ಹೊರಗಡೆ ಹೇಗೆ ಬಂತು ಎಂದು ತನಿಖೆ ನಡೆಸಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟಿ ವೈರಲ್ ಆದ ಬಗ್ಗೆ ತನಿಖೆ ಮಾಡುತ್ತೇವೆ.
ಶಿಫಾರಸ್ಸು ಮಾಡಿರುವ ಪಟ್ಟಿ ಸುಳ್ಳು. ಆ ಪಟ್ಟಿಯ ಎಲ್ಲರೂ ನೇಮಕಾತಿಯಾದರೆ, ಫ್ರಾಡ್ ಅಂತ ಒಪ್ಪಿಕೊಳ್ಳುತ್ತೇವೆ. ನಾನು ಸೇರಿದಂತೆ ಆಡಳಿತ ಮಂಡಳಿಯ ನಾವೆಲ್ಲರೂ ಸಾಮೂಹಿಕ ರಾಜೀನಾಮೆ ಕೊಡುತ್ತೇವೆ. ನೇಮಕಾತಿ ಫ್ರಾಡ್ ಅಂತ ಪ್ರೂ ಆದ್ರೆ ರಾಜಕೀಯದಿಂದಲೇ ದೂರು ಉಳಿಯುತ್ತೇವೆ. ಯಾರಾದ್ರು ಒಬ್ಬರು ಬಂದು ನಾವು ಹಣ ಕೊಟ್ಟಿದ್ದೇವೆ ಎಂದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ನಾವು ಯಾರ ಬಳಿಯೂ ಹಣ ಪಡೆದಿಲ್ಲ ನಿಷ್ಪಕ್ಷಪಾತವಾಗಿ ಹುದ್ದೆಗಳ ಆಯ್ಕೆ ಪ್ರಕ್ರಿಯೆ ನಡೆದಿದೆ. ಪ್ರಕರಣದ ಬಗ್ಗೆ ಪೊಲೀಸರಿಗೆ ದೂರು ನೀಡಿ ತನಿಖೆಗೆ ಕೊಡುತ್ತೇವೆ ಎಂದು, ಕೋಲಾರ ಹಾಲು ಒಕ್ಕೂಟದ ಕಚೇರಿಯಲ್ಲಿ ಎಲ್ಲಾ ನಿರ್ದೇಶಕರೊಂದಿಗೆ ಅದ್ಯಕ್ಷ ಹಾಗೂ ಶಾಸಕ ಕೆ.ವೈ.ನಂಜೇಗೌಡ ಹೇಳಿಕೆ ನೀಡಿದ್ದಾರೆ.
ಕುಮಾರಸ್ವಾಮಿನೇ ಇರ್ತಾರೋ ಇಲ್ವೋ ಗೊತ್ತಿಲ್ಲಾ: ಮಾಜಿ ಸಿಎಂ ಹೇಳಿಕೆಗೆ ತಿರುಗೇಟು ನೀಡಿದ ಆರೋಗ್ಯ ಸಚಿವರು




