Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸಲೀಂ ಅಹಮ್ಮದ್, ಅಧ್ಯಕ್ಷರ ಬದಲಾವಣೆ,ಸಿಎಮ್ ಬದಲಾವಣೆ ವಿಚಾರವಾಗಿ ನಾವು ಬಹಿರಂಗ ವಾಗಿ ಮಾತನಾಡೊದಿಲ್ಲ. ಖರ್ಗೆ ಅವರು ಮಾತಾಡದಂತೆ ನಮಗೆ ಸೂಚನೆ ಕೊಟ್ಟಿದ್ದಾರೆ. ಏನೇ ತೀರ್ಮಾನ ಆದರೂ ಹೈಕಮಾಂಡ್ ತೀರ್ಮಾನವನ್ನು ಕೈಗೊಳ್ಳುತ್ತದೆ. ಸಧ್ಯ ಬಿಡುವ ಇಲ್ಲದೆ ಸಿಎಮ್ ಬಜೆಟ್ ತಯಾರಿ ಮಾಡುತ್ತಿದಾರೆ. ಡಿಕೆ ಶಿವಕುಮಾರ್ ಪಕ್ಷ ಸಂಘಟನೆ ಮಾಡುತ್ತಿದಾರೆ. ಯಾವುದೇ ತೀರ್ಮಾನ ಅದರೂ ಅದು ವರಿಷ್ಠರಿಗೆ ಬಿಟ್ಟದ್ದು ಅವರೇ ಫೈನಲ್. ಕೆಲ ಮುಖಂಡರು ವಯಕ್ತಿಕ ಅಭಿಪ್ರಾಯ ಹೇಳಿದ್ದಾರೆ ಅದು ಅವರವರ ವೈಯಕ್ತಿಕ ಅಭಿಪ್ರಾಯ. ಕೊನೆಗೆ ತೀರ್ಮಾನ ಹೈಕಮಾಂಡ್ ಮಾಡತ್ತೆ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ.
ನನಗೆ ಯಾವ ಸ್ಥಾನ ಕೊಟ್ಟರೆ ನಿಭಾಯಿಸ್ತೀನಿ. ಎರಡು ವರ್ಷ ಆದ ಮೇಲೆ ಸಂಪುಟ ಪುನರಾಚನೆ ಆಗಬಹುದು ಅನ್ನೋದನ್ನ ಹೇಳುತ್ತಿದಾರೆ. ಹೀಗಾಗಿ ಯಾವುದೇ ಸ್ಥಾನ ಕೊಟ್ಟರು ನಿಭಾಯಿಸ್ತೀನಿ ಎನ್ನುವ ಮೂಲಕ ಪರೋಕ್ಷವಾಗಿ ಸಲೀ ಅಹಮ್ಮದ್ ಮಂತ್ರಿ ಸ್ಥಾನ ಬಿಚ್ಚಿಟ್ಟಿದ್ದಾರೆ.
ಮಂತ್ರಿ ಮಂಡಲ ಹೈಕಮಾಂಡ್ ಗೆ ಬಿಟ್ಟ ವಿಚಾರ. ಕಾಂಗ್ರೆಸ್ ಯಾವ ತೀರ್ಮಾನ ಕೊಟ್ಟರು ನಿಭಾಯಸ್ತೀನಿ. ಅಲ್ಪ ಸಂಖ್ಯಾತರ ಅಧ್ಯಕ್ಷ ವಿಚಾರವಾಗಿ ನಾನು ಆಂತರಿಕವಾಗಿ ಮಾತಾಡತೀನಿ. ಕೆಲ ವಿಚಾರ ಹೇಳೋಕೆ ಕಷ್ಟ ಆಗತ್ತೆ. ಯಾವ ಬದಲಾವಣೆ ಆಗತ್ತೆ,ಅವಾಗ ಚರ್ಚೆ ಮಾಡ್ತೀವಿ. ಇಂಟರ್ ನಲ್ ನಲ್ಲಿ ನಾವ ಮಾತಾಡ್ತೀವಿ ಎಂದು ಸಲೀಂ ಅಹಮ್ಮದ್ ಹೇಳಿದ್ದಾರೆ.