Monday, December 23, 2024

Latest Posts

ನೀರಿನ ಸಮಸ್ಯೆಗೆ 1 ವಾರದಲ್ಲಿ ಪರಿಹಾರ ಸಿಗದಿದ್ದರೆ, ಸಿಎಂ ಮನೆಗೆ ಘೇರಾವ್ ಹಾಕಲು ಸಿದ್ಧ: ತೇಜಸ್ವಿ ಸೂರ್ಯ

- Advertisement -

Political News: ಬೆಂಗಳೂರಿನಲ್ಲಿ ದಿನೇದಿನೇ ಹೆಚ್ಚುತ್ತಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ವತಿಯಿಂದ ಇಂದು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿ, ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರು & ರಾಜ್ಯದ ಜನತೆ ಸಂಕಷ್ಟದಲ್ಲಿದ್ದರೂ CM ಶ್ರೀ ಸಿದ್ದರಾಮಯ್ಯ& DyCM ಶ್ರೀ @DKShivakunar ರವರು ಜನರ ಸಂಕಷ್ಟಕ್ಕೆ ಕನಿಷ್ಠ ಸ್ಪಂದನೆಯನ್ನು ತೋರದಿರುವುದು ವಿಪರ್ಯಾಸ ಎಂದಿದ್ದಾರೆ.

1.10 ಕೋಟಿ ಬೆಂಗಳೂರಿಗರನ್ನು ಸಮಸ್ಯೆಯ ಕೂಪಕ್ಕೆ ತಳ್ಳಿ, ತಮ್ಮ ರಾಜಕೀಯ ಹಿತಾಸಕ್ತಿಗೋಸ್ಕರ ತಮಿಳುನಾಡಿಗೆ ಕಾವೇರಿ ನೀರು ಹರಿಸಿರುವ ಪರಿಣಾಮ, ಬೆಂಗಳೂರಿನ ಜನತೆ ದಿನನಿತ್ಯ ಕಷ್ಟ ಅನುಭವಿಸುತ್ತಿದ್ದಾರೆ. ನಾಗರಿಕರ ಮೂಲಭೂತ ಸೌಕರ್ಯ & ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲು ಸರ್ಕಾರ ತುರ್ತಾಗಿ ಕ್ರಮ ಕೈಗೊಳ್ಳುವಂತೆ ನಾನು ಆಗ್ರಹಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.

ಬೆಂಗಳೂರಿನ ಇತಿಹಾಸದಲ್ಲಿಯೇ ಕುಡಿಯುವ ನೀರಿನ ವಿಷಯವಾಗಿ ಸಾರ್ವಜನಿಕರು ಬೀದಿಗೆ ಬಂದಿದ್ದು ಇಲ್ಲವೇ ಇಲ್ಲ. ಹಿಂದೆಂದೂ ಈ ಮಟ್ಟದ ನೀರಿನ ಸಮಸ್ಯೆ ಉದ್ಭವವಾಗಿಲ್ಲ. ಇದು ಕಾಂಗ್ರೆಸ್ ನಿರ್ಮಿತ ಸಮಸ್ಯೆಯಾಗಿದ್ದು, ರಾಜ್ಯದ ಮಳೆ, ಜಲಾಶಯಗಳ, ಕಾವೇರಿ ಜಲಾನಯನ ಪ್ರದೇಶದ ನೀರಿನ ಪ್ರಮಾಣದ ಸಂಪೂರ್ಣ ಅರಿವಿದ್ದರೂ ರಾಜ್ಯದ ಜನರ ಹಿತಾಸಕ್ತಿಯನ್ನು ಬಲಿಕೊಟ್ಟು, ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡುವ ಉದ್ದೇಶದಿಂದ ತಮಿಳುನಾಡಿಗೆ ನೀರನ್ನು ಹರಿಬಿಟ್ಟಿರುವುದು ಖಂಡನೀಯ.

ಇದುವರೆಗೆ ಒಂದೇ ಒಂದು ದಿನವೂ ಮುಖ್ಯಮಂತ್ರಿಗಳಾಗಲೀ , ಉಪ ಮುಖ್ಯಮಂತ್ರಿಗಳಾಗಲೀ ನಗರ ಸಂಚಾರ ಮಾಡಿ ಸಮಸ್ಯೆಯನ್ನು ತಿಳಿದುಕೊಳ್ಳುವ ಪ್ರಯತ್ನವನ್ನೇ ಮಾಡದಿರುವುದು ದುರಂತ. ಇವೆಲ್ಲ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿ ಸಾಂಕೇತಿಕವಾಗಿ ಇಂದು ಪ್ರತಿಭಟನೆ ನಡೆಸಲಾಗಿದ್ದು, ಒಂದು ವಾರದಲ್ಲಿ ಸಮಸ್ಯೆಗೆ ಪರಿಹಾರ ದೊರಕದಿದ್ದರೆ ಮುಖ್ಯಮಂತ್ರಿಗಳ ನಿವಾಸಕ್ಕೆ ಘೇರಾವ್ ಹಾಕಲು ಬಿಜೆಪಿ ಸಿದ್ಧವಾಗಿದೆ ಎಂದು ತೇಜಸ್ವಿ ಸೂರ್ಯ ಎಚ್ಚರಿಕೆ ನೀಡಿದ್ದಾರೆ.

ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಎ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

- Advertisement -

Latest Posts

Don't Miss