ನವದೆಹಲಿ: ಪ್ರಣಾಳಿಕೆ, ಚುನಾವಣಾ ಪ್ರಚಾರ ಎಲ್ಲದರ ಮೂಲಕ ರಾಜ್ಯದ ಜನರ ಮನಗೆದ್ದ ಕಾಂಗ್ರೆಸ್ ಅಧಿಕಾರಕ್ಕಂತೂ ಬಂದಿದೆ. ಆದರೆ, ಈಗ ಸಿಎಂ ಯಾರಾಗ್ತಾರೆ ಅನ್ನೋದೇ ರಾಜ್ಯದ ಜನರಿಗೆ ಕುತೂಹಲ. ಆದರೆ ಕಾಂಗ್ರೆಸ್ ಹೈಕಮಾಂಡ್‌ಗೆ ಇದು ತಲೆನೋವಾಗಿ ಪರಿಣಮಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಡಿಕೆಶಿ ಜೊತೆ ಸಂಧಾನ ಸಭೆ ನಡೆಸಿದರೂ ಕೂಡ, ಅದು ವಿಫಲವಾಗಿದೆ.
ಏಕೆಂದರೆ, ನನಗೆ ಕೊಡುವುದಿದ್ದರೆ ಸಿಎಂ ಪಟ್ಟವೇ ಕೊಡಿ ಹೊರತು, ಡಿಸಿಎಂ ಪಟ್ಟ ಬೇಡ. ನಾನು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತಂದು ಕೊಟ್ಟಿದ್ದೇನೆ. ನನಗೆ ಕೂಲಿ ಕೊಡಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ರಾಹುಲ್ ಗಾಂಧಿ ಮೊದಲ 2 ವರ್ಷ ಸಿದ್ದರಾಮಯ್ಯ ಸಿಎಂ ಆಗಲಿ, ನಂತರ 3 ವರ್ಷ ನೀವು ಸಿಎಂ ಆಗಿ ಎಂದು ಹೇಳಿದ್ದಾರೆ. ಇದಕ್ಕೆ ಒಪ್ಪದ ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಜೊತೆಯೂ ಈ ಬಗ್ಗೆ ಚರ್ಚಿಸಿದ್ದಾರೆ.
ನನಗೆ ಸಿಎಂ ಪಟ್ಟ ಸಿಗದಿದ್ದಲ್ಲಿ, ನೀವೇ ಸಿಎಂ ಆಗಬೇಕು ಹೊರತು, ಬೇರೆ ಯಾರಿಗೂ ಸಿಎಂ ಪಟ್ಟ ಕೊಡುವಂತಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ. ಸಿದ್ದರಾಮಯ್ಯ ಕೂಡ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಸಿಎಂ ಪಟ್ಟದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸದ್ಯಕ್ಕೆ ಸಿಎಂ ಯಾರಾಗ್ತಾರೆ ಎನ್ನುವ ಚರ್ಚೆಗಿನ್ನು ತೆರೆ ಬಿದ್ದಿಲ್ಲ. ರಾಹುಲ್ ಗಾಂಧಿ ಮತ್ತು ಖರ್ಗೆಯೊಂದಿಗೆ ಚರ್ಚೆ ನಡೆಸಿರುವ ಡಿಕೆಶಿ, ಸದ್ಯ ದೆಹಲಿಯಲ್ಲಿರುವ ಡಿ.ಕೆ.ಸುರೇಶ್ ಮನೆಗೆ ತೆರಳಿದ್ದಾರೆ.
ನಾಳೆ ಕರ್ನಾಟಕದ ಸಿಎಂ ಯಾರಾಗ್ತಾರೆ ಅನ್ನೋ ಕುತೂಹಲಕ್ಕೆ ತೆರೆ ಬೀಳುವ ಸಾಧ್ಯತೆ ಇದ್ದು, ನಾಡಿದ್ದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಿಎಂ ಆದವರು ಪದಗ್ರಹಣ ಮಾಡಲಿದ್ದಾರೆ.
ಎಸ್.ಎನ್.ನಾರಾಯಣಸ್ವಾಮಿ ಸಚಿವರಾಗಬೇಕು ಎಂದು ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳು..
ಸಿದ್ದರಾಮಯ್ಯರಿಂದ ಹೈಕಮಾಂಡ್‍ಗೆ ಬ್ಲ್ಯಾಕ್‍ಮೇಲ್: ಛಲವಾದಿ ನಾರಾಯಣಸ್ವಾಮಿ ವಿಶ್ಲೇಷಣೆ




