ಆತ್ಮಹತ್ಯೆ ಮಾಡಿಕೊಂಡರೆ, ಈ ಶಿಕ್ಷೆ ಅನುಭವಿಸಬೇಕಾದಿತು ಜೋಕೆ..!

ಗರುಡ ಪುರಾಣದಲ್ಲಿ ಯಮಲೋಕದಲ್ಲಿ ಸಿಗುವ ಶಿಕ್ಷೆಗಳ ಬಗ್ಗೆ ವಿಸ್ತ್ರತವಾಗಿ ಹೇಳಲಾಗಿದೆ. ಅದರಲ್ಲಿ ಕೊಲೆ, ಸುಲಿಗೆ, ಭ್ರಷ್ಟಾಚಾರ, ಹೆಣ್ಣಿನ ಮೇಲೆ ದೌರ್ಜನ್ಯ ಇತ್ಯಾದಿ ಪಾಪಗಳಿಗೆ ಯಾವ ಶಿಕ್ಷೆ ನೀಡಲಾಗತ್ತೆ ಅನ್ನೋ ಬಗ್ಗೆ ಹೇಳಲಾಗಿದೆ. ಅದೇ ರೀತಿ ಆತ್ಮಹತ್ಯೆ ಮಾಡಿಕೊಂಡರೆ, ಯಾವ ಶಿಕ್ಷೆ ಅನುಭವಿಸಬೇಕಾಗುತ್ತದೆ ಅನ್ನೋ ಬಗ್ಗೆಯೂ ಹೇಳಲಾಗಿದೆ. ಆ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಬೆಂಕಿ ಹಚ್ಚಿಕೊಳ್ಳುವುದು, ನೇಣು ಹಾಕಿಕೊಳ್ಳುವು, ವಿಷ ಕುಡಿಯುವುದು ಹೀಗೆ ಇತ್ಯಾದಿ ಕೆಲಸಗಳ ಮೂಲಕ ನಮ್ಮ ಜೀವವನ್ನು ನಾವೇ ತೆಗೆದುಕೊಳ್ಳುವುದಕ್ಕೆ, ಆತ್ಮಹತ್ಯೆ ಎಂದು ಕರೆಯುತ್ತಾರೆ. ಆತ್ಮಹತ್ಯೆ ಮಾಡಿಕೊಂಡಲ್ಲಿ, ಆ ಆತ್ಮ, ಅತ್ತ ಯಮಲೋಕವನ್ನೂ ಸೇರದೇ, ಇತ್ತ ಭೂಲೋಕದಲ್ಲೂ ಇರದೇ, ಪಿಶಾಚಿಯಾಗಿ ಸುತ್ತುತ್ತದೆ. ಬ್ರಹ್ಮ ಬರೆದ ಹಣೆಬರಹದಂತೆ, ಜೀವನ ಮುಗಿಯುವವರೆಗೂ ಆ ಜೀವ ಪಿಶಾಚಿಯಾಗಿಯೇ ಇರುತ್ತದೆ.

ಹಾಗಾಗಬಾರದು ಎಂದಾದಲ್ಲಿ, ಆತ್ಮಹತ್ಯೆ ಮಾಡಿಕೊಂಡವರ ಮನೆ ಜನರು, ಅವರ ಹೆಸರಲ್ಲಿ ಪಿಂಡ ಪ್ರಧಾನ ಮಾಡಬೇಕು. ಬಡವರಿಗೆ ಊಟ, ಬಟ್ಟೆ ನೀಡಬೇಕು. ಮೂರು ವರ್ಷದ ತನಕವಾದರೂ, ಶ್ರಾದ್ಧ ಕಾರ್ಯವನ್ನ ಪದ್ಧತಿ ಪೂರ್ವಕವಾಗಿ ನಡೆಸಿಕೊಡಬೇಕು. ಹಾಗಾಗಿ ಮನೆ ಮಂದಿಗೆ ಕಷ್ಟ, ನೋವು, ದುಃಖ ಕೊಡುವ ಬದಲು, ಆತ್ಮಹತ್ಯೆ ಮಾಡಿಕೊಳ್ಳುವ ಕೆಟ್ಟ ಯೋಚನೆ ಮಾಡುವುದನ್ನೇ ಬಿಟ್ಟುಬಿಡಿ.

About The Author