Sunday, December 22, 2024

Latest Posts

ಸರಕಾರಿ ಕಾರ್ಯಕ್ರಮಕ್ಕೆ ಬರದಿದ್ದರೆ ಗ್ಯಾರಂಟಿ ಯೋಜನೆ ಬಂದ್‌: ಅಂಗನವಾಡಿ ಕಾರ್ಯಕರ್ತೆಯ ‘ಗ್ಯಾರಂಟಿ’ ಬೆದರಿಕೆ

- Advertisement -

State News: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರದೇ ಇದ್ದವರಿಗೆ, ಗ್ಯಾರಂಟಿಗಳಲ್ಲಿ ಒಂದಾದ ಭಾಗ್ಯಲಕ್ಷ್ಮೀ ಕೆಲಸ ಮಾಡಿಕೊಡುವುದಿಲ್ಲವೆಂದು ಅಂಗನವಾಡಿ ಕಾರ್ಯಕರ್ತೆ ಬೆದರಿಕೆ ಹಾಕಿದ ವೀಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಯರಗನಹಳ್ಳಿ ಗ್ರಾಮದಲ್ಲಿ ಸರ್ಕಾರಿ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆ ಸರಕಾರಿ ಕಾರ್ಯಕ್ರಮಕ್ಕೆ ಜನ ಬರಲಿಲ್ಲ ಎಂದರೆ ಸರ್ಕಾರಿ ಗ್ಯಾರಂಟಿಗಳನ್ನು ನಿಲ್ಲಿಸಲಾಗುವುದೆಂದು ಬೆದರಿಕೆ ಹಾಕಿದ್ದಾಳೆ.

ವೀಡಿಯೋದಲ್ಲಿ ಓರ್ವ ಯುವಕ ನೀವು ನನ್ನ ತಾಯಿ ಸಿದ್ದರಾಮಯ್ಯ ಅವರ ಕಾರ್ಯಕ್ರಮಕ್ಕೆ ಬರದಿದ್ದಲ್ಲಿ, ಭಾಗ್ಯಲಕ್ಷ್ಮೀ ಕೆಲಸ ಮಾಡಿಕೊಡುವುದಿಲ್ಲವೆಂದು ಹೇಳಿದ್ದೀರಿ. ಯಾಕೆ ಮಾಡಿಕೊಡುವುದಿಲ್ಲ..? ನನ್ನ ತಾಯಿ ಕೂಲಿ ಕೆಲಸಕ್ಕೆ ಹೋಗಲೇಬೇಕು. ಹಾಗಾಗಿ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ. ಅದಕ್ಕೆ ನೀವು ಸರ್ಕಾರಿ ಕೆಲಸ ಮಾಡಿಕೊಡುವುದಿಲ್ಲ ಎನ್ನುತ್ತೀರಾ ಎಂದು ಪ್ರಶ್ನಿಸಿದ್ದಾನೆ. ಅಲ್ಲದೇ ಈ ಬಗ್ಗೆ ವೀಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಜನ ಗರಂ ಆಗಿದ್ದಾರೆ.

ಇನ್ನು ಈ ಬಗ್ಗೆ ಎಲ್ಲ ನನಗೆ ಕೇಳಬೇಡಿ, ನಾವು ಹೇಳಿದ ಹಾಗೆ ನೀವು ಕೇಳಿದರೆ, ನೀವು ಹೇಳಿದ ಹಾಗೆ ನಾವು ಕೇಳುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆ ಹೇಳಿದ್ದಕ್ಕೆ, ಗ್ಯಾರಂಟಿನಾ ಸರ್ಕಾರ ಕೊಟ್ಟಿದೆ ಎಂದು ಯುವಕ ಹೇಳಿದ್ದಾನೆ. ಹಾಗಾದ್ರೆ ಗ್ಯಾರಂಟಿ ಕೆಲಸ ಮಾಡೋಕ್ಕೆ ಸರ್ಕಾರದ ಹತ್ತಿರಾನೇ ಕೇಳು ಎಂದು ಅಂಗನವಾಡಿ ಕಾರ್ಯಕರ್ತೆ ಉತ್ತರಿಸಿದ್ದಾಳೆ.

ಅಲ್ಲದೇ, ಸಿಎಂ ಸಿದ್ದರಾಮಯ್ಯ ಬರುತ್ತಿರುವ ಕಾರ್ಯಕ್ರಮ ಸರ್ಕಾರದ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಯಾರು ಬರುವುದಿಲ್ಲವೋ, ಅಂಥವರ ಕೆಲಸವನ್ನು ನಾನು ಮಾಡಿಕೊಡುವುದಿಲ್ಲ. ನಮಗೆ ಸಂಬಳ ಕೊಡುವುದೇ ಈ ಕೆಲಸ ಮಾಡಲು, ನಾವು ಹೇಳಿದ ಹಾಗೆ ನೀವು ಕೇಳಿದರೆ ಮಾತ್ರ, ನಿಮ್ಮ ಕೆಲಸ ಮಾಡಿಕೊಡುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆ ಹೇಳಿದ್ದಾಳೆ.

ತೆಲುಗು ನಿರ್ದೇಶಕ ಸೂರ್ಯ ಕಿರಣ್ ನಿಧನ

ಅಂಬೇಡ್ಕರ್ ಅವರ ಆಶಯಗಳನ್ನು ನಾಶ ಮಾಡುವುದೇ ಬಿಜೆಪಿಯ ಗುರಿ: ಡಿಸಿಎಂ ಡಿ.ಕೆ.ಶಿವಕುಮಾರ್

ಸಿಎಎ ಅಧಿಸೂಚನೆ ಜಾರಿಗೊಳಿಸಿದ ಕೇಂದ್ರ ಸರ್ಕಾರ

- Advertisement -

Latest Posts

Don't Miss