Thursday, March 13, 2025

Latest Posts

ತಂದೆ- ತಾಯಿ, ಹಿರಿಯ ನಾಗರಿಕರ ಸೇವೆ ಮಾಡದಿದ್ದಲ್ಲಿ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ: ಕೃಷ್ಣಭೈರೇಗೌಡ

- Advertisement -

Political News: ಯಾವ ಮಕ್ಕಳು ಅಥವಾ ಸಂಬಂಧಿಕರು ಹಿರಿಯ ನಾಗರಿಕರನ್ನು ಅಥವಾ ತಂದೆ ತಾಯಿಯನ್ನು ಆರೈಕೆ ಮಾಡುವುದಿಲ್ಲವೋ, ಅವರ ಸೇವೆ ಮಾಡುವುದಿಲ್ಲವೋ. ಅಂಥ ಸಂಬಂಧಿಕರು ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲವೆಂದು ಕೇಂದ್ರ ಸರ್ಕಾರದ, ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಕಲ್ಯಾಣ ಕಾಯ್ದೆ 2007 ನೀಡಿದೆ ಎಂದು ಸಚಿವ ಕೃಷ್ಣಭೈರೇಗೌಡ ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಆಸ್ತಿಗಾಗಿ ತಂದೆ ತಾಯಿಯನ್ನು ಹಿಂಸೆ ಮಾಡುವುದು, ತಂದೆ ತಾಯಿಯ ಬಳಿ ಆಸ್ತಿ ಬರೆಸಿಕೊಂಡು ಮನೆಯಿಂದ ಹೊರಹಾಕುವುದು. ಇಂಥ ಕೇಸ್‌ಗಳು ಹೆಚ್ಚು ಬೆಳಕಿಗೆ ಬರುತ್ತಿದೆ. ಹಾಗಾಗಿ ಈ ಮೊದಲೇ ಆಸ್ತಿ ಬರೆದಿದ್ದು, ಮಕ್ಕಳು ಆ ತಂದೆ ತಾಯಿಗೆ ಹಿಂಸೆ ನೀಡುತ್ತಿದ್ದರೆ, ಅಂಥ ಆಸ್ತಿಯನ್ನು ರದ್ದುಗೊಳಿಸುವ ಹಕ್ಕನ್ನು ಸರ್ಕಾರ ಹೊಂದಿರುತ್ತದೆ ಎಂದು ಸಚಿವರು ಮಾಹಿತಿ ನೀೀಡಿದ್ದಾರೆ.

ಇಷ್ಟೇ ಅಲ್ಲದೇ, ಹಿರಿಯರಿಗೆ ಮಕ್ಕಳು ಔಷಧಿಗಾಗಿ, ಆಹಾರ ವಸತಿಗಾಗಿ ಪ್ರತೀ ತಿಂಗಳು ದುಡ್ಡು ಕೊಡಬೇಕು. ಅಥವಾ ಆಹಾರ, ಔಷಧಿ ಎಲ್ಲವೂ ತಂದು ಕೊಟ್ಟು ಸಾಕಬೇಕು. ಇಲ್ಲದಿದ್ದಲ್ಲಿ ಸೆಕ್ಷನ್ 9ರ ಅಡಿಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ದೂರು ಸಲ್ಲಿಸಬಹುದು. ಈ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿಯೇ ಊ ಕಾಯ್ದೆಯ ಬಗ್ಗೆ ಇಲ್ಲಿ ಉಲ್ಲೇಖಿಸುತ್ತಿದ್ದೇನೆ ಎಂದು ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.

ಹಿರಿಯರು ನೀಡಿದ ದೂರು ಸಾಬೀತಾದರೆ, ಮಕ್ಕಳ ಹೆಸರಿಗೆ ಬರೆದಿರುವ ವ್ಹೀಲ್ ರದ್ದುಗೊಳಿಸಿ, ಪುನಃ ತಮ್ಮ ಹೆಸರಿಗೆ ಮರುಸ್ಥಾಪಿಸಬಹುದಾಾಗಿದೆ. ಈ ಜವಾಬ್ದಾಾರಿಯನ್ನು ಉಪವಿಭಾಗಾಧಿಕಾರಿಗಳಿಗೆ ನೀಡಲಾಗಿದೆ. ಈಗಾಗಲೇ ಉಪವಿಭಾಗಾಧಿಕಾರಿಯ ಬಳಿ ಇಂಥ ಕೇಸ್‌ ಸಾವಿರಾರು ಇದ್ದು, ಇದಕ್ಕೆ ಸಂಬಂಧಿಸಿದಂತೆ ಮಾಸಿಕ ಚರ್ಚೆಗಳಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.

- Advertisement -

Latest Posts

Don't Miss