Spiritual: ಮನೆಯಲ್ಲಿ ಸದಾ ನೆಮ್ಮದಿ ಇರಬೇಕು. ಆರ್ಥಿಕ ಪರಿಸ್ಥಿತಿ ಚೆನ್ನಾಗಿರಬೇಕು. ನೀವು ಜೀವನದಲ್ಲಿ ಉದ್ಧಾರಾಗಬೇಕು ಅಂದ್ರೆ, ನೀವು ಕೆಲ ತಪ್ಪುಗಳನ್ನು ಮಾಡಬಾರದು. ಮನೆಯಲ್ಲಿ ಕೆಲ ವಸ್ತುಗಳನ್ನು ಇಟ್ಟುಕೊಳ್ಳಬಾರದು. ಹಾಗೇನಾದರೂ ಅಂಥ ವಸ್ತು ಇದ್ದರೆ, ಆದಷ್ಟು ಬೇಗ ಅದನ್ನು ತೆಗೆದು ಬಿಸಾಕಬೇಕು. ಹಾಗಾದ್ರೆ ಯಾವ ವಸ್‌ತು ಮನೆಯಲ್ಲಿ ಇದ್ದರೆ, ನಿಮ್ಮ ಲಕ್ ಹಾಳಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ಒಡೆದ ವಸ್ತು, ಒಡೆದ ಕನ್ನಡಿ, ಗಾಜಿನ ವಸ್ತು: ಒಡೆದ ವಸ್ತು ಅಥವಾ ಒಡೆದ ಗಾಜು, ಕನ್ನಡಿ ಮನೆಯಲ್ಲಿದ್ದರೆ, ಅದನ್ನು ಮುಟ್ಟಿದವರಿಗೆ ಗಾಯವಾಗುವುದಂತೂ ಖಚಿತ. ಜೊತೆಗೆ ಆ ವಸ್ತು ಮನೆಯಲ್ಲಿ ಇದ್ದರೆ, ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಾಗುತ್ತದೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ. ಆರ್ಥಿಕ ಸಮಸ್ಯೆ ಬಂದೊದಗುತ್ತದೆ.
ನಿಂತ, ಒಡೆದ ಗಡಿಯಾರ: ಇನ್ನು ನಿಮ್ಮ ಮನೆಯಲ್ಲಿ ಗೋಡೆಗೆ ನೇತು ಹಾಕಿರುವ ಗಡಿಯಾರ ತನ್ನಿಂದ ತಾನೇ ಕೆಳಗೆ ಬಿದ್ದರೆ, ಅದನ್ನು ಸರಿ ಮಾಡಿಸುವ ಕೆಲಸ ಮಾಡಬೇಡಿ. ಹೊಸ ಗಡಿಯಾರವನ್ನೇ ತಂದು ಹಾಕಿ. ಇದು ನಿಮ್ಮ ಉತ್ತಮ ಸಮಯ ಈಗ ಶುರುವಾಗಲಿದೆ ಎಂಬುದರ ಸಂಕೇತವಾಗಿದೆ. ಹಳೆಯ ಗಡಿಯಾರವನ್ನೇ ಬಳಸಿದರೆ, ಅದರಿಂದ ನಿಮಗೆ ಶುಭಫಲ ಸಿಗುವುದಿಲ್ಲ.
ಹರಿದಿರುವ ಪರ್ಸ್: ಪರ್ಸ್ ಹರಿದಿದ್ದರೆ, ಬೇಗ ಬೇರೆ ಪರ್ಸ್ ಖರೀದಿಸಿ. ಏಕೆಂದರೆ, ಹರಿದಿರುವ ಪರ್ಸ್‌ನಲ್ಲಿ ಲಕ್ಷ್ಮೀ ನಿಲ್ಲುವುದಿಲ್ಲ. ನಿಮ್ಮ ಆರ್ಥಿಕ ಪರಿಸ್ಥಿತಿ ಹಾಳಾಗುತ್ತದೆ. ಸಂಬಳ ಬಂದ ಹಾಗೆ, ಖರ್ಚು ಹೆಚ್ಚಾಗುತ್ತದೆ. ಹಾಗಾಗಿ ಹರಿದಿರುವ ಪರ್ಸ್ ಬಳಸಬೇಡಿ. ಮತ್ತು ನಿಮ್ಮ ಪರ್ಸ್‌ನಲ್ಲಿ ವಿಸಿಟಿಂಗ್ ಕಾರ್ಡ್ ಇರಿಸಿಕೊಳ್ಳಬೇಡಿ.
ಯುದ್ಧದ ಚಿತ್ರವಿರುವ ಫೋಟೋಫ್ರೇಮ್: ಮನೆಯಲ್ಲಿ ಮಹಾಭಾರತದ ಫೋಟೋ, ಅಥವಾ ಯಾವುದೋ ಯುದ್ಧದ ಫೋಟೋ, ಅಥವಾ ಭಯಾನಕವಾಗಿರುವ ಫೋಟೋವನ್ನು ಮನೆಯಲ್ಲಿ ಇರಿಸಿಕೊಳ್ಳಬೇಡಿ. ಇದು ಮನೆಲ್ಲಿನ ಶಾಂತಿ, ನೆಮ್ಮದಿ ಹಾಳಾಗಲು ಕಾರಣವಾಗುತ್ತದೆ.
ಹರಿದ ಚಪ್ಪಲಿ, ಬಟ್ಟೆ: ಹರಿದ ಚಪ್ಪಲಿ ಬಳಸಬಾರದು, ಹರಿದ ಬಟ್ಟೆ ಧರಿಸಬಾರದು. ಹೆಣ್ಣು ಮಕ್ಕಳು ಹರಿದ ಬಟ್ಟೆ ಧರಿಸಿದರೆ, ಅಂಥ ಮನೆಯಲ್ಲಿ ಸಾಲ ಬಾಧೆ, ಪದೇ ಪದೇ ಹಣ ಖರ್ಚಾಗುವ ಸಂದರ್ಭ ಬರುತ್ತದೆ. ಲಕ್ಷ್ಮೀ ಮನೆಯಲ್ಲಿ ತಟಸ್ಥಳಾಗಬೇಕು ಅಂದ್ರೆ, ಇಂದೇ ಹರಿದ ಬಟ್ಟೆಯನ್ನು, ಚಪ್ಪಲಿಯನ್ನು ಹೊರಗೆ ಬಿಸಾಕಿ.