Thursday, December 5, 2024

Latest Posts

ನೀವು UI ಚಿತ್ರ ನೋಡಿದ್ರೆ, ನಿಮಗೂ ಲಾಭ, ನಮಗೂ ಲಾಭ: ರಿಯಲ್ ಸ್ಟಾರ್ ಉಪೇಂದ್ರ

- Advertisement -

Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುಐ ಚಿತ್ರದ ನಾಯಕ ರಿಯಲ್ ಸ್ಟಾರ್ ನಟ ಉಪೇಂದ್ರ ಮಾತನಾಡಿದ್ದು,  ಈಗಾಗಲೇ ಯುಐ ಚಿತ್ರದ. ಟೀಸರ್ ಬಿಡುಗಡೆ ಮಾಡಲಾಗಿದೆ. ಚಿತ್ರದ ನೇಮ್ ಯುಐ ಬಹಳ ಜನರಿಗೆ ತರ್ಕ ಹುಟ್ಟಿಸುತ್ತದೆ. ನನಗೆ ನನ್ನ ಆಡಿಯನ್ಸಗಳೇ ಸುಪರ್ ಸ್ಟಾರ್ಸ್. ಈ ಚಿತ್ರದ ಪ್ರತಿಯೊಂದು ಕ್ಷಣಕ್ಕೂ ಒಂಮದು ಒಂದು ಪಾತ್ರಕ್ಕೂ ತುಂಬಾ ಅರ್ಥವಿದೆ ಎಂದು ಉಪ್ಪಿ ಹೇಳಿದ್ದಾರೆ.

ಓಂ ಸಿನಿಮಾ ಬಿಡುಗಡೆ ಟೈಂನಲ್ಲಿ ಟೀಸರ್‌ಗಳ ಬಿಡುಗಡೆ ಇರಲಿಲ್ಲ. ಇತ್ತೀಚಿನ ಟ್ರೆಂಡ್ ಸೃಷ್ಟಿಯಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಯುಐ ಟೀಸರ್ ಬಿಡುಗಡೆ ಆಗಿದೆ. ಚಿತ್ರ ಪ್ರೆಮಿಗಳು ಈ ಚಿತ್ರವನ್ನು ಚಿತ್ರಮಂದಿರಕ್ಕೆ ಬಂದ ನೋಡಬೇಕು. ಐದು ಭಾಷೆಯಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ. ಹಿಂದಿ, ತೆಲಗು, ತಮಿಳು, ಕನ್ನಡ ಸೇರಿ ಐದು ಭಾಷೆಯಲ್ಲಿ ಬರುತ್ತಿದೆ ಎಂದು ಉಪೇಂದ್ರ ಮಾಹಿತಿ ನೀಡಿದ್ದಾರೆ.

ಯುಐ ಚಿತ್ರ ತಿಳಿಯಲು ಚಿತ್ರ ನೋಡಬೇಕು. ಚಿತ್ರ ನೋಡುಗರಿಗೂ ಲಾಭ ಇದೆ, ನಮ್ಮಗೂ ಲಾಭ ಆಗುತ್ತೆ. ಯುಐ ಚಿತ್ರ ತಂಡಕ್ಕೆ ಬಜೇಟ್ ಮುಖ್ಯವಲ್ಲ ಅದರ ಬಗ್ಗೆ ನಾವು ಎಲ್ಲೂ ಹೇಳಿಲ್ಲ. ಯುಐ ಏನು ಅಂತಾ ತಿಳಿಯಲು ಚಿತ್ರ ನೋಡಬೇಕು . ಡಿ.20 ಕ್ಕೆ ವರ್ಡ್ ವೈಡ್ ಯುಐ ಚಿತ್ರ ಬಿಡುಗಡೆ ಆಗುತ್ತದೆ. ಸದ್ಯದಲ್ಲಿಯೇ ಚಿತ್ರ ಮಂದಿರಗಳ ಅಂಕಿಸಂಖ್ಯೆ ಹೇಳುತ್ತೇವೆ ಎಂದು ರಿಯಲ್ ಸ್ಟಾರ್ ಉಪೇಂದ್ರ ಹೇಳಿದ್ದಾರೆ.

- Advertisement -

Latest Posts

Don't Miss