Tuesday, May 28, 2024

Latest Posts

ಶೋಷಿತರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿ ಜಾರಿ: ವಿನೋದ ಅಸೂಟಿ

- Advertisement -

Dharwad News: ಧಾರವಾಡ: ಕೂಲಿ ಹಾಗೂ ಅಸಂಘಟಿತ ಕಾರ್ಮಿಕರ ಪರವಾಗಿರುವ ಪಕ್ಷ ಕಾಂಗ್ರೆಸ್. ಶೋಷಿತರ ಶ್ರೇಯೋಭಿವೃದ್ಧಿಗಾಗಿ ಗ್ಯಾರಂಟಿಗಳನ್ನು ನಮ್ಮ ಪಕ್ಷ ನೀಡಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕ್ರಮಸಂಖ್ಯೆ 2 ಕ್ಕೆ ಹೆಚ್ಚಿನ ಮತ ನೀಡಿ ನನಗೆ ಆಶೀರ್ವದಿಸಬೇಕೆಂದು ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ ಮನವಿ ಮಾಡಿಕೊಂಡರು.

ಧಾರವಾಡ ಲೋಕಸಭಾ ವ್ಯಾಪ್ತಿಯ ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಕೇಶ್ವಾಪುರ ನಗರದಲ್ಲಿ ಬೃಹತ್ ಪಾದಯಾತ್ರೆ ನಡೆಸಿ ಅವರು ಮಾತನಾಡಿದರು. ಪಾದಯಾತ್ರೆ ವಾಲ್ಮೀಕಿ ವೃತ್ತದಿಂದ ಮಾರ್ಕೆಟ್ ಮೂಲಕ ಸಾಗಿ ಮುಖ್ಯ ರಸ್ತೆಯ ವರೆಗೂ ಸಾವಿರಾರು ಕಾರ್ಯಕರ್ತರೊಂದಿಗೆ ಪಕ್ಷದ ಜಯಘೋಷಗಳನ್ನು ಕೂಗುತ್ತಾ ಸಾಗಿದರು.

ಪ್ರಹ್ಲಾದ ಜೋಶಿ ಅಪ್ರಬುದ್ಧ ರಾಜಕಾರಣಿ: ದಿನೇಶ್‌ ಗುಂಡೂರಾವ್‌
ಪಾದಯಾತ್ರೆ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಪ್ರಲ್ಹಾದ ಜೋಶಿ ಒಬ್ಬ ಅಪ್ರಬುದ್ಧ ರಾಜಕಾರಣಿ, ಮಹದಾಯಿ ಯೋಜನೆ ಕಾರ್ಯರೂಪಗೊಳಿಸುವ ಇಚ್ಛಾಶಕ್ತಿ ಇಲ್ಲ. ಹುಬ್ಬಳ್ಳಿ-ಧಾರವಾಡ ಜನರಿಗೆ ಕುಡಿಯುವ ನೀರು ಕೊಡಲು ಆಗುತ್ತಿಲ್ಲ ಇಂತಹ ವ್ಯಕ್ತಿಯನ್ನು ಸೋಲಿಸಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಅನೀಲ ಕುಮಾರ ಪಾಟೀಲ, ಸದಾನಂದ ಡಂಗನವರ, ಪ್ರಕಾಶ ಕುರಹಟ್ಟಿ, ಖಂಡೇಕರ್ ಸರ್, ಅಬ್ದಲ್ ಗಣಿ, ಸತೀಶ ಕಳ್ಳಿಮನಿ ಹಾಗೂ ಕೇಶ್ವಾಪೂರ ನಗರದ ಮುಖಂಡರು, ಕ್ಷೇತ್ರದ ಹಿರಿಯರು, ಮಹಿಳೆಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ನೇಹಾ ಹಿರೇಮಠ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅಮಿತ್ ಶಾ..!

ಮೊದಲ ಬಾರಿ ಅಯೋಧ್ಯೆಗೆ ಭೇಟಿ ನೀಡಿ ರಾಮನ ದರ್ಶನ ಮಾಡಿದ ದ್ರೌಪದಿ ಮುರ್ಮು

ರಾಮನಗರ ಶಾಸಕರ ವೀಡಿಯೋ ವೈರಲ್

- Advertisement -

Latest Posts

Don't Miss