ಇದರ ನಡುವೆ ನೇಹಾ ಹಿರೇಮಠ ಕಗ್ಗೊಲೆ ಪ್ರಕರಣದ ತನಿಖೆ ದಿಕ್ಕುತಪ್ಪದಿರಲಿ: ಬಿ.ವೈ.ವಿಜಯೇಂದ್ರ

Political News: ಪ್ರಜ್ವಲ್ ರೇವಣ್ಣ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷದವರು ಬಿಜೆಪಿ ವಿರುದ್ಧವೂ ಹರಿಹಾಯ್ದಿದ್ದು, ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಟ್ವೀಟ್ ಮಾಡುವ ಮೂಲಕ ಸಮಝಾಯಿಷಿ ಕೊಟ್ಟಿದ್ದಾರೆ.

ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಖಂಡಿಸುವ, ಪ್ರತಿಭಟಿಸುವ ನಿಟ್ಟಿನಲ್ಲಿ ಕಾಳಜಿ ವಹಿಸುವಲ್ಲಿ ಎಂದಿಗೂ ರಾಜೀಯಾಗದ ದಾಖಲೆ ಇದ್ದರೆ ಅದು ಭಾರತೀಯ ಜನತಾ ಪಾರ್ಟಿಯಲ್ಲಿ ಮಾತ್ರ. ನಾರಿಯರನ್ನು ಮಾತೆಯರು ಎಂದು ಗೌರವಿಸುವ ಸಂಸ್ಕೃತಿ ಇದ್ದರೆ, ರಾಷ್ಟ್ರವನ್ನು ‘ಭಾರತಮಾತೆ’ ಎಂದು ಪೂಜಿಸುವ ಸಂಸ್ಕಾರವಿದ್ದರೆ ಅದು ಬಿಜೆಪಿಯ ಧ್ಯೇಯದ ಮಡಿಲಿನಲ್ಲಿ ಮಾತ್ರ. ಮಹಿಳಾ ಶೋಷಣೆಯ ಕುರಿತು ಡಿ.ಕೆ.ಶಿವಕುಮಾರ್ ಅಂಥವರಿಂದ ಕೇಳಿಸಿಕೊಳ್ಳಬೇಕಾದ ದುರ್ಗತಿ ಬಿಜೆಪಿಗೆ ಎಂದೂ ಬಾರದು, ಹಾಸನದ ಪೆನ್ ಡ್ರೈವ್ ಪ್ರಕರಣ ಸೇರಿದಂತೆ ನಾರಿಕುಲದ ಯಾವ ಬಗೆಯ ಶೋಷಣೆಯನ್ನೂ ನೋಡಿಕೊಂಡು ನಾವು ಮೌನವಹಿಸಿ ಕೂರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಸದರಿ ಪ್ರಕರಣದ ಕುರಿತು ಸದ್ಯ ನೇಮಕವಾಗಿರುವ SIT ಶೀಘ್ರದಲ್ಲಿ ಸತ್ಯಾಸತ್ಯತೆಯನ್ನು ಹೊರತಂದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕೊಡಿಸಲಿ ಎಂದು ಒತ್ತಾಯಿಸುತ್ತೇವೆ ಎಂಜು ವಿಜಯೇಂದ್ರ ಹೇಳಿದ್ದಾರೆ.

ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಅಭಿವೃದ್ಧಿಯ ಹೆಜ್ಜೆಯನ್ನಂತೂ ಇಡಲಾಗಿಲ್ಲ, ಮಹಿಳೆಯರ ರಕ್ಷಣೆಗಾದರೂ ಆದ್ಯತೆ ನೀಡುವ ಯೋಗ್ಯತೆಯೂ ಇಲ್ಲವಾಗಿದೆ, ಬೆಳಗಾವಿಯಲ್ಲಿ ಹಾಡುಹಗಲೇ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಬೆತ್ತಲುಗೊಳಿಸಿ ದೌರ್ಜನ್ಯವೆಸಗಿದ ಸಂದರ್ಭದಲ್ಲಿ ಬೆಳಗಾವಿಯಲ್ಲೇ (ಅಧಿವೇಶನದಲ್ಲಿ) ಇದ್ದ ಮುಖ್ಯಮಂತ್ರಿ, ಸಂತ್ರಸ್ತ ಮಹಿಳೆಗೆ ಸಾಂತ್ವನ ಹೇಳಲೂ ಭೇಟಿ ನೀಡದೇ ಕನಿಷ್ಠ ಸೌಜನ್ಯವನ್ನು ತೋರದ ಮುಖ್ಯಮಂತ್ರಿ, ಹುಬ್ಬಳ್ಳಿಯಲ್ಲಿ ಅನ್ಯಕೋಮಿನ ಯುವಕನಿಂದ ಹಾಡು ಹಗಲೇ ಅಮಾಯಕ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರವಾಗಿ ಹತ್ಯೆಯಾದಾಗ ಹೇಗೆ ನಡೆದುಕೊಂಡರು ಎಂಬುದನ್ನು ಈ ರಾಜ್ಯದ ಜನತೆ ಗಮನಿಸಿದ್ದಾರೆ ಎಂದು ವಿಜಯೇಂದ್ರ ಅಸಮಾಧಾನ ಹೊರಹಾಕಿದ್ದಾರೆ.

ಈ ಸರ್ಕಾರದ ಆಡಳಿತದಲ್ಲಿ ಸರಣೀ ರೂಪದಲ್ಲಿ ಸ್ತ್ರೀಕುಲದ ಮೇಲೆ ನಿರಂತರ ಶೋಷಣೆ, ದೌರ್ಜನ್ಯ ನಡೆಯುತ್ತಿದ್ದರೂ ಉಡಾಫೆತನ ಪ್ರದರ್ಶಿಸುವ ಕಾಂಗ್ರೆಸ್ ಗೆ ಬಿಜೆಪಿಯತ್ತ ಬೊಟ್ಟುಮಾಡುವ ಯಾವ ನೈತಿಕತೆಯೂ ಇಲ್ಲ. ನಾಗರಿಕ ಸಮಾಜ ತಲೆತಗ್ಗಿಸುವ ಹಾಸನದ ಪೆನ್ ಡ್ರೈವ್ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಸೇರಿದಂತೆ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ನಿಷ್ಪಕ್ಷಪಾತ ತನಿಖೆ ನಡೆದು ಕ್ರಮ ಜರುಗಲಿ. ಇದರ ನಡುವೆ ನೇಹಾ ಹಿರೇಮಠ ಕಗ್ಗೊಲೆ ಪ್ರಕರಣದ ತನಿಖೆ ದಿಕ್ಕುತಪ್ಪದಿರಲಿ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.

ಪ್ರಜ್ವಲ್ ಪೆನ್‌ಡ್ರೈವ್ ಕೇಸ್‌ನ ಹೊಣೆಯನ್ನು ಬಿಜೆಪಿ ಮೇಲೆ ಹೊರಿಸುತ್ತಿರುವುದು ಹಾಸ್ಯಾಸ್ಪದ: ಚೇತನ್ ಅಹಿಂಸಾ

ನಿಮ್ಮ ಮಕ್ಕಳು ಹೆಚ್ಚು ಮೊಬೈಲ್ ಅಡಿಕ್ಟ್ ಆಗಿದ್ದರೆ ಗಮನಹರಿಸಿ: ಪೋಷಕರಿಗೆ ಪೊಲೀಸ್ ಅಧಿಕಾರಿಗಳ ಎಚ್ಚರಿಕೆ

ಜನಮನ್ನಣೆ ಗಳಿಸಿದ ಜೆ.ಪಿ.ನಡ್ಡಾ ಅವರ ರೋಡ್ ಷೋ

About The Author