Saturday, March 15, 2025

Latest Posts

ಧಾರವಾಡದಲ್ಲಿ ನೂತನ ಬಸ್‌ಗಳ ಉದ್ಘಾಟನೆ: ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ

- Advertisement -

Dharwad News: ಧಾರವಾಡ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಸಿಎಂ ಸಿದ್ದರಾಮಯ್ಯನವರು ನೂತನ ಬಸ್‌ಗಳ ಉದ್ಘಾಟನೆ ನಡೆಸಿದರು.

ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದಲ್ಲಿ ಈ ಕಾರ್ಯಕ್ರಮ ನಡೆದಿದ್ದು, 50 ನೂತನ ಬಸ್‌ಗಳನ್ನು ಸಾಂಕೇತಿಕವಾಗಿ ಸಿಎಂ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಸಿಎಂಗೆ ಸಚಿವರಾದ ರಾಮಲಿಂಗಾರೆಡ್ಡಿ, ಸಂತೋಷ ಲಾಡ್, ಎಚ್.ಕೆ. ಪಾಟೀಲ, ಕೆ.ಜೆ. ಜಾರ್ಜ್, ಶಾಸಕ ಎನ್.ಎಚ್. ಕೋನರಡ್ಡಿ ಇತರರು ಸಾಥ್ ನೀಡಿದ್ದಾರೆ.

ಇದಾದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ನಮ್ಮ ವಿಪಕ್ಷ ಬಿಜೆಪಿಯವರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಗ್ಯಾರಂಟಿ ಕೊಟ್ಟು ಸರ್ಕಾರದಲ್ಲಿ ದುಡ್ಡಿಲ್ಲ ಅಂತಾರೆ. ಸರ್ಕಾರದಲ್ಲಿ ದುಡ್ಡಿಲ್ಲದಕ್ಕೆ ಅಭಿವೃದ್ಧಿಗೆ ಹಣ ಇಲ್ಲ. ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಆದರೆ ರಾಜ್ಯದ ಸಿಎಂ ಆಗಿ ನಾನೇ ಹೇಳುತ್ತಿರುವೆ. ಕೋಟ್ಯಾಂತರ ರೂಪಾಯಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಿದ್ದೇವೆ. ಈ ಶಂಕುಸ್ಥಾಪನೆ ಕಲ್ಲುಗಳೇ ಅಭಿವೃದ್ಧಿ ಆಗುತ್ತಿರುವುದಕ್ಕೆ ಸಾಕ್ಷಿ. ವಿಪಕ್ಷಗಳ ಆರೋಪ ಕೇವಲ ರಾಜಕೀಯಕ್ಕಾಗಿ ಮಾತ್ರ. ಆರೋಪದಲ್ಲಿ ಸತ್ಯವಿಲ್ಲ, ಹುರುಳಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಇವತ್ತು ನವಲಗುಂದದಲ್ಲಿ 1385 ಜನರಿಗೆ ವಸತಿ ಹಕ್ಕುಪತ್ರ ನೀಡಿದ್ದೇವೆ. ಇದು ಅಭಿವೃದ್ಧಿನೋ? ಅಭಿವೃದ್ಧಿ ಅಲ್ಲವೋ? ಇದನ್ನು ಜನರೇ ತೀರ್ಮಾನ ಮಾಡಬೇಕು.  ಕಾಂಗ್ರೆಸ್ ಸರಕಾರ 9 ತಿಂಗಳಲ್ಲಿ ಐದು ಗ‌್ಯಾರಂಟಿಗಳನ್ನ ಜಾರಿ ಮಾಡಿದೆ. ಈ ಐದು ಗ್ಯಾರಂಟಿಗಳಲ್ಲಿ ಮದ್ಯ ವರ್ತಿಗಳು ಇಲ್ಲ. ಕೇಂದ್ರ ಸರಕಾರದವರು ದುಡ್ಡು ಕೊಡ್ತೆವಿ ಅಂದ್ರೆ ಅಕ್ಕಿ ಕೊಡಲಿಲ್ಲ. ಬಿಪಿಎಲ್ ಕಾರ್ಡ್‌ದಾರರಿಗೆ 175 ರೂ ಕೊಡ್ತಾ ಇದ್ದೇವೆ. ಈ ವರ್ಷ 36,000 ಕೋಟಿ ರೂ ಗಳನ್ನ ಗ‌್ಯಾರಂಟಿಯೋಜನೆಗೆ ಖರ್ಚು ಮಾಡಿದ್ದೇವೆ. ಮುಂದಿನ ವರ್ಷ 52,900 ಕೋಟಿ ಹಣವನ್ನ ಬಜಟಗ ನಲ್ಲಿ ಮೀಸಲು ಇಟ್ಟಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೆ ಮಾಲಿಕರು, ವಿಪಕ್ಷದವರು ಅಲ್ಲ. ಬಿಜೆಪಿ ಅವರು ಕೋಲೆ ಬಸವನ ತರಾ ಆಗಿದ್ದಾರೆ. ಬಿಜೆಪಿ ಅವರು ಮೋದಿ, ನಡ್ಡಾ, ಅಮಿತ್ ಹೇಳಿದಕ್ಕೆ ತಲೆ ಆಡಿಸುತ್ತಾರೆ. ಕಳಸಾ ಬಂಡೂರಿ ಯೋಜನೆಗೆ ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಬೇಕು ಎಂದು ಸಿಎಂ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಮಿಸ್ಡರ್ ಪ್ರಹ್ಲಾದ್ ಜೋಶಿ ಎನಪ್ಪಾ ಮಾಡ್ತಾ ಇದಿಯಾ ನೀನು..? ಕೇಂದ್ರ ಸರಕಾರದಿಂದ ನೀನು ಅನುಮತಿ ಕೊಡಿದ್ರೆ ನಾಳೆನೆ ಕೆಲಸವನ್ನ ಆರಂಭ ಮಾಡುತ್ತೆವೆ. ರೈತ ಮುಖಂಡರು ಇದನ್ನ ಅರ್ಥ ಮಾಡಿಕ್ಕೊಳ್ಳಬೇಕು. ಯಡಿಯೂರಪ್ಪ ಅವರು ಭರವಸೆ ಕೊಟ್ಟಿದ್ರು. ಸುಳ್ಖು ಹೇಳೋ ಪಕ್ಷ ಇದ್ದರೆ ಅದು ಬಿಜೆಪಿ ಪಕ್ಷ. ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಇದ್ರೆ ಅದು ನರೇಂದ್ರ ಮೋದಿ ಅವರು. 10 ವರ್ಷದ ಹಿಂದ ವಿದೇಶದಲ್ಲಿರುವ ಕಪ್ಪು ಹಣ ತರುತ್ತೆವೆ ಅಂದ್ರು ತಂದ್ರಾ,. ಅಚ್ಷೆ ದಿನ್ ಆಯೇಗಾ ಅಂದ್ರು ಅಚ್ಚೆ ದೀನ್ ಬಂತಾ..? ತೈಲ ಬೆಲೆಗಳು ಹೆಚ್ಚಳವಾಗಿವೆ ಮೋದಿ ಅವರೆ ಎಲ್ಲಿ ಅಚ್ಚೆ ದಿನ್ ಆಯ್ತು..? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ರೈತರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಬೆಳೆಗಳಿಗೆ ಸೂಕ್ತ ಬೆಲೆ ನೀಡುವಂತೆ ಕಾನೂನನ್ನ ತರಬೇಕು ಎಂದು ಹೋರಾಟ ಮಾಡುತ್ತಿದ್ದಾರೆ. ನಮ್ಮ ಸರಕಾರಕ್ಕೆ ಸದ್ಯ 9 ತಿಂಗಳು ತುಂಬಿವೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಪ್ರಹ್ಲಾದ್ ಜೋಶಿ ಅವರನ್ನ ಯಾಕೆ ಕೋಕಸಭೇಗೆ ಕಳಸ್ತಿರಾ..? ಇವತ್ತು ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತದೆ. 4,30,000 ಕೋಟಿ ರಾಜ್ಯದಿಂದ ತೆರಿಗೆ ಕೇಂದ್ರ ಸರಕಾರ ತೆಗೆದುಕ್ಕೊಳ್ಳುತ್ತಿದೆ. 100 ರೂ ರಲ್ಲಿ ನಮಗೆ 13 ರೂಪಾಯಿಯನ್ನ ಕೇಂದ್ರ ಸರಕಾರ ಕೊಡುತ್ತದೆ. ರಾಜ್ಯದ ಸಂಸದರು ಯಾರಾದರೂ ಮೋದಿ ಅವರಿದ್ದ ಮಾತನಾಡಿದ್ದಾರಾ..? ಸಿದ್ದರಾಮಯ್ಯ ಅವರು ನ್ಯಾಯ ಕೇಳಿದ್ರೆ ಕಾಲು ಕೆರಕ್ಕೊಂಡು ಜಗಳಕ್ಕೆ ಬರ್ತಾರೆ ಅಂತ ಹೇಳ್ತಾರೆ..?

ಆದರೆ ನರೆಂದ್ರ ಮೋದಿ ಅವರು ಗುಜರಾತ ಸಿಎಂ ಆಗಿದ್ದಾಗ, ಗುಜರಾತನವರು ಬಿಕ್ಷುಕರಾ ಎಂದು ಪ್ರಶ್ನೆ ಮಾಡಿದ್ದಾರೆ. ಅವತ್ತು ಗುಜರಾತ್ ನಿಂದ ತೆರಿಗೆ ವಸೂಲಿ ಮಾಡಬೇಡಿ ಎಂದಿದ್ರು. ಅವರಿಗೆ ಎರಡು ನಾಲಿಗೆ ಇದೆ, ರಾಜ್ಯ ಸುಭದ್ರವಾಗಿದ್ರೆ ಕೇಂದ್ರ ಸುಭದ್ರವಾಗುತ್ತದೆ. ರಾಜ್ಯ ದುರ್ಬಲ ವಾಗಿದ್ರೆ ಕೇಂದ್ರ ದುರ್ಬಲವಾಗುತ್ತೆ. ಕೇಂದ್ರ ಸರಕಾರದವನ್ನ ಪ್ರಶ್ನೆ ಮಾಡಲ್ಲ ರಾಜ್ಯದ 25 ಸಂಸದರು. ಕರ್ನಾಟಕಕ್ಕೆ‌ ನ್ಯಾಯ ಯುತವಾದ ಹಕ್ಕನ್ನ ನೀಡಿ. ನಮ್ಮ‌ ತೆರಿಗೆ ನಮ್ಮ ಹಕ್ಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಕಾದಿದೆ..! ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್

ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ

- Advertisement -

Latest Posts

Don't Miss