ಮದುವೆ ಮಾಡಿದರಷ್ಟೇ ಶಾಲೆಗೆ ಹೋಗ್ತೀನಿ ಎಂದ ಬಾಲಕ: ಎಂಗೇಜ್‌ಮೆಂಟ್‌ ಮಾಡಿಸಿಯೇಬಿಟ್ಟ ಪೋಷಕರು

Pakistan News: ಮದುವೆ ಮಾಡಿದರಷ್ಟೇ ಶಾಲೆಗೆ ಹೋಗ್ತೀನಿ ಎಂದು ಹೇಳಿದ್ದಕ್ಕೆ, 13 ವರ್ಷಕ್ಕೆ ತಮ್ಮ ಮಗನಿಗೆ ಪೋಷಕರು ಮದುವೆ ಮಾಡಿದ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು, 13 ವರ್ಷದ ಬಾಲಕ 12 ವರ್ಷದ ಹುಡುಗಿಯ ಜೊತೆ ವಿವಾಹವಾಗಿದ್ದಾನೆ. ಪಾಕಿಸ್ತಾನದಲ್ಲಿ ಮದುವೆಯ ವಯಸ್ಸು 18 ಆಗಿದೆ. ಆದರೆ ಈ ರೂಲ್ಸ್ ಎಲ್ಲೆಡೆ ಪಾಲಿಸಲಾಗುತ್ತಿಲ್ಲ. ಪಾಕಿಸ್ತಾನದ ಹಲವು ಕಡೆ ಬಾಲ್ಯ ವಿವಾಹವಾಗುತ್ತಿದೆ.

ಎಲ್ಲ ಹುಡುಗರು ಮದುವೆಯಾಗಬೇಕು ಎಂದು ಚೆನ್ನಾಗಿ ಓದಿ, ಹಣ ಸಂಪಾದಿಸಿ, ಜೀವನದಲ್ಲಿ ಸೆಟಲ್ ಆಗಿ ಮದುವೆಯಾಗುತ್ತಾರೆ. ಆದರೆ ಈ ಹುಡುಗ ಮಾತ್ರ, ನಾನು ಓದು ಮುಂದುವರಿಸಬೇಕು ಅಂದ್ರೆ, ನನಗೆ ಮದುವೆ ಮಾಡಿಸಬೇಕು ಎಂದು ಹೇಳಿದ್ದಾನೆ. ಮಗ ಓದಲಿ ಎಂಬ ಕಾರಣಕ್ಕೆ, ಮಗನ ಹಠಕ್ಕೆ ಒಪ್ಪಿರುವ ಪೋಷಕರು ಚೆಂದದ ಹುಡುಗಿಯನ್ನು ನೋಡಿ ಮದುವೆ ಮಾಡಿಸಿದ್ದಾರೆ.

ಇನ್ನು ಹುಡುಗ ಹುಡುಗಿಯ ಅಪ್ಪ ಅಮ್ಮ ಖುಷಿ ಖುಷಿಯಾಗಿಯೇ ಮದುವೆಗೆ ಒಪ್ಪಿಗೆ ಸೂಚಿಸಿ, ಎಂಗೇಜ್‌ಮೆಂಟ್ ಮಾಡಿಸಿದ್ದಾರೆ. ಮಕ್ಕಳ ನಿರ್ಣಯದ ಬಗ್ಗೆ ಕಿಂಚಿತ್ತು ಬೇಸರ ವ್ಯಕ್ತಪಡಿಸದ ಪೋಷಕರು, ಈ ಮದುವೆ ನಮಗೆ ಖುಷಿ ಕೊಟ್ಟಿದೆ. ಮಕ್ಕಳು ವಿವಾಹದ ಬಳಿಕ ಓದು ಮುಂದುವರಿಸುತ್ತಾರೆಂದು ಹೇಳಿದ್ದಾರೆ.

ಆದರೆ ಈ ಬಗ್ಗೆ ಕಿಡಿಕಾರಿರುವ ನೆಟ್ಟಿಗರು, ಇವರಿಗೆಲ್ಲ ಮದುವೆ, ಎಂಗೇಜ್‌ಮೆಂಟ್ ಎಂದರೆ ಹುಡುಗಾಟವಾಗಿದೆ. ಅತೀಯಾಗಿ ಆಡುತ್ತಿದ್ದಾರೆ. ಈ ಮಕ್ಕಳಂತೆ ಇವರಿಗೆ ಮದುವೆಯೂ ಮಕ್ಕಳಾಟಿಕೆಯಾಗಿದೆ.

ಇಬ್ಬರು ರಾಷ್ಟ್ರಮಟ್ಟದ ನಾಯಕರಿಗೆ ಸಾವಿನ ಕಂಟಕ ಕಾದಿದೆ..! ಭವಿಷ್ಯ ನುಡಿದ ಕೋಡಿಮಠದ ಸ್ವಾಮೀಜಿ

ಸಿದ್ದರಾಮಯ್ಯ ರಾಜ್ಯವನ್ನು ದಿವಾಳಿ ಎಬ್ಬಿಸಿ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಅರವಿಂದ ಬೆಲ್ಲದ್

ಬೈಕ್ ರೈಡ್ ಮೂಲಕ ಕಾಶ್ಮೀರಕ್ಕೆ ಸೊಲೋ ಟ್ರಿಪ್: ಹೊಸ ದಾಖಲೆ ಬರೆದ ಧಾರವಾಡ ಯುವತಿ

About The Author