ಕಟಕ್: ಬೌಲರ್ಸ್‍ಗಳ ಪ್ರದರ್ಶನದಲ್ಲಿ ಸುಧಾರಣೆ ನಿರೀಕ್ಷಿಸಲಾಗಿದ್ದು ಅನಿರೀಕ್ಷಿತಾ ನಾಯಕ ರಿಷಭ್ ಪಂತ್ ಇಂದು ದ. ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಪುಟಿದೇಳುವ ವಿಶ್ವಾಸದಲ್ಲಿದ್ದಾರೆ.
ತಂಡವನ್ನು ಮೊದಲ ಬಾರಿ ಮುನ್ನಡೆಸುತ್ತಿರುವ ಪಂತ್, ಮೊನ್ನೆ ಮೊದಲ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ ಮತ್ತು ವಾನ್ ಡೆರ್ ಡುಸೆನ್ 212 ರನ್ ಗಳಿಸಿದ್ದನ್ನು ಅರಗಿಸಿಕೊಳ್ಳಬೇಕಿದೆ.
ಐಪಿಎಲ್ ವೈಫಲ್ಯವನ್ನು ಡೆಲ್ಲಿ ತಂಡದ ನಾಯಕ ಮರೆಯಬೇಕಿದೆ. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಐಪಿಎಲ್ ಯಶಸ್ಸು ಭಾರತ ಕ್ರಿಕೆಟ್ ತಂಡದ ಭವಿಷ್ಯದ ನಾಯಕನೆಂದು ಎಂದು ಬಿಂಬಿಸಲಾಗಿದೆ. ಇದು ರಿಷಭ್ ಪಂತ್ ಅವರನ್ನು ಒತ್ತಡದಲ್ಲಿ ಸಿಲುಕಿಸಿದಂತೆ ಕಾಣುತ್ತದೆ.
ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠವಾಗಿದ್ದು ದೊಡ್ಡ ಮೊತ್ತ ಪೇರಿಸುವ ತಾಖತ್ತು ಹೊಂದಿದೆ. ತಂಡಕ್ಕೆ ಬೌಲಿಂಗ್ ತಲೆ ನೋವಾಗಿದೆ. ಡೆತ್ ಓವರ್‍ನಲ್ಲಿ ವೇಗಿಗಳಾದ ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ ದುಬಾರಿಯಾದರು. ಮತ್ತೊರ್ವ ಯುವ ವೇಗಿ ಆವೇಶ್ ಖಾನ್ ಕೂಡ ರನ್ ಬಿಟ್ಟು ಕೊಟ್ಟರು.
ಇನ್ನುಳಿದ ವೇಗಿಗಳಾದ ಆರ್ಷದೀಪ್ ಮತ್ತು ಉಮ್ರಾನ್ ಮಲ್ಲಿಕ್ ನೆಟ್ಸ್‍ನಲ್ಲಿ ಬೆವರಿಳಿಸುತ್ತಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಐಪಿಎಲ್‍ನಲ್ಲಿ 27 ವಿಕೆಟ್ ಪಡೆದಿದ್ದ ಚಾಹಲ್ ಮೊನ್ನೆ ಪಂದ್ಯದ ಒಂದೆ ಓವರ್‍ನಲ್ಲಿ 18 ರನ್ ಬಿಟ್ಟುಕೊಟ್ಟಿದ್ದು ನಾಯಕ ಪಂತ್‍ಗೆ ತಲೆ ನೋವಾಯಿತು.
ಅಬ್ಬರಿಸುತ್ತಿದ್ದಾರೆ ಐಪಿಎಲ್ ಸ್ಟಾರ್ಸ್
ಇನ್ನು ದ.ಆಫ್ರಿಕಾ ತಂಡದಲ್ಲಿ ಐಪಿಎಲ್‍ನಲ್ಲಿ ಮಿಂಚಿದ ಆಟಗಾರರು ಈ ಸರಣಿಯಲ್ಲೂ ಅಬ್ಬರಿಸುತ್ತಿದ್ದಾರೆ. ಸ್ಫೋಟಕ ಬ್ಯಾಟರ್ ಡೇವಿಡ್ ಮಿಲ್ಲರ್ ಗುಜರಾತ್ ಟೈಟಾನ್ಸ್ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಮಿಲ್ಲರ್ 68.71 ಸ್ಟ್ರೈಕ್ ರೇಟ್‍ನಲ್ಲಿ 481 ರನ್ ಚಚ್ಚಿದ್ದರು.
ಮತ್ತೊರ್ವ ಬ್ಯಾಟರ್ ಕ್ವಿಂಟಾನ್ ಡಿಕಾಕ್ ಐಪಿಎಲ್‍ನಲ್ಲಿ ಒಳ್ಳೆಯ ಆರಂಭ ನೀಡಲಿಲ್ಲ. ಆದರೆ ಟೂರ್ನಿಯಲ್ಲಿ 508 ರನ್ ಗಳಿಸಿದ್ದಾರೆ.
ವಾನ್ ಡೆರ್ ಡುಸೆನ್ ಕೂಡ ಸೋಟಕ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಕಗಿಸೊ ರಬಾಡ ಮತ್ತು ಆ್ಯನಿರಿಚ್ ನಾಟ್ರ್ಜೆ ಭಾರತೀಯ ಬ್ಯಾಟರ್‍ಗಳನ್ನು ಕಟ್ಟಿ ಹಾಕಲು ಶ್ರಮಿಸುತ್ತಿದ್ದಾರೆ.
ಸಂಭಾವ್ಯ ತಂಡಗಳು:
ಭಾರತ: ಋತುರಾಜ್ ಗಾಯಕ್ವಾಡ್, ಇಶನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಐಯ್ಯರ್, ಯಜ್ವಿಂದರ್ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಆರ್ಷದೀಪ್ ಸಿಂಗ್, ಉಮ್ರಾನ್ ಮಲ್ಲಿಕ್.
ದ,ಆಫ್ರಿಕಾ: ಟೆಂಬಾ ಬಾವುಮೆ (ನಾಯಕ), ಕ್ವಿಂಟಾನ್ ಡಿಕಾಕ್ (ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್‍ಘಿ, ಹೆನ್ರಿಚ್ ಕ್ಲಾಸೀನ್, ಕೇಶವ್ ಮಹಾರಾಜ್, ಏಡಿನ್ ಮಾರ್ಕ್‍ರಾಮ್, ಲುಂಗಿ ಗಿಡಿ, ಅನಿರಿಚ್ ನಾರ್ಟ್ಜೆ, ವಾಯ್ನೆ ಪರ್ನಲ್‍ಮ ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೇಜ ಸಂಶಿ, ಟ್ರಸ್ಟನ್ ಸ್ಟಬ್ಸ್, ರಾನ್ ವಾನ್ ಡೆರ್ ಡುಸನ್, ಮಾರ್ಕೊ ಹೆನ್ಸನ್.