- Advertisement -
Dharwad News: ಧಾರವಾಡ: ಅಣ್ಣಿಗೇರಿ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯ 2ನೇಯ ಅವಧಿಯಲ್ಲಿ ಅವಿರೋಧವಾಗಿ ಪಕ್ಷೇತರ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನ ಎಸ್ಟಿ ಮೀಸಲು ಇದ್ದ ಹಿನ್ನೆಲೆಯಲ್ಲಿ ಶಿವಾನಂದ ಬೆಳಹಾರ ಅಧ್ಯಕ್ಷರಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದಿದ್ದ ಕೈ ನಾಯಕರ ಪೈಪೋಟಿಯಲ್ಲಿ ನಾಗಪ್ಪ ದಳವಾಯಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
23ಜನ ಸದಸ್ಯರಿರುವ ಪುರಸಭೆಯಲ್ಲಿ 12ಜನ ಕಾಂಗ್ರೆಸ್, 5ಜನ ಬಿಜೆಪಿ ಹಾಗೂ 6ಜನ ಪಕ್ಷೇತರ ಸದಸ್ಯರಿದ್ದಾರೆ. ಈಗ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಇಬ್ಬರೂ ಕೂಡಾ ಪಕ್ಷೇತರರಾಗಿ ಗೆದ್ದು, ಕಾಂಗ್ರೆಸ್‌ಗೆ ಬೆಂಬಲ ನೀಡಿರುವುದನ್ನ ಸ್ಮರಿಸಬಹುದಾಗಿದೆ.
- Advertisement -