ವಿಶಾಖಪಟ್ಟಣ: ಮೊದಲೆರಡು ಪಂದ್ಯಗಳನ್ನು ಕೈಚೆಲ್ಲಿ ಸರಣಿ ಕೈಚೆಲ್ಲುವ ಭೀತಿಯಲ್ಲಿದ್ದ ಟೀಮ್ ಇಂಡಿಯಾ ದ,ಆಫ್ರಿಕಾ ವಿರುದ್ಧದ ಮೂರನೆ ಟಿ20 ಪಂದ್ಯದಲ್ಲಿ 48 ರನ್ ಜಯ ಸಾಧಿಸಿ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.
ಟಾಸ್ ಗೆದ್ದ ದ.ಆಫ್ರಿಕಾ ಫಿಲ್ಡಿಂಗ್ ಆಯ್ದುಕೊಂಡಿತು. ಋತುರಾಜ್ ಗಾಯಕ್ವಾಡ್ 57 ಹಾಗೂ ಇಶನ್ ಕಿಶನ್ 54 ಮೊದಲ ವಿಕೆಟ್ ಗೆ 97 ರನ್ ಸೇರಿಸಿದರು. ನಂತರ ಬಂದ ಶ್ರೇಯಸ್ ಅಯ್ಯರ್ 14, ನಾಯಕ ರಿಷಭ್ ಪಂತ್ 6, ಹಾರ್ದಿಕ್ ಪಾಂಡ್ಯ ಅಜೇಯ 21, ದಿನೇಶ್ ಕಾರ್ತಿಕ್ 6,ಅಕ್ಷರ್ ಪಟೇಲ್ ಅಜೇಯ 5 ರನ್ ಗಳಿಸಿದರು. ಭಾರತ ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು,.
180 ರನ್ ಗುರಿ ಬೆನ್ನತ್ತಿದ ದ.ಆಫ್ರಿಕಾ ತಂಡ ವೇಗಿ ಹರ್ಷಲ್ ಪಟೇಲ್ ಹಾಗೂ ಸ್ಪಿನ್ನರ್ ಯಜ್ವಿಂದರ್ ಚಾಹಲ್ ದಾಳಿಗೆ ತತ್ತರಿಸಿ ಹೋಯ್ತು.
ನಾಯಕ ಟೆಂಬಾ ಬಾವುಮೆ 8, ಹೆಂಡ್ರಿಕ್ಸ್ 23, ಡ್ವೇನ್ ಪ್ರಿಟೋರಿಯಸ್ 20, ವೆನ್ ಡೆರ್ ಡುಸೆನ್ 1, ಹನ್ರಿಕ್ಸ್ ಕ್ಲಾಸೆನ್ 29, ಡೇವಿಡ್ ಮಿಲ್ಲರ್ 3, ವಾಯ್ನೆ ಪರ್ನೆಲ್ 22 ರನ್ ಗಳಿಸಿದರು. ದ.ಆಫ್ರಿಕಾ 19.1 ಓವರ್ಗಳಲ್ಲಿ 131 ರನ್ ಗಳಿಗೆ ಆಲೌಟ್ ಆಯಿತು. ಹರ್ಷಲ್ ಪಟೇಲ್ 4 ಚಹಲ್ 3 ವಿಕೆಟ್ ಪಡೆದರು.